Breaking
Thu. Dec 26th, 2024

ಮಕ್ಕಳ ಆಸ್ಪತ್ರೆಯಲ್ಲಿ  ಸಂಭವಿಸಿದ ಭಾರೀ ಬೆಂಕಿ ದುರಂತದಲ್ಲಿ  ಕನಿಷ್ಠ 6 ನವಜಾತ ಶಿಶುಗಳು ಸಾವು….!

ನವದೆಹಲಿ : ಶನಿವಾರ ತಡರಾತ್ರಿ ದೆಹಲಿಯ  ಮಕ್ಕಳ ಆಸ್ಪತ್ರೆಯಲ್ಲಿ  ಸಂಭವಿಸಿದ ಭಾರೀ ಬೆಂಕಿ ದುರಂತದಲ್ಲಿ  ಕನಿಷ್ಠ 6 ನವಜಾತ ಶಿಶುಗಳು ಸಾವನ್ನಪ್ಪಿದ್ದಾರೆ.
ಪೂರ್ವ ದೆಹಲಿಯ ವಿವೇಕ್ ವಿಹಾರ್ ಪ್ರದೇಶದ ಬೇಬಿ ಕೇರ್ ಸೆಂಟರ್‌ನಲ್ಲಿ ರಾತ್ರಿ 11:32ಕ್ಕೆ ಬೆಂಕಿ ಕಾಣಿಸಿಕೊಂಡಿತ್ತು. 16 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಬಂದು ಭಾನುವಾರ ಮುಂಜಾನೆಯವರೆಗೂ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
12 ನವಜಾತ ಶಿಶುಗಳನ್ನು ರಕ್ಷಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಐವರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಕಿ ಅನಾಹುತಕ್ಕೆ ನಿಖರ ಕಾರಣ ಏನು ಎಂದು ತಿಳಿದುಬಂದಿಲ್ಲ. 
ಆಸ್ಪತ್ರೆಯೊಳಗೆ ಇಡಲಾಗಿದ್ದ ಆಮ್ಲಜನಕ ಸಿಲಿಂಡರ್‌ಗಳೂ ಬೆಂಕಿಗೆ ಆಹುತಿಯಾಗಿವೆ. ಒಂದು ಆಸ್ಪತ್ರೆ ಕಟ್ಟಡ ಮತ್ತು ಎರಡು ಮಹಡಿಗಳು ವಸತಿ ಕಟ್ಟಡಗಳು ಬೆಂಕಿಯಿಂದ ಹಾನಿಗೊಳಗಾಗಿವೆ. 
ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಸಂಭವಿಸಿದ ದೊಡ್ಡ ಅಗ್ನಿ ದುರಂತ ಬೆನ್ನಲ್ಲೇ ಈ ಘಟನೆ ನಡೆದಿದೆ. ಗೇಮಿಂಗ್ ಸೆಂಟರ್‌ನಲ್ಲಿ ನಡೆದ ದುರ್ಘಟನೆಯಲ್ಲಿ 9 ಮಕ್ಕಳು ಸೇರಿದಂತೆ 24 ಮಂದಿ ಬಲಿಯಾಗಿದ್ದರು.

Related Post

Leave a Reply

Your email address will not be published. Required fields are marked *