ಚಿತ್ರದುರ್ಗದ ಜಿ.ಎಸ್. ಮಂಜುನಾಥ್‍ರವರನ್ನು ಪರಿಗಣಿಸುವಂತೆ ಕಾಂಗ್ರೆಸ್ ಮುಖಂಡರನ್ನು ಚಿತ್ರದುರ್ಗ ಎಸ್.ಸಿ. ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಎಸ್. ಜಯ್ಯಣ್ಣ ಒತ್ತಾಯ…!

ಚಿತ್ರದುರ್ಗ ಮೇ. 26 : ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್‍ನಲ್ಲಿ ಎಡಗೈ ಸಮುದಾಯಕ್ಕೆ ಸ್ಥಾನ ನೀಡುವುದಾದರೆ ಚಿತ್ರದುರ್ಗದ ಜಿ.ಎಸ್. ಮಂಜುನಾಥ್‍ರವರನ್ನು ಪರಿಗಣಿಸುವಂತೆ ಕಾಂಗ್ರೆಸ್ ಮುಖಂಡರನ್ನು ಚಿತ್ರದುರ್ಗ ಎಸ್.ಸಿ. ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಎಸ್. ಜಯ್ಯಣ್ಣ ಒತ್ತಾಯಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಹಲವಾರು ವರ್ಷಗಳ ಕಾಲ ಉತ್ತಮವಾದ ಸಂಘಟನೆಯನ್ನು ಮಾಡಿರುವ ಜಿ.ಎಸ್.ಮಂಜುನಾಥ್‍ರವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದರೆ ಚಿತ್ರದುರ್ಗ ಜಿಲ್ಲೆ ಮಾತ್ರವಲ್ಲದೆ ರಾಜ್ಯ ಪೂರ್ತಿಯಾಗಿ ಸಹಾಯವಾಗಲಿದೆ ಇದ್ದಲ್ಲದೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‍ರವರು ಇವರ ಸಮರ್ಥವನ್ನು ಗುರುತಿಸಿ ರಾಜ್ಯ ಆಸಂಘಟಿತ ಕಾರ್ಮಿಕ ವಿಭಾಗಕ್ಕೆ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದೆ ರೀತಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವುದರ ಮೂಲಕ ರಾಜ್ಯದಲ್ಲಿ ಎಡಗೈ ಸಮುದಾಯವನ್ನು ಗುರುತಿಸಬೇಕಿದೆ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾದ ಎನ್.ಡಿ.ಕುಮಾರ್ ಮಾತನಾಡಿ, ಜಿ.ಎಸ್.ಮಂಜುನಾಥ್‍ರವರು ಹಲವಾರು ವರ್ಷಗಳ ಕಾಲ ಕಾಂಗ್ರೆಸ್‍ನಲ್ಲಿ ಸಕ್ರಿಯವಾಗಿ ಕಾರ್ಯಕರ್ತರಾಗಿ ಸೇವೆಯನ್ನು ಮಾಡಿದ್ದಾರೆ ಅಲ್ಲದೆ ಪಕ್ಷದಲ್ಲಿ ವಿವಿಧ ರೀತಿಯ ಹುದ್ದೆಗಳನ್ನು ನಿರ್ವಹಿಸಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡಿದ್ದಾರೆ. ಇವರು ಪದವೀಧರರಾಗಿದ್ದು, ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದವರಾಗಿದ್ದಾರೆ. ವಿದ್ಯಾರ್ಥಿಯಿಂದಲೂ ಸಹಾ ವಿದ್ಯಾರ್ಥಿ ಕಾಂಗ್ರೆಸ್, ಯುವ ಕಾಂಗ್ರೆಸ್ ಮುಖಾಂತರ ಸುಮಾರು ಕಳೆದ 36 ವರ್ಷಗಳಿಂದಲೂ ಕಾಂಗ್ರೆಸ್‍ನಲ್ಲಿ ಸಕ್ರಿತವಾಗಿ ಇದ್ದಾರೆ.
ಎಲ್ಲಾ ಸಮಾಜದವರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಶಕ್ತಿ ಇವರಿಗಿದೆ. ಅತಿ ಹಿಂದುಳಿದ ಸೂಕ್ಷ್ಮ ಅತಿ ಸೂಕ್ಷ್ಮ ಜನಾಂಗದವನ್ನು ಗುರುತಿಸಿ ಅವರನ್ನು ಮೇಲೆತ್ತುವ ಜಾಣ್ಮೆ ಇದೆ ಜಿಲ್ಲೆಯಲ್ಲಿ ಯಾವುದೇ ಸಂಘಟನೆ ಬಂದರೂ ಸಹಾ ಜಿ.ಎಸ್.ಮಂಜುನಾಥ್ ರವರ ಹೆಸರು ಮುಂಚೂಣಿಯಲ್ಲಿರುತ್ತದೆ ಇದ್ದಾರೆ ಇವರಿಂದ ಕನಿಷ್ಠ 20,ಸಾವಿರಕ್ಕೂ ಹೆಚ್ಚು ಕುಟುಂಬಗಳು ನಿಮ್ಮದಿಯ ಜೀವನವನ್ನು ನಡೆಸುತ್ತಿವೆ. ಅವರ ಜೀವನಕ್ಕೆ ಭದ್ರತೆಯನ್ನು ಕಲ್ಪಿಸಿದ್ದಾರೆ. ರಾಜ್ಯದಲ್ಲಿ ಈಗಲೂ ಸಹಾ ಅವರು ಅಭೀಮಾನಿ ಬಳಗವನ್ನು ಹೊಂದಿದ್ದು ಅವರಿಂದ ಸಮಾಜ ಸೇವೆಯ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.
ಗೋಷ್ಟಿಯಲ್ಲಿ ಚಿತ್ರದುರ್ಗ ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾದ ,ಓಹನ್ ಪೂಜಾರಿ, ರವಿಕುಮಾರ್, ಆಸೋಕ ನಾಯ್ಡ, ಆಶ್ವಿಮ್ ಕುಮಾರ್, ಸುನೀಲ್ ಭಾಗವಹಿಸಿದ್ದರು.

Related Post

Leave a Reply

Your email address will not be published. Required fields are marked *