ಚಿತ್ರದುರ್ಗ, ಮೇ.27 : ನನ್ನ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ನನ್ನ ಹೇರ್ ಕಟ್ ಮಾಡುವವರು ಫ್ರೀ ಇಲ್ಲ. ವಿಜಯೇಂದ್ರ ಫ್ರೀ ಇದ್ದರೆ ಬಂದು ಹೇರ್ ಕಟ್ ಮಾಡಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರುಗೇಟ ನೀಡಿದ್ದಾರೆ.
ಚಿತ್ರದುರ್ಗಕ್ಕೆ ಬರುವ ಮಧು ಬಂಗಾರಪ್ಪ ಅವರು ಕಟಿಂಗ್ ಮಾಡಿಸಿಕೊಂಡು, ತಲೆಗೆ ಎಣ್ಣೆ ಹಚ್ಚಿಕೊಂಡು, ತಲೆ ಬಾಚಿಕೊಂಡು ಚಿತ್ರದುರ್ಗಕ್ಕೆ ಬರಲಿ ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದರು. ಇದಕ್ಕೆ ಗೆಂ ಆದ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದು, ಜೂನ್ 4ರಂದು ಅವರ ಹಣೆ ಬರಹ ಅವರು ನೋಡಿಕೊಳ್ಳಲಿ. ನನ್ನ ಹಣೆ ಬರಹ ನಾವು ನೋಡಿಕೊಳ್ತೇವೆ.
ಇಷ್ಟು ವರ್ಷ ಅವರು ಹೊಲಸು ಮಾಡಿದ್ದನ್ನ ನಾವು ಸರಿ ಮಾಡುತ್ತಿದ್ದೇವೆ. ಪಠ್ಯ ಪುಸ್ತಕ ಪರಿಷ್ಕರಣೆ ಪ್ರಣಾಳಿಕೆಯಲ್ಲೂ ಹಾಕಿ ಮಾಡಿದ್ದೇವೆ. ಇವರ ಹಣೆ ಬರಹಕ್ಕೆ ಶಿಕ್ಷಕರ ನೇಮಕಾತಿ ಮಾಡಲು ಆಗಿಲ್ಲ, ನಾವು ಬಂದ ಬಳಿಕ ನೇಮಕಾತಿ ಮಾಡಿದ್ದೇವೆ. ಶಿಕ್ಷಣದ ಪವಿತ್ರತೆ ಕೂಡಾ ಕಾಂಗ್ರೆಸ್ ಪಕ್ಷ ಕಾಪಾಡಿದೆ. ಮಕ್ಕಳ ಹಿತ ದೃಷ್ಟಿಯಿಂದ ಕೆಲ ನಿರ್ಧಾರ ಮಾಡಿದ್ದೇವೆ. ಮಾಜಿ ಮಂತ್ರಿ ಎನ್. ಮಹೇಶ್ ಪಠ್ಯದಲ್ಲಿ ಕೆಟ್ಟ ಬುದ್ದಿ ಹಾಕಿದ್ದರು.
ಕೆಲ ವೇಳೆ ನನಗೆ ಕನ್ನಡ ಶಬ್ದ ಕಷ್ಟ ಆಗಿದೆ, ಟ್ರೋಲ್ ಮಾಡೊದ್ರಿಂದ ಅವರಿಗೆ ಹೊಟ್ಟೆ ತುಂಬುತ್ತೆ. ನಮ್ಮ ಪಠ್ಯ ಪುಸ್ತಕ ಶುದ್ದಿಯಾಗಿ, ಪರಿಷ್ಕರಣೆ ಮಾಡಲಾಗಿದೆ. ಟೀಕೆ ಟಿಪ್ಪಣಿಯೇ ಇಲ್ಲವೂ ಅಲ್ಲ ಚಿತ್ರ ಮಂದಿರಕ್ಕೆ ಹೋಗಿ ಸಿನಿಮಾ ಪುಕ್ಸಟೆ ನೋಡಿ ಮಜಾ ಮಾಡ್ತಾರೆ, ವಿರೋಧ ಪಕ್ಷದಲ್ಲಿ ಇದ್ದು ಟೀಕೆ ಟಿಪ್ಪಣಿ ಮಾಡಬಾರ್ದು. ಉತ್ತಮ ಕೆಲಸ ಮಾಡಿದಾಗ ದ್ವನಿ ಕೊಡಬೇಕು.
ನಮ್ಮ ಸರ್ಕಾರ ಬಂದಿದ್ದು ಅವರಿಗೆ ಹೊಟ್ಟೆ ಉರಿಯಾಗಿದೆ ಎಂದರು. ಇದೇ ವೇಳೆ ವಿಜಯೇಂದ್ರ ಮಾತಿಗೆ ತಿರುಗೇಟು ನೀಡಿ, ನನ್ನ ಹೇರ್ ಕಟ್ ಮಾಡೋರು ಫ್ರೀ ಇಲ್ಲ. ವಿಜಯೇಂದ್ರ ಫ್ರೀ ಇದ್ರೆ ಬಂದು ಹೆರ್ ಕಟ್ಟಿಂಗ್ ಮಾಡಲಿ ಎಂದು ಲೇವಡಿ ಮಾಡಿದರು.