Breaking
Tue. Dec 24th, 2024

ರೈತರ ಕೃಷಿ ಚಟುವಟಿಕೆಗಳಿಗೆ ಬಿತ್ತನೆ ಬೀಜ ರಸಗೊಬ್ಬರ ದಾಸ್ತಾನು ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ಅಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಒತ್ತಾಯ…!

ಚಳ್ಳಕೆರೆ, ಮೇ. 24 : 2023 ನೇ ಸಾಲಿನಲ್ಲಿ ಚಳ್ಳಕೆರೆ ತಾಲ್ಲೂಕಿನಲ್ಲಿ ಸಂಪೂರ್ಣ ಮಳೆ ಬಾರದೆ ರೈತರು ಕಂಗಾಲಾಗಿದ್ದಾರೆ, ಇತ್ತ ಬೆಳೆ ಒಣಗಿ ಹೋಗಿದ್ದು, ಅಲ್ಪಸ್ವಲ್ಪ ಕೂಡ ರೈತ ಕೈಗೆ ಸಿಕ್ಕಿದ್ದು 2024 ರ ಮುಂಗಾರು ಮಳೆ ಆರಂಭವಾಗಿದೆ, ರೈತರ ಕೃಷಿ ಚಟುವಟಿಕೆಗಳಿಗೆ ಬಿತ್ತನೆ ಬೀಜ ರಸಗೊಬ್ಬರ ದಾಸ್ತಾನು ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ಅಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಒತ್ತಾಯಿಸಿದರು.
ಶುಕ್ರವಾರ ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ತಹಶೀಲ್ದಾರ್ ರಹೇನ್ ಪಾಷಾ ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ,ರಾಜ್ಯ ಚಳ್ಳಕೆರೆ ತಾಲೂಕು ಬರಗಾಲ ಪೀಡಿತ ರೈತರಿಗೆ ನ್ಯಾಯಯುತವಾಗಿ ಬರುವ ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ರೈತರ ಖಾತೆಗೆ ಇನ್ನೂ ಜಮಾ ಆಗಿಲ್ಲ ದೇಶಕ್ಕೆ ಅನ್ನ ಕೊಡುವ ನಮ್ಮ ರೈತ ನಾಳುವ ಸರ್ಕಾರ ರೈತರ ಹೆಮ್ಮೆ ಪಡುವ ಕೆಲಸ, ಅಷ್ಟೇ ಅಲ್ಲದೆ ಬ್ಯಾಂಕಿನ ಅಧಿಕಾರಿಗಳು ರೈತರಿಗೆ ಬಂದ ಬೆಳೆ ವಿಮೆ ಹಾಗೂ ಬೆಳೆ ನಷ್ಟ ಪರಿಹಾರವನ್ನು ಸಾಲಕ್ಕೆ ಜಮ ಮಾಡಿಕೊಳ್ಳುತ್ತಿದ್ದಾರೆ .
ಸಾಲಕ್ಕೆ ಬೆಳೆ ವಿಮೆ ಪರಿಹಾರ ಜಮ ಮಾಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ತಾಲೂಕಿನಾದ್ಯಂತ ಮುಂಗಾರು ಮಳೆ ಆರಂಭವಾಗಿದ್ದು ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಬಿತ್ತನೆ ಬೀಜ ರಸಗೊಬ್ಬರ ದಾಸ್ತಾನು ಮಾಡುವಲ್ಲಿ ವಿಳಂಬ ಧೋರಣೆ ತೋರುವ ಮುನ್ನವೇ ಮಳೆ ಬರುವ ಸೂಚನೆ ನೀಡಿದ್ದು ರೈತರು ಬಿತ್ತನೆ ಹಾಗೂ ರಹಗೊಬ್ಬರ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ,ರೈತ ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರ ರೈತರ ಬಾಯಿಗೆ ಮಣ್ಣು ಹಾಕಿದೆ. ಆಕ್ರೋಶ ಭರಿತರಾಗಿ.
ರೈತರ ಹಕ್ಕೊತ್ತಾಯಗಳು : ಬೆಳೆ ವಿಮೆ ಬೆಳೆ ಪರಿಹಾರ, ರೈತರಿಗೆ ರಸಗೊಬ್ಬರ, ಸಕಾಲಕ್ಕೆ ವಿದ್ಯುತ್ ಸರಬರಾಜು, ರೈತರ ಸಾಲ ಮನ್ನಾ, ರೈತರಿಗೆ ಬೆಂಬಲ ಬೆಲೆ, ಇವನ್ನೆಲ್ಲ ಕೊಡಿಸಿದರೆ ಮಾತ್ರ ಒಬ್ಬ ರೈತ ದೇಶಕ್ಕೆ ಅನ್ನ ಹಾಕಲು ಸಾಧ್ಯ , , ನಾವು ಬೆಳೆಯದಿದ್ದರೆ ನೀವೇನು ತಿನ್ನುತ್ತೀರಿ ,,, ಸಿದ್ದರಾಮಯ್ಯ, ರೈತರ ಹೊಟ್ಟೆಗೆ ಬರೀ ಬೀಳ್ತೀವಿ ,,,, ರೈತರ ಹಿತ ಚಿಂತಕರಾಗಿ ಸಿದ್ದರಾಮಯ್ಯ ,,, ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟಿಸಲಾಗುವುದು ಎಂದು ಪ್ರಕಟಿಸಿದರು ,
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದ ಆರ್ ರೆಹಾನ್ ಪಾಷಾ ಬ್ಯಾಂಕ್ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ ರೈತರ ಹಣ ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು ಬೆಳೆ ಪರಿಹಾರ ಹಾಗೂ ವಿಮೆ ಕುರಿತಂತೆ ಪರಿಶೀಲನೆ ನಡೆಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.
ಇನ್ನು ಈ ಸಂದರ್ಭದಲ್ಲಿ ಆರ್ ಬಸವರಾಜ್, ತಿಪ್ಪೇಸ್ವಾಮಿ, ಪ್ರಗತಿಪರ ರೈತ ಆರ್.ಎ.ಡಿ. ದಯಾನಂದ್ ,ಶ್ರೀಕಂಠಮೂರ್ತಿ, ತಿಪ್ಪೇಸ್ವಾಮಿ, ದೇವನಹಳ್ಳಿ ರಾಜಣ್ಣ,ಚಂದ್ರಣ್ಣ, ರೈತ ಮಹಿಳೆ ಸೇರಿದಂತೆ ರೈತ ಭಾಗವಹಿಸಿದ್ದರು.

Related Post

Leave a Reply

Your email address will not be published. Required fields are marked *