ಚಿತ್ರದುರ್ಗ : ಹೊಳಲ್ಕೆರೆ ರಸ್ತೆ ಕನಕ ವೃತ್ತದ ಹತ್ತಿರವಿರುವ ಹಳ್ಳದ ಏರಿಯಾದಲ್ಲಿ ಒತ್ತುವರಿಯಾಗಿರುವ ರಾಜಕಾಲುವೆಯಲ್ಲಿ ಮಣ್ಣನ್ನು ಜೆ.ಸಿ.ಬಿ. ಮೂಲಕ ತೆಗೆಸಿ ಮಳೆ ನೀರು ಹರಿಯಲು ನೀರು.
ಅರಣ್ಯ ಇಲಾಖೆ ನಿವೃತ್ತ ನೌಕರರು ರಾಜ ಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಮಳೆ ಬಂದಾಗ ಸುಮಾರು ಐವತ್ತಕ್ಕೂ ಮನೆಗಳಿಗೆ ನೀರು ನುಗ್ಗುತ್ತದೆ. ಸಾಕಷ್ಟು ಬಾರಿ ಹಳ್ಳದ ಏರಿಯಾ ನಿವಾಸಿಗಳು ರಾಜ ಕಾಲುವೆ ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿಗೂ ಮನವಿ ಮಾಡಲಾಗಿದೆ. ಇದುವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ.
2022-23 ನೇ ಸಾಲಿನಲ್ಲಿಯೇ ಹಳ್ಳದ ಏರಿಯಾದಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರಗಳನ್ನು ಒದಗಿಸಲಾಗಿದೆ. ರಾಜಕಾಲುವೆ ಒತ್ತುವರಿಯಾಗಿರುವುದನ್ನು ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಾರೆ ಅಲ್ಲಿನ ನಿವಾಸಿಗಳ ಅಳಲು.
ನಗರಸಭೆ ಪೌರಾಯುಕ್ತರ ಭೇಟಿ : ನಗರಸಭೆ ಪೌರಾಯುಕ್ತರಾದ ಶ್ರೀಮತಿ ರೇಣುಕಾರವರು ಹಳ್ಳದ ಏರಿಯಾದಲ್ಲಿ ಮುಂದೆ ನಿಂತು ಜೆಸಿಬಿ ಸಹಾಯದಿಂದ ರಾಜ ಕಾಲುವೆಯಲ್ಲಿನ ಮಣ್ಣನ್ನು ತೆಗೆಸಿದರು.
ಚಂದ್ರವಳ್ಳಿ ಕೆರೆ ತುಂಬಿ ಕೋಡಿ ಬಿದ್ದರೆ ನೀರು ನುಗ್ಗಿ ಅನಾಹುತವಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ರಾಜ ಕಾಲುವೆ ಒತ್ತುವರಿಯಾಗಿರುವುದರ ಕುರಿತು ಸರ್ವೆ ನಡೆಸುವಂತೆ ಸರ್ವೆ ಇಲಾಖೆಗೆ ಕೇಳಿಕೊಂಡಿದ್ದೇವೆ. ಇದುವರೆವಿಗೂ ಅವರಿಂದ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ರಾಜಕಾಲುವೆಯಲ್ಲಿನ ಮಣ್ಣನ್ನು ತೆಗೆಸಲಾಯಿತು. ಮುಂದೆ ಸರ್ವೆ ಆದ ನಂತರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಪರಿಸರ ಇಂಜಿನಿಯರ್ ಜಾಫರ್, ಬಾಳೆಕಾಯಿ ಶ್ರೀನಿವಾಸ್, ಶುಭಾನುಲ್ ಮುಂತಾದವರು ಈ ಸಂದರ್ಭದಲ್ಲಿದ್ದರು.