ಗೌರಿಬಿದನೂರು : ತಾಲ್ಲೂಕಿನ ಕುಡುಮುಲ ಕುಂಟೆಯ ಕೈಗಾರಿಕಾ ಪ್ರದೇಶದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ದಲ್ಲಿ 2024-25ನೇ ವರ್ಷದ ಡಿಪ್ಲೋಮಾ ತರಗತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಟೂಲ್ ಆಂಡ್ ಡೈಮೇಕಿಂಗ್ ಕೋರ್ಸಿನಲ್ಲಿ 60 ಸೀಟುಗಳು, ಮೆಕ್ಟ್ರಾನಿಕ್ಸ್ ಕೋರ್ಸ್‌ನಲ್ಲಿ 60 ಸೀಟುಗಳು ಮತ್ತು ನೂತನವಾಗಿ ಪ್ರಾರಂಭವಾಗಿರುವ ಡಿಪ್ಲೋಮಾ ಇನ್ ಪ್ರಿಷನ್ ಮ್ಯಾನುಫ್ಯಾಕ್ಟರಿಂಗ್ ಕೋರ್ಸ್‌ನಲ್ಲಿ 30 ಸೀಟುಗಳು ಲಭ್ಯವಿದೆ. 10ನೇ ತರಗತಿ ಉತ್ತೀರ್ಣರಾದವರು ದಾಖಲಾತಿಗೆ ಅರ್ಹರು. ಇಲ್ಲಿ ಕೋರ್ಸ್ ಪೂರೈಸಿದವರಿಗೆ ಶೇ.100ರಷ್ಟು ಉದ್ಯೋಗ ಖಾತ್ರಿ ಇರುತ್ತದೆ. ವಿಧ್ಯಾರ್ಥಿವೇತನ, ಬಾಲಕರು ಹಾಗೂ ಬಾಲಕಿಯರಿಗೆ ಹಾಸ್ಟೆಲ್ ಸೌಲಭ್ಯವಿದೆ. ಬಾಲಕಿಯರಿಗೆ ದಾಖಲಾತಿಯಲ್ಲಿ ಶೇ.33ರಷ್ಟು ಮೀಸಲಾತಿ ಇದೆ ಎಂದು ಪ್ರಾಂಶುಪಾಲ ಹರೀಶ್ ಕುಮಾರ್. ಹೆಚ್ಚಿನ ವಿವರಗಳಿಗೆ ಪ್ರಾಂಶುಪಾಲರು ಮೊ. 8884585436 ಗೆ ಸಂಪರ್ಕಿಸಬಹುದು.