ಬೆಂಗಳೂರು : ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ನಾವು ಹುಂಡಿಗೆ ಹಣ ಹಾಕೋದನ್ನ ನಾವು ನೋಡಿರುತ್ತೀವಿ. ಇಲ್ಲವೆಂದರೆ ತಮ್ಮಿಷ್ಟದ ಬೇಡಿಕೆಗಳು ಈಡೇರಲು ಹರಕೆ ಕಟ್ಟಿಕೊಳ್ಳುತ್ತಾರೆ. ಆದ್ರೆ ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ದೇವರ ಹುಂಡಿಗೆ ಚಿತ್ರ-ವಿಚಿತ್ರ ಕೊರಿಕೆಯ ಪತ್ರಗಳನ್ನ ಹಾಕಿರುವುದು ಕಂಡುಬಂದಿದೆ. ಇದನ್ನ ಕಂಡು ದೇವಸ್ಥಾನ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿ ನಕ್ಕಿದ್ದಾರೆ.
ದೇವಸ್ಥಾನ ಹುಂಡಿಗಳಲ್ಲಿ ಹಣದ ಬದಲು ಭಕ್ತರು ಚೀಟಿ, ಪತ್ರಗಳು ಪತ್ತೆಯಾಗಿವೆ. ಅಷ್ಟಕ್ಕೂ ಚಿತ್ರ, ವಿಚಿತ್ರ ಕೋರಿಕೆಯ ಪತ್ರಗಳು ಏನು? ಎಂಬುದನ್ನು ತಿಳಿಯುವ ಕುತೂಹಲವಿದ್ದರೆ ಮುಂದೆ ಓದಿ…
ಐಎಎಸ್ ಅಧಿಕಾರಿ ಜೊತೆಗೇ ಮದ್ವೆ ಮಾಡ್ಸು: “ಅಮ್ಮ ನಾನು ತಪ್ಪು ಮಾಡಿದೀನಿ ಕ್ಷಮಿಸಿ, ಹಿಂದೆ ಪತ್ರ ಬರೆದಾಗ ನಾನು ಗೋಪಿನಾಥ್ ಬಿಟ್ರೆ ಯಾರನ್ನೂ ಬೇರೆ ಯಾರನ್ನೂ ಮದುವೆಯಾಗದಂತೆ ಆಗದಂತೆ ಬಯಸಿದ್ದೆ. ಈಗ ಅವನು ನನಗೆ ಬೇಡ. ಆದಷ್ಟು ಬೇಗ ಮುಂದಿನ ವರ್ಷದಷ್ಟರಲ್ಲಿ ನನ್ನ ಮದುವೆ ಆಗುವಂತೆ ಮಾಡು. ಒಳ್ಳೆಯ ಹೆಸರು, ಕೀರ್ತಿ, ಹೃದಯವಂತ, ಗುಣವಂತ, ಸಿರಿವಂತ, ಐಶ್ವರ್ಯವಂತ ಹುಡುಗ ಆಗಿರಬೇಕು, ಯಾವ ಹೀರೋಗೂ ಕಡಿಮೆ ಇರಬಾರದು. ಅಷ್ಟು ಚೆನ್ನಾಗಿರೋ ಒಳ್ಳೆಯ ಐಎಎಸ್ ಅಧಿಕಾರಿ ಜೊತೆ ನನ್ನ ಮದುವೆ ಮಾಡಿಸು. ನನ್ನ ಗಂಡ ಬೇರೆ ಯಾವ ಹೆಂಗಸರನ್ನು, ಹುಡುಗಿಯರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು, ನನ್ನನ್ನ ಹೆಚ್ಚಾಗಿ ಪ್ರೀತಿ ಮಾಡಬೇಕು. ನಾನಂದ್ರೆ ಅವರಿಗೆ ಜೀವ ಆಗಿರಬೇಕು. ನನಗೆ ಮಕ್ಕಳು, ಮೊಮ್ಮಕ್ಕಳ ಜೊತೆ ಜೀವನ ಮಾಡಬೇಕು ಇಷ್ಟು ವರ್ಷ ಕಾದಿದ್ದಕ್ಕೆ ಒಳ್ಳೆ ಹುಡುಗ ಸಿಕ್ಕಿದ ಅಂತ ಆಡಿಕೊಳ್ಳೋರ ಬಾಯಿ ಮುಚ್ಚಿಸಬೇಕು ಅಂತಾ ಹುಡುಗ ಕೊಡು.
ಪತ್ರ – 02 ತಾಯಿ ಆಸ್ತಿ ಸಿಗಲಿ : ನನ್ನ ತಾಯಿ ಮನೆಯಿಂದ ನನಗೆ ಬರಬೇಕಾಗಿರುವ ಆಸ್ತಿ ಯಾವುದೇ ಅಡ್ಡಿಯಿಲ್ಲದೇ ನನ್ನ ಕೈಸೇರಬೇಕು. ಯಾವುದೇ ಅಡ್ಡಿ ಇಲ್ಲದೇ ನನಗೆ ಸಿಗೋತರಹ ಮಾಡು ತಾಯಿ.
ಪತ್ರ – 03 ಸಂಸಾರ ದೂರ ಆಗುವಂತೆ ಮಾಡು : ಅಮ್ಮ ತಾಯಿ ರಮ್ಯ ಮತ್ತು ಉಮೇಶ್ ಇಬ್ಬರು ದೂರು ಆಗುವಂತೆ ಮಾಡು. ಇವರಿಂದ ಒಂದು ಸಂಸಾರ ದೂರ ಆಗಿದೆ. ಅವರ ತಪ್ಪಿಗೆ ಶಿಕ್ಷೆ ಕೊಡು ತಾಯಿ ಎಂಬುದು ಭಕ್ತರೊಬ್ಬರ ಕೋರಿಕೆ.
ಪತ್ರ – 04 ಮಗನ ಮದುವೆ ನಡೆದು, ಜೀವನ ಚೆನ್ನಾಗಿರಲಿ :ಅಮ್ಮ-ತಾಯಿ ನಿನ್ನಲ್ಲಿ ನನ್ನದು ಒಂದು ಕೋರಿಕೆ ನನ್ನ ಮಗ ಶಶಾಂಕ್‌ಗೆ ಮತ್ತೆ ಮದುವೆ ಫಿಕ್ಸ್ ಆಗಿದೆ, ನಿಶ್ಚಿತಾರ್ಥ ಆಗಿದೆ. ನನ್ನ ಮಗನನ್ನ ಮದುವೆ ಆಗುತ್ತಿರುವ ಹುಡುಗಿ ರಮ್ಯ. ನನ್ನ ಮಗನ ಜೊತೆ ಚೆನ್ನಾಗಿರುವಂತೆ ಮಾಡು. ನನ್ನ ಜೊತೆ, ನಮ್ಮ ಮನೆಯವರ ಜೊತೆ ಸಂತೋಷದಿಂದ ಇರುವಂತೆ ಮಾಡು ಯಾವುದೇ ಬೇಜಾರು ಇಲ್ಲದೇ ಸಂಸಾರ ನಡೆಸಿಕೊಂಡು ಹೋಗುವಂತೆ ಮಾಡು ತಾಯಿ ಅಂತೆಲ್ಲ ಭಕ್ತರು ಚೀಟಿಗಳಲ್ಲಿ ಬರೆದು ಹುಂಡಿಗೆ ಹಾಕಿದ್ದಾರೆ.