ಬೆಂಗಳೂರು : ಸಹಕಾರಿ ರಂಗದಲ್ಲಿ ಮಹತ್ವದ ಹೆಗ್ಗುರುತುಗಳನ್ನು ಮೂಡಿಸುತ್ತಿರುವ ಶ್ರೀ ಚರಣ್ ಸೌಹಾರ್ದ ಕೋ ಆಪರೇಟೀವ್ ಬ್ಯಾಂಕ್ ನ 10 ನೇ ಶಾಖೆ ಸಹಕಾರಿ ನಗರ ಸಮೀಪದ ಕೊಡಿಗೆಹಳ್ಳಿಯಲ್ಲಿ ಮೇ 27 ರಂದು ಕಾರ್ಯಾರಂಭ ಮಾಡಲಿದೆ ಎಂದು ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷ ಬಿ.ವಿ. ದ್ವಾರಕಾನಾಥ್ ಹೇಳಿದರು.
ಮೇ.27 ರಂದು ರಾಜ್ಯ ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಪಿ.ಎಸ್. ದಿನೇಶ್ ಕುಮಾರ್ ನೂತನ ಶಾಖೆಯನ್ನು ಶುಭಾರಂಭ ಮಾಡಲಿದ್ದಾರೆ. ಹಿರಿಯ ಪತ್ರಕರ್ತ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ ಮತ್ತಿತರರು ಕಾರ್ಯಕ್ರಮ ದಲ್ಲಿ ಭಾಗಹಿಸಲಿದ್ದಾರೆ ಎಂದರು.
ಸಹಕಾರಿ ವಲಯದಲ್ಲಿ ಕಾಲು ಶತಮಾನಗಳ ಹಾದಿ ಸವೆಸಿರುವ ಶ್ರೀ ಚರಣ್ ಸೌಹಾರ್ದ ಕೋ ಆಪರೇಟೀವ್ ಬ್ಯಾಂಕ್ ಇದೀಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಈ ಮೂಲಕ ನಗರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಲಿದೆ ಎಂದು ಹೇಳಿದರು.
ತಮಗೆ ಸಹಕಾರಿ ವಲಯದಲ್ಲಿ ಐದು ದಶಕಗಳ ಅನುಭವವಿದ್ದು, ಇದನ್ನು ಬ್ಯಾಂಕ್ ಬೆಳವಣಿಗೆಗೆ ಬಳಸಿಕೊಳ್ಳ ಲಾಗುವುದು. ಶ್ರೀ ಚರಣ್ ಕೋ ಅಪರೇಟೀವ್ ಬ್ಯಾಂಕ್ ಅನ್ನು ಸಹಕಾರಿ ವಯದಲ್ಲಿ ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ಯುವುದು ತಮ್ಮ ಮಹತ್ವಾ ಕಾಂಕ್ಷೆಯ ಗುರಿಯಾಗಿದೆ ಎಂದರು.