ಕಳಸ : ಕಳಸ ಸಮೀಪದ ಕಾರಗದ್ದೆ ಎಂಬಲ್ಲಿ ಬೈಕ್ ಮತ್ತು ಖಾಸಗಿ ಬಸ್ ನಡುವೆ ಶುಕ್ರವಾರ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಬೈಕ್‌ನಲಿದ್ದ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಕಳಸದಿಂದ ಮಂಗಳೂರಿಗೆ ಹೋಗುತ್ತಿದ್ದ ಬಸ್ ಹಾಗೂ ಚಿಕ್ಕಮಗಳೂರು ಮೂಲದ ಇಬ್ಬರು ಯುವಕರು ಕುದುರೆಮುಖ ಕಡೆ ಜಲಪಾತಗಳನ್ನು ನೋಡಲು ಹೋಗುತ್ತಿರುವಾಗ ಪರಸ್ಪರ ಡಿಕ್ಕಿ ಸಂಭವಿಸಿದೆ. ಗಾಯಾಳುಗಳಿಗೆ ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.