ರಾಯಬಾಗ : ತಾಲೂಕು ಕಪ್ಪಲಗುದ್ದಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಹನುಮಾನ ದೇವರ ಓಕಳಿ ಶ್ರೀ ಅಡವಿಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಶನಿವಾರ ದಿ.25 ರಿಂದ ಸೋಮವಾರ ದಿ. 27ರ ವರೆಗೆ ಮೂರು ದಿನಗಳ ವರೆಗೆ ಓಕಳಿ ನೀರು ಎರಚುವುದು, ಟಗರಿನ ಕಾಳಗ, ಕುಸ್ತಿ ಪಂದ್ಯಾವಳಿ, ಭವ್ಯ ರಥೋತ್ಸವ, ಉರುಳುಸೇವೆ, ಅನ್ನ ದಾಸೋಹ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗುವವು.
ಶನಿವಾರ ದಿ: 25 ರಂದು ಸಂಜೆ 3ಗಂಟೆಗೆ ಶ್ರೀ ಬರಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ತುರಸಾ ತುರಸಿನ ಟಗರಿನ ಕಾಳಗ ಸ್ಪರ್ಧೆಯು ಜರುಗಲಿದ್ದು, 4 ತಿಂಗಳ ಮರಿಗಳ ಟಗರಿನ ಕಾಳಗ, 7 ತಿಂಗಳು ಮರಿಗಳ ಟಗರಿನ ಕಾಳಗ ಹಾಗೂ ಓಪನ್ ಟಗರಿನ ಕಾಳಗ ಸ್ಪರ್ಧೆಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ ನಿಂಗಪ್ಪ ಸನದಿ 9611548343, ಕರೆಪ್ಪ ಕಪ್ಪಲಗುದ್ದಿ 7760844396 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಅದೇ ದಿನ ಪುರುಷರ 55 ಕೆಜಿ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ : ಶ್ರೀ ಹನುಮಾನ ದೇವರ ಓಕಳಿ ಹಾಗೂ ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವ, ಭವ್ಯ ರಥೋತ್ಸ ನಿಮಿತ್ಯ ಗೆಳೆಯರ ಬಳಗ ಕಪ್ಪಲಗುದ್ದಿ ಹಾಗೂ ಬೆಳಗಾವಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ ರವಿವಾರ ದಿ: 26ರಂದು ಸಾಯಂಕಾಲ 5ಗಂಟೆಗೆ ಪುರುಷರ 55 ಕೆಜಿ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಈ ಕಬಡ್ಡಿ ಪಂದ್ಯವಳಿಯಲ್ಲಿ ಆಕರ್ಷಕ ಬಹುಮಾನಗಳಿದ್ದು ಹೆಚ್ಚಿನ ಮಾಹಿತಿಗಾಗಿ ಪವನ ಅಂಗಡಿ 9663510313, ಪ್ರವೀಣ ಪಾಟೀಲ 7619553976, ಸಾಗರ ಉದ್ದಪ್ಪಗೋಳ 9108707048 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ದಿ: 27ರಂದು ಸೋಮವಾರ ರಾತ್ರಿ 10ಗಂಟೆಗೆ ಮೀರಾ ಮೆಲೋಡಿಸ್ ಆರ್ಕೆಸ್ಟ್ರಾ ಆಂಡ್ ಸೌಂಡ್ ಸಿಸ್ಟಮ್ ಸಸಾಲಟ್ಟಿ ಇವರಿಂದ “ಹಾಸ್ಯ ರಸಮಂಜರಿ” ಕಾರ್ಯಕ್ರಮವು ಜರಗುವುದೆಂದು ಶ್ರೀ ಹನುಮಾನ ದೇವರ ಓಕುಳಿ ಹಾಗೂ ಅಡವಿಸಿದ್ದೇಶ್ವರ ಜಾತ್ರಾ ಕಮಿಟಿಯವರು ಪ್ರಕಟಿನಲ್ಲಿ ತಿಳಿಸಿದ್ದಾರೆ.