Breaking
Thu. Dec 26th, 2024
ನಟ ಸಲ್ಮಾನ್ ಖಾನ್  ಅವರು ಮುಂದಿನ ಸಿನಿಮಾದ ತಯಾರಿಯಲ್ಲಿ ಬ್ಯುಸಿ ಆಗಿದ್ದಾರೆ. ಈ ಬಾರಿ ಅವರು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ ಜೊತೆ ಕೈ ಜೋಡಿಸಿದ್ದಾರೆ. ಈ ಸಿನಿಮಾಗೆ ‘ಸಿಕಂದರ್’  ಎಂದು ಶೀರ್ಷಿಕೆ ಇಡಲಾಗಿದೆ. ಸಲ್ಮಾನ್ ಖಾನ್ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿರುವ ಈ ಸಿನಿಮಾದ ಬಗ್ಗೆ ಒಂದು ಎಗ್ಸೈಟಿಂಗ್ ನ್ಯೂಸ್ ಕೇಳಿಬಂದಿದೆ.
‘ಸಿಕಂದರ್’ ಸಿನಿಮಾದಲ್ಲಿ ‘ಬಾಹುಬಲಿ’ ಖ್ಯಾತಿಯ ನಟ ಸತ್ಯರಾಜ್  ಅವರು ವಿಲನ್ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಪೋಸ್ಟ್ಗಳು ಹರಿದಾಡುತ್ತಿವೆ.
‘ಬಾಹುಬಲಿ’ ಸಿನಿಮಾದಲ್ಲಿ ಸತ್ಯರಾಜ್ ಅವರು ಕಟ್ಟಪ್ಪ ಎಂಬ ಪಾತ್ರ ಮಾಡಿ ಸಖತ್ ಫೇಮಸ್ ಆದರು. ದಕ್ಷಿಣ ಭಾರತ ಮಾತ್ರವಲ್ಲದೇ ಉತ್ತರ ಭಾರತದಲ್ಲೂ ಅವರಿಗೆ ತುಂಬ ಜನಪ್ರಿಯತೆ ಸಿಕ್ಕಿತು. ಈಗ ಅವರು ಸಲ್ಮಾನ್ ಖಾನ್ ಎದುರು ವಿಲನ್ ಆಗಿ ಅಬ್ಬರಿಸಿದರೆ ಅವರ ಚಾರ್ಮ್ ಇನ್ನಷ್ಟು ಹೆಚ್ಚಾಗಲಿದೆ. ಆದರೆ ಈ ವಿಷಯವನ್ನು ಚಿತ್ರತಂಡದವರು ಅಧಿಕೃತವಾಗಿ ಹೇಳುವುದು ಬಾಕಿ ಇದೆ. ಅದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.
ಸಲ್ಮಾನ್ ಖಾನ್ ನಟಿಸಿದ್ದ ‘ಟೈಗರ್ 3’ ಸಿನಿಮಾ 2023ರಲ್ಲಿ ಬಿಡುಗಡೆ ಆಯಿತು. 2024ರಲ್ಲಿ ಅವರು ಯಾವುದೇ ಸಿನಿಮಾ ಬಿಡುಗಡೆ ಆಗುವುದಿಲ್ಲ. 2025ರಲ್ಲಿ ‘ಸಿಕಂದರ್’ ಬಿಡುಗಡೆ ಆಗಲಿದೆ. ದೊಡ್ಡ ಗ್ಯಾಪ್ ಆಗಲಿರುವುದರಿಂದ ಅಭಿಮಾನಿಗಳು ಹೆಚ್ಚು ಕಾತರದಿಂದ ಕಾಯುತ್ತಿರುತ್ತಾರೆ. ಅದಕ್ಕೆ ತಕ್ಕಂತೆ ಈ ಸಿನಿಮಾವನ್ನು ಮಾಡಬೇಕಿದೆ. ಸಾಜಿದ್ ನಾಡಿಯದ್ವಾಲಾ ಅವರು ‘ಸಿಕಂದರ್’ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.
‘ಸಿಕಂದರ್’ ಸಿನಿಮಾದಲ್ಲಿ ಸೌತ್ ಮಂದಿಯ ಪ್ರಾಬಲ್ಯ ಇರಲಿದೆ. ಎ.ಆರ್. ಮುರುಗದಾಸ್ ಅವರು ದಕ್ಷಿಣ ಭಾರತದವರು. ವಿಲನ್ ಪಾತ್ರ ಮಾಡುತ್ತಾರೆ ಎನ್ನಲಾದ ಸತ್ಯರಾಜ್ ಕೂಡ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರು ಮಾಡಿದವರು. ಅದೇ ರೀತಿ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಕೂಡ ದಕ್ಷಿಣ ಭಾರತದ ಪ್ರತಿಭೆ. ಆ ಕಾರಣದಿಂದಲೂ ‘ಸಿಕಂದರ್’ ಸಿನಿಮಾ ವಿಶೇಷ ಎನಿಸಿಕೊಳ್ಳಲಿದೆ.
ಕೆಲವೇ ದಿನಗಳ ಹಿಂದೆ ಸತ್ಯರಾಜ್ ಬಗ್ಗೆ ಒಂದು ಗಾಸಿಪ್ ಹಬ್ಬಿತ್ತು. ನರೇಂದ್ರ ಮೋದಿ ಬಯೋಪಿಕ್ನಲ್ಲಿ ಸತ್ಯರಾಜ್ ಅವರು ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಆ ಸುದ್ದಿ ನಿಜವಲ್ಲ ಎಂದು ಸ್ವತಃ ಸತ್ಯರಾಜ್ ಅವರು ಸ್ಪಷ್ಟಪಡಿಸಿದ್ದರು.

Related Post

Leave a Reply

Your email address will not be published. Required fields are marked *