Breaking
Wed. Dec 25th, 2024

ದಾವಣಗೆರೆಯ ದುಗ್ಗಪ್ಪ ಕುಟುಂಬದವರು ಸುಳ್ಳು ದಾಖಲೆಗಳನ್ನು ನೀಡಿ 2010 ರಲ್ಲಿ ಈ ಜಾಗ ಕಬಳಿಕೆ…!

ಚಿತ್ರದುರ್ಗ, ಮೇ. 23 : ಆದಿ ಕರ್ನಾಟಕ ಜನಾಂಗದ ಮಕ್ಕಳ ಶಿಕ್ಷಣಕ್ಕಾಗಿ 1955 ರಲ್ಲಿ ಪುರಸಭೆ ನೀಡಿದ್ದ ಹಾಸ್ಟೆಲ್ ಜಾಗವನ್ನು ಕಸ್ತೂರಭಾ ವಿದ್ಯಾಭಿವೃದ್ದಿ ಸಂಘ ಎಂದು ಬದಲಾವಣೆ ಮಾಡಿಕೊಂಡು ಕೆಲವು ಪ್ರಭಾವಿಗಳ ಕುಟುಂಬದ ಪಾಲಾಗಿದ್ದ ಜಾಗವನ್ನು ಮರಳಿ ಪಡೆಯಲಾಗಿದೆ ಎಂದು ಕರ್ನಾಟಕ ರಾಜ್ಯ ಮಾದಿಗರ ಸಾಂಸ್ಕೃತಿಕ ಸಂಘದ ರಾಜ್ಯ ಸಮಿತಿ ಮಹಾ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಲ್ಲಿಕಾರ್ಜುನ್ ತಿಳಿಸಿದರು.
ಒಕ್ಕಲಿಗರ ಹಾಸ್ಟೆಲ್ ಪಕ್ಕದಲ್ಲಿರುವ ಆದಿ ಕರ್ನಾಟಕ ಹಾಸ್ಟೆಲ್ ಜಾಗದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ದಾವಣಗೆರೆಯ ದುಗ್ಗಪ್ಪ ಕುಟುಂಬದವರು ಸುಳ್ಳು ದಾಖಲೆಗಳನ್ನು ನೀಡಿ 2010 ರಲ್ಲಿ ಈ ಜಾಗ ಕಬಳಿಸಿದ್ದರು. ನಂತರ ನಾವುಗಳು ಕಳೆದ ಡಿಸೆಂಬರ್‍ನಲ್ಲಿ ಇದನ್ನು ಕೈಗೆತ್ತಿಕೊಂಡು ಹೋರಾಟ ನಡೆಸಿದ ಫಲವಾಗಿ ಹಾಸ್ಟೆಲ್ ಜಾಗ ನಮ್ಮ ಕೈಸೇರಿದೆ. ದಾವಣಗೆರೆಯ ಡಾ. ಜಿ.ಡಿ.ರಾಘವನ್ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದನ್ನು ಪತ್ತೆ ಹಚ್ಚಿದ್ದರಿಂದ ಮೂರು ದಿನದ ಹಿಂದೆ ನಗರಸಭೆ ಆದಿ ಕರ್ನಾಟಕ ಹಾಸ್ಟೆಲ್ ಎಂದು ವರ್ಗಾವಣೆ ಮಾಡಿಕೊಟ್ಟಿದೆ. ಮಾದಿಗ ಜನಾಂಗಕ್ಕೆ ಸೇರಿದ ಈ ಆಸ್ತಿ ಉಳಿಯಬೇಕಾದರೆ ಜನಾಂಗದ ಎಲ್ಲರೂ ಕೈಜೋಡಿಸಬೇಕೆಂದು ಹಿರೇಹಳ್ಳಿ ಮಲ್ಲಿಕಾರ್ಜುನ್ ವಿನಂತಿಸಿದರು.  ಕರ್ನಾಟಕ ರಾಜ್ಯ ಮಾದಿಗರ ಸಾಂಸ್ಕøತಿಕ ಸಂಘದ ರಾಜ್ಯಾಧ್ಯಕ್ಷ ಸಿ.ಕೆ.ಮಹೇಶ್ ಮಾತನಾಡಿ ದೊಡ್ಡ ಜನಾಂಗ ಮಾದಿಗರಿಗೆ ಇದೊಂದು ದೊಡ್ಡ ರೀತಿಯ ವಂಚನೆಯಾಗಿತ್ತು. ನಮಗೆ ಗೊತ್ತಿಲ್ಲದೆ ಮರೆಮಾಚಿರುವುದು ಅತ್ಯಂತ ಖಂಡನೀಯ.
ಎಪ್ಪತ್ತು ವರ್ಷದತನಕ ಮಾದಿಗರಿಗೆ ಹಕ್ಕುದಾರಿಕೆ ಇಲ್ಲದಂತೆ ಕೆಲವು ಪ್ರಭಾವಿಗಳು ಆದಿ ಕರ್ನಾಟಕ ಜನಾಂಗಕ್ಕೆ ಸೇರಿದ ಹಾಸ್ಟೆಲ್ ಆಸ್ತಿಯನ್ನು ಕಬಳಿಸಿದ್ದರು. ರಾಜ್ಯದಲ್ಲಿ ಮಾದಿಗರ ಆಸ್ತಿ ಎಲ್ಲೆಲ್ಲಿ ಪಟ್ಟಭದ್ರರ ವಶದಲ್ಲಿದೆಯೋ ಅಲ್ಲೆಲ್ಲಾ ಹೋರಾಟ ಮಾಡಿ ಉಳಿಸುತ್ತೇವೆ. ಪ್ರತಿ ಮನೆಯಿಂದ ಇಬ್ಬರನ್ನು ಮೆಂಬರ್‍ಗಳನ್ನಾಗಿ ಮಾಡಿಕೊಳ್ಳಬೇಕೆಂಬ ಆಲೋಚನೆಯಿದೆ. ಹಾಗಾಗಿ ದೊಡ್ಡ ಆಂದೋಲನ ಮಾಡುತ್ತೇವೆಂದರು.
ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಮಲ್ಲಣ್ಣ, ಡಿ.ದುರುಗೇಶ್, ನ್ಯಾಯವಾದಿ ಮಲ್ಲಿಕಾರ್ಜುನ್, ಸಿ.ಎ.ಚಿಕ್ಕಣ್ಣ, ಕೆ.ಕುಮಾರ್, ಹೆಚ್.ಆನಂದ್‍ಕುಮಾರ್, ಜಯಣ್ಣ, ಬ್ಯಾಲಾಳ್ ಜಯಣ್ಣ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *