ಚಿತ್ರದುರ್ಗ, ಮೇ. 27 : ಕೆಎಸ್ ಆರ್ ಟಿಸಿ ಬಸ್ ಹರಿದು ಕುರಿಗಾಹಿ ಹಾಗೂ 21 ಕುರಿಗಳು ಸಾವನ್ನಪ್ಪಿರುವ ದಾರುಣ ಘಟನೆ ತಾಲೂಕಿನ ಈರಜ್ಜನಹಟ್ಟಿಯಲ್ಲಿ ಬಳಿ ಸಂಭವಿಸಿದೆ.
ಮೃತನನ್ನು ಚಳ್ಳಕೆರೆ ತಾಲ್ಲೂಕಿನ ನೆಲಗೇತನಹಟ್ಟಿಯ ರಾಜಪ್ಪ (30) ಎಂದು ಗುರುತಿಸಲಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೋರ್ವ ಕುರಿಗಾಹಿ ತಿಪ್ಪಣ್ಣ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುರಿ ಮೇಯಿಸಲು ನೇಲಗತನಹಟ್ಟಿ ಗ್ರಾಮದಿಂದ ಚನ್ನಗಿರಿಗೆ ತೆರಳಿದ್ದರು. ಈ ವೇಳೆ ಮಳೆ ಬಂದ ಕಾರಣ ಸ್ವ- ಗ್ರಾಮಕ್ಕೆ ವಾಪಸ್ ಬರುತ್ತಿರುವಾಗ ಈರಜ್ಜನಹಟ್ಟಿ ಬಳಿ ಸರ್ಕಾರಿ ಬಸ್ ಹರಿದು 2 ಲಕ್ಷಕ್ಕೂ ಹೆಚ್ಚು ಮೌಲ್ಯದ 21 ಕುರಿಗಳ ಸಾವನ್ನಪ್ಪಿದ್ದು, ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.