Breaking
Wed. Dec 25th, 2024
ಧಾರವಾಡ : ಮಳೆ ಸುರಿಯುವಾಗ, ಪ್ರಜ ಒಂದು ಕೈಯಲ್ಲಿ ಛತ್ರಿ ಹಿಡಿದು ಮತ್ತೊಂದು ಕೈಯಲ್ಲಿ ಸ್ಟೀರಿಂಗ್  ಹಿಡಿದು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಹನುಮಂತಪ್ಪ ಕಿಲ್ಲೇದಾರ ಅವರು ಬಸ್ ಚಾಲನೆ ಪಕ್ಷ ಮಾಡಿರುವ ವಿಡಿಯೊ ಸಾಮಾಜಿಕ  ಮಾಧ್ಯಮದಲ್ಲಿ ಹರಿದಾಡುತ್ತಿದೆ.  ಪ್ರಕರಣದಲ್ಲಿ ಚಾಲಕ  ಮತ್ತು ನಿರ್ವಾಹಕಿ ಅನಿತಾ ಅವರನ್ನು  ಅಮಾನತು ಮಾಡಲಾಗಿದೆ.
ಗುರುವಾರ ಮಧ್ಯಾಹ್ನ 4.30ರ ಸ್ಪಷ್ಟ ವೇಳೆಯಲ್ಲಿ ಮಳೆ ಸುರಿಯುವಾಗ ವಿಡಿಯೊ ಮಾಡಿದ್ದಾರೆ. ಬಸ್‌ನಲ್ಲಿ  ಪ್ರಯಾಣಿಕರು ಇರಲಿಲ್ಲ. ಉಪ್ಪಿನಬೆಟ್ಟ- ಗೇರಿಯಿಂದ ಧಾರವಾಡ ಕಡೆಗೆ ಬಸ್ ಯ ಸಂಚರಿಸುವಾಗ ಚಾಲಕ ಕೈಯಲ್ಲಿ ಕೊಡೆ  ಹಿಡಿದು ಚಾಲನೆ ಮಾಡಿದ್ದಾರೆ’ ಎಂದು ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ ತಿಳಿಸಿದ್ದಾರೆ.
ನಿರ್ವಾಹಕಿ ಅನಿತಾ ಎಚ್.ಬಿ.  ಅವರು ಮೊಬೈಲ್ ಫೋನ್‌ನಲ್ಲಿ ವಿಡಿಯೊ  ಮಾಡಿದ್ದಾರೆ. ಮನರಂಜನೆಗಾಗಿ ಮಳೆ ಸುರಿಯುವಾಗ ಛತ್ರಿ ಹಿಡಿದು ಬಸ್ ಚಾಲನೆ 2 ಮಾಡಿದೆ ಎಂದು ಚಾಲಕ ವಿವರಣೆ ನೀಡಿದ್ದಾರೆ. ತಾಂತ್ರಿಕ ವಿಭಾಗದವರು  ವಾಹನವನ್ನು ಪರಿಶೀಲನೆ ಮಾಡಿದ್ದಾರೆ. ಬಸ್‌ನಲ್ಲಿ ಚಾಲಕನ ಆಸನ ಭಾಗ ಮತ್ತು ಪ್ರಯಾಣಿಕರ ಅಸನ ಭಾಗದಲ್ಲಿ ಎಲ್ಲಿಯೂ ಈ ಸೋರಿಕೆಯಾಗುತ್ತಿರಲಿಲ್ಲ ಎಂದು ಖಚಿತಪಡಿಸಿದ್ದಾರೆ. ಚಾಲಕ ಮತ್ತು ನಿರ್ವಾಹಕಿಯನ್ನು ಅಮಾನತುಗೊಳಿಸಲಾಗಿದೆ’  ಎಂದು ಅವರು ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *