ಸೋಮವಾರದಂದು ಕೊಲೆಯಾದ ನಟಿ, ರಾಜಕಾರಣಿ ವಿದ್ಯಾರ ಕೊಲೆ ಆರೋಪಿ ಪತಿ ನಂದೀಶ್ ಅವರನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿ ನಂದೀಶ್ ಮಂಡ್ಯದಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದ್ದು, ಬನ್ನೂರು ಪೊಲೀಸ್ ಠಾಣೆಯ ಪೊಲೀಸರು ನಂದೀಶ್ ಅವರನ್ನು ಬಂಧಿಸಿದ್ದಾರೆ.
ಭಜರಂಗಿ ಸೇರಿದಂತೆ ಇನ್ನೂ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಹಾಗೂ ರಾಜಕಾರಣಿಯೂ ಆಗಿದ್ದ ವಿದ್ಯಾ ಎಂಬವರನ್ನು ಕೊಂದಿದ್ದ ಆಕೆ ಪತಿ ನಂದೀಶ್ ಅವರನ್ನು ಬಂಧಿಸಿದ್ದಾರೆ. ಮೇ 20 ರಂದು ತಡರಾತ್ರಿ ಮೈಸೂರಿನ ಟಿ.ನರಸೀಪುರ ತಾಲ್ಲೂಕು ತುರುಗನೂರಿನ ವಿದ್ಯಾರ ಪತಿ ನಂದೀಶ್ ಮನೆಯಲ್ಲಿ ಆಕೆಯ ಕೊಲೆಯಾಗಿದೆ. ತಲೆಗೆ ಸುತ್ತಿಗೆಯಿಂದ ಬಲವಾದ ಪೆಟ್ಟು ತಿಂದು ವಿದ್ಯಾ ಸಾವನ್ನಪ್ಪಿದ್ದರು . ಅಂದಿನಿಂದಲೂ ನಂದೀಶ್ ಪರಾರಿಯಾಗಿದ್ದರು, ಇದೀಗ ನಂದೀಶ್ ಅವರನ್ನು ಬಂಧಿಸಿದ್ದಾರೆ.
ವಿದ್ಯಾರ ಕೊಲೆ ಮಾಡಿದ್ದ ನಂದೀಶ್ ಮೈಸೂರಿನಿಂದ ಪರಾರಿಯಾಗಿದ್ದ. ಆತ ಮಂಡ್ಯದಲ್ಲಿ ತಲೆಮರೆಸಿಕೊಂಡಿದ್ದನ್ನು ಪತ್ತೆ ಹಚ್ಚಿದ ಪೊಲೀಸರು ಎರಡು ದಿನಗಳ ಕಾಲ ಆರೋಪಿಯನ್ನು ಬಂಧಿಸಿದ್ದಾರೆ. ಬನ್ನೂರು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ, ಅವರ ನೇತೃತ್ವದ ಆರೋಪಿ ನಂದೀಶ್ ಅವರನ್ನು ಬಂಧಿಸಿ ಬನ್ನೂರು ಠಾಣೆಗೆ ಕರೆತಂದಿದೆ. ನಾಳೆ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸುವ ನಿರೀಕ್ಷೆ ಇದೆ.