Breaking
Wed. Dec 25th, 2024

ಬಿ.ಜೆ.ಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿರವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸುವಂತೆ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಶಿಕ್ಷಕರಲ್ಲಿ ಮನವಿ

ಚಿತ್ರದುರ್ಗ  : ವಿಧಾನಸಭೆಯಲ್ಲಿ ಮನ ಬಂದಂತೆ ಪಾಸ್ ಮಾಡುವ ಬಿಲ್‌ಗಳನ್ನು ವಿಧಾನಪರಿಷತ್‌ನಲ್ಲಿ ತಿರಸ್ಕರಿಸಬೇಕಾದರೆ ಬಹುಮತವಿರಬೇಕು. ಅದಕ್ಕಾಗಿ ಬಾರಿಯ ಆಗ್ನೇಯ ಈ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಿಜೆಪಿ. ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿರವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸುವಂತೆ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಶಿಕ್ಷಕರಲ್ಲಿ ಮನವಿ ಮಾಡಿದರು.
ರಾಷ್ಟ್ರೀಯ ಹೆದ್ದಾರಿ-13 ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವೈ.ಎ.ನಾರಾಯಣಸ್ವಾಮಿರವರ ಪರ ಬುಧವಾರ ಮತಯಾಚನೆ ಮಾಡಲಾಗಿದೆ.

ನರೇಂದ್ರಮೋದಿ ದೇಶದ ಪ್ರಧಾನಿಯಾದಿಂದಲೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಗೌರವ ಸಿಕ್ಕಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಮಾಡುವ ಕಾನೂನುಗಳನ್ನು ಮೇಲ್ಮನೆಗೆ ಕಳಿಸಿದಾಗ ಅಲ್ಲಿ ತೀರ್ಮಾನಿಸಲು ಪಕ್ಷಕ್ಕೆ ಬಹುಮತವಿರಬೇಕು. ಈ ವಿಧಾನಪರಿಷತ್ ಚುನಾವಣೆ ಅತ್ಯಂತ ಮಹತ್ವದ್ದು, ಮತ ಪಡೆಯುವುದಕ್ಕಾಗಿ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಗೆ ಮುನ್ನ ಉಚಿತ ಗ್ಯಾರೆಂಟಿಗಳನ್ನು ನೀಡಿ ಜನರ ಮನವೊಲಿಸಿತು.
ಪ್ರಧಾನಿ ನರೇಂದ್ರಮೋದಿರವರು ಏನು ಬೇಕಾದರೂ ಉಚಿತ ಗ್ಯಾರೆಂಟಿಗಳನ್ನು ನೀಡಬಹುದಿತ್ತು. ದೇಶ ದಿವಾಳಿಯಾಗಿಸಲು ಅವರಿಗೆ ಇಷ್ಟವಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಬ್ಬ ಮಹಿಳೆಗೆ ಒಂದು ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದೆ. ಅದಕ್ಕಾಗಿ 84 ಲಕ್ಷ ಕೋಟಿ ರೂ.ಗಳು. ಹಣ ಎಲ್ಲಿಂದ ತರುತ್ತಾರೆಂದು ಪ್ರಶ್ನಿಸಿದರು?ನರೇಂದ್ರಮೋದಿರವರ ಪಾರದರ್ಶಕ ಆಡಳಿತಕ್ಕೆ ಅಮೇರಿಕಾ, ಬ್ರಿಟನ್, ಜರ್ಮನ್, ರಷ್ಯಾದ ದೇಶಗಳಿಗೆ ನಡುಕ ಉಂಟಾಗಿದೆ. ಮತ್ತೊಮ್ಮೆ ಮೋದಿ ದೇಶದ ಪ್ರಧಾನಿಯಾಗುವುದು ಖಚಿತ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ್ ಮಾತನಾಡಿ ದೇಶದಲ್ಲಿ ನಿರುದ್ಯೋಗ ಹೋಗಲಾಡಿಸಬೇಕಾದರೆ ಮೊದಲು ಶಿಕ್ಷಣ ಬೇಕು. ಪ್ರಧಾನಿ ಮೋದಿಯವರು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಹೊರಟಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ ಇದು ಬೇಕಿಲ್ಲ. 6, 9 ನೇ ತರಗತಿಗೆ ಸಿ.ಬಿ.ಎಸ್.ಐ. ಐಸಿಎಸ್‌ಐ. ನಲ್ಲಿ ಬದಲಾವಣೆ ಪರ್ವ ಆರಂಭವಾಗಿದೆ.
ಅನರ್ಹರಿಗೆ ರಾಜ್ಯದಲ್ಲಿ ಅಧಿಕಾರ ಸಿಕ್ಕಿರುವುದು ಭವಿಷ್ಯಕ್ಕೆ ಮಾರಕವಾಗಿದೆ. ಎಸ್.ಎಂ.ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 2021-22 ರಲ್ಲಿ ಅನುದಾನಿತ ಶಾಲೆಗಳಿಗೆ ನೀಡಲಾಗಿದ್ದ ಅನುದಾನವನ್ನು ಹಿಂದಕ್ಕೆ ಪಡೆದ ಶಿಕ್ಷಕರ ಪರವಾಗಿ ದೊಡ್ಡ ಹೋರಾಟ ಮಾಡಿದೆ. ಖಾಸಗಿ ಶಿಕ್ಷಣ ವ್ಯವಸ್ಥೆಯು ರಾಜ್ಯದಲ್ಲಿ ಉಳಿದಿದೆ ಎನ್ನುವುದೆಂದರೆ ಅದು ಬಿ.ಎಸ್.
ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಕೋವಿಡ್‌ನಲ್ಲಿ ಜೀವಕ್ಕೆ ಹೆದರದ ಶಿಕ್ಷಕರಿಗೆ ಕಿಟ್‌ಗಳನ್ನು ನೀಡಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಬೇಕಾಗಿರುವ ಗಟ್ಟಿ ಧ್ವನಿಯುಳ್ಳ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಿ ಎಂದು ಶಿಕ್ಷಕರಿಗೆ ಮನವಿ ಮಾಡಿದರು.
ಸದನದಲ್ಲಿ ಶಿಕ್ಷಕರ ಬೇಡಿಕೆ, ಸಮಸ್ಯೆಗಳ ಬಗ್ಗೆ ಹಿಂದಿನಿಂದಲೂ ಜಗಳವಾಡ. ಶಿಕ್ಷಣ ವ್ಯವಸ್ಥೆ ಹೊಸ ಉತ್ತುಂಗಕ್ಕೆ ಹೋಗಬೇಕಾಗಿರುವುದರಿಂದ ಮುಂದಿನ ತಿಂಗಳು ಮೂರನೆ ತಾರೀಖು ನಡೆಯುವ ಚುನಾವಣೆಯಲ್ಲಿ ವೈ.ಎ.ನಾರಾಯಣಸ್ವಾಮಿ ಅವರನ್ನು ಗೆಲ್ಲಿಸಿ. ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಿ ಶಿಕ್ಷಕರಾಗಿದ್ದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ವೀರೇಶ್, ಬಿಜೆಪಿ. ಜಿಲ್ಲಾಧ್ಯಕ್ಷ ಎ.ಮುರಳಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ, ಶಿಕ್ಷಣ ಜಯಣ್ಣ ವೇದಿಕೆಯಲ್ಲಿದ್ದರು. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶೈಲಜಾರೆಡ್ಡಿ, ಬಿಜೆಪಿ. ವೈವೆ ಚಂದ್ರಿಕ ಲೋಕನಾಥ್, ನಗರ ಮಂಡಲದ ಅಧ್ಯಕ್ಷ ನವೀನ್ ಚಾಲುಕ್ಯ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್ ಬೇದ್ರೆ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಜಯಲಕ್ಷ್ಮಿ, ಉಪಪ್ರಾಂಶುಪಾಲರಾದ ಶಿವಕುಮಾರ್ ಈ ಸಂದರ್ಭದಲ್ಲಿದ್ದರು.

Related Post

Leave a Reply

Your email address will not be published. Required fields are marked *