ಚಿತ್ರದುರ್ಗ : ಕಾರ್ಯಸ್ಥಳದಲ್ಲಿ ಉದ್ಯೋಗಿಗಳ ಸುರಕ್ಷತೆಯನ್ನು ಸತತವಾಗಿ ಹೆಚ್ಚಿಸುವ ನಮ್ಮ ವಿನ್ಯಾಸದ ಭಾಗವಾಗಿ ಎರಡನೇ ಸ್ಲೋಪ್ ಸ್ಟೆಬಿಲಿಟಿ ರೆಡಾರ್(ಎಸ್‌ಎಸ್‌ಆರ್) ಅನ್ನು ಅಳವಡಿಸಲಾಗಿದೆ. ಜೊತೆಗೆ ನಮ್ಮ ಕಾರ್ಯಾಚರಣೆಯನ್ನು ಕೇಂದ್ರೀಕೃತವಾದ ನಮ್ಮ ಕಾರ್ಯಪಡೆಯ ಯೋಗಕ್ಷೇಮವನ್ನು ಇದು ನೋಡಿಕೊಳ್ಳುತ್ತದೆ. ನಮ್ಮ ಕಾರ್ಯಾಚರಣೆಯಲ್ಲಿ ಸುಸ್ಥಿರತೆಯನ್ನು ಮತ್ತಷ್ಟು ಸುಧಾರಿಸುವ ವೇದ್ಯ ಕೂಡ ಇದು ಮತ್ತೊಂದು ಹೆಜ್ಜೆಯಾಗಿದೆ ಎಂದು ಸೇಸ ಗೋ ಗಣಿಗಳ ಮುಖ್ಯ ಕಾರ್ಯಾಚರಣೆ ಅಧಿಕಾರಿ ವಿನೋದ್ ಕುಮಾರ್ ಹೇಳಿದರು.
ವೇದಾಂತ ಐರನ್ ಓರ್ ಕರ್ನಾಟಕ(ಐಒಕೆ) ಸಂಸ್ಥೆಯು ಚಿತ್ರದುರ್ಗದ ತನ್ನ ಗಣಿಗಾರಿಕೆ ಸಂಕೀರ್ಣದಲ್ಲಿ 2ನೇ ಸ್ಲೋಪ್ ಸ್ಟೆಬಿಲಿಟಿ ರೆಡಾರ್(ಎಸ್‌ಎಸ್‌ಎಸ್‌ಆರ್) ಅನ್ನು ಇದೇ ಮೇ 10 ರಂದು ಅಳವಡಿಸಲಾಯಿತು. ಸಂಸ್ಥೆಗೆ ಮೈಲುಗಲ್ಲಾದಂತಹ ಈ ಕಾರ್ಯಕ್ರಮ ತನ್ನ ಕಾರ್ಯಾಚರಣೆಗಳಲ್ಲಿ ಸುರಕ್ಷತೆ ಮತ್ತು ತಾಂತ್ರಿಕ ಉನ್ನತೀಕರಣಕ್ಕೆ ಆದ್ಯತೆ ನೀಡುವ ವೇದಾಂತ ಐಒಕೆಯ ಬದ್ಧತೆಯನ್ನು ಬಿಂಬಿಸುತ್ತದೆ.
ಗಣತಿಯಲ್ಲಿ ಇಳಿಜಾರುಗಳಲ್ಲಿ ಯಾವುದೇ ಅಸ್ಥಿರತೆಯನ್ನು ತಕ್ಷಣ ಗುರುತಿಸುವ ಅತ್ಯಾಧುನಿಕ ತಂತ್ರಜ್ಞಾನ ಎಸ್‌ಎಸ್‌ಆರ್ ಆಗಿದೆ. ಇದರೊಂದಿಗೆ ಕಾರ್ಯಪಡೆ ಮತ್ತು ಮೂಲಸೌಕರ್ಯದ ಕ್ಷೇಮವನ್ನು ಕಾಯುವ ಖಾತ್ರಿ ಮಾಡಿಕೊಳ್ಳುವುದರೊಂದಿಗೆ ಅಪಾಯಗಳನ್ನು ನಿವಾರಿಸುತ್ತದೆ. ಎಸ್‌ಎಸ್‌ಆರ್‌ಆರ್ ದೂರದಿಂದಲೇ ಕಲ್ಲಿನ ಇಳಿಜಾರುಗಳನ್ನು ಸ್ಕ್ಯಾನ್ ಮಾಡಿ ಇಳಿಜಾರುಗಳ ಚಲನೆಯನ್ನು ಸತತವಾಗಿ ಅಳೆದು ಗೋಡೆಗಳ ಚಲನೆಯನ್ನು ಮಿಲಿಮೀಟರ್‌ಗೂ ಕಡಿಮೆ ನಿಖರತೆಯಲ್ಲಿ ಗಮನಿಸಿ ಎಂದು ಹೇಳಿದರು.
ಗಣಿಗಾರಿಕೆ ಉದ್ಯಮದ ಚಲನಶೀಲ ಕ್ಷೇತ್ರದಲ್ಲಿ ನಾವು ಸಾಗುತ್ತಿರುವಾಗ ಅಪಾಯಗಳನ್ನು ನಿವಾರಿಸಲು ಮತ್ತು ನಮ್ಮ ಪ್ರದರ್ಶನವನ್ನು ಗರಿಷ್ಟಗೊಳಿಸಲು ಅತ್ಯಾಧುನಿಕ ತಂತ್ರಜ್ಞಾನಗಳು ಕಡ್ಡಾಯವಾಗಿದೆ. ಸುರಕ್ಷತೆ, ನವೀನತೆ ಮತ್ತು ಸುಸ್ಥಿರತೆಗಳಿಗೆ ನಮ್ಮ ಬದ್ಧತೆಯನ್ನು ಈ ಉಪಕ್ರಮ ಪುನರ್ನಿರ್ಮಿಸುತ್ತದೆ. ನಾವು ಒಂದಾಗಿ ಉತ್ಕøಷ್ಟತೆಗಾಗಿ ಶ್ರಮಿಸುವೆವು ಅಲ್ಲದೆ, ಕೈಗಾರಿಕೆಯಲ್ಲಿ ನೂತನ ಕಟ್ಟಡಗಳನ್ನು ಸ್ಥಾಪಿಸುವುದರ ಜೊತೆಗೆ ನಮ್ಮ ಸಮುದಾಯ ಮತ್ತು ಪರಿಸರಕ್ಕಾಗಿ ಸಕಾರಾತ್ಮಕ ಬದಲಾವಣೆಗೆ ಚಾಲನೆ ನೀಡುತ್ತೇವೆ” ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಸೆಸಾ ಗೋವಾದ ಗಣಿಗಾರಿಕೆ ವಿಭಾಗದ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವೇದಾಂತ ಐಒಕೆನ ಮುಖ್ಯ ನಿರ್ವಾಹಕ ಅಧಿಕಾರಿ ಶ್ರೀಶೈಲ ಗೌಡ ಅವರು ಸ್ಲೋಪ್ ಸ್ಟೆಬಿಲಿಟಿ ರೆಡಾರ್‌ನ ಅನುಷ್ಠಾನ ಕುರಿತು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿ ಮಾತನಾಡಿ, ಐಒಕೆನಲ್ಲಿ ಸುರಕ್ಷತೆಯ ಉನ್ನತ ಪ್ರಾಮುಖ್ಯತೆಯನ್ನು ಹೊಂದಿದೆ. ಸಂಸ್ಥೆಯ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವಲ್ಲಿ ಸ್ಲೋಪ್ ಸ್ಟೆಬಿಲಿಟಿ ರೆಡಾರ್ ಪ್ರಮುಖ ಪಾತ್ರವಹಿಸಲಿದೆ. ಗಣಿಗಾರಿಕೆ ಪ್ರದೇಶದ ಇಳಿಜಾರು ಸ್ಥಿರತೆಯನ್ನು ಸತತವಾಗಿ ಗಮನಿಸಲು ಉನ್ನತ ರೆಡಾರ್ ತಂತ್ರಜ್ಞಾನವನ್ನು ಬಳಸುತ್ತದೆ. ಈ ಇಳಿಜಾರು ಸಂಭಾವ್ಯ ಚಲನೆಗಳ ಬಗ್ಗೆ ನಿಖರವಾದ ದತ್ತಾಂಶಗಳನ್ನು ನೀಡಿ ಶೀಘ್ರ ಎಚ್ಚರಿಕೆಗಳನ್ನು ಪೂರೈಸುತ್ತದೆ. ಇದರೊಂದಿಗೆ ಅಪಘಾತಗಳನ್ನು ತಪ್ಪಿಸಲು ಮತ್ತು ಕಾರ್ಯಾಚರಣೆಯಲ್ಲಿ ಅಡೆತಡೆಯನ್ನು ತಡೆಯುವುದನ್ನು ತಡೆಯಲು ಎಸ್‌ಎಸ್‌ಎಸ್ ನಮ್ಮನ್ನು ಸಬಲೀಕರಿಸುತ್ತದೆ” ಎಂದು ಹೇಳಿದರು.
ಗಣಿಗಾರಿಕೆ ಕೈಗಾರಿಕೆಯಲ್ಲಿ ಮುಂಚೂಣಿಯ ಸಂಸ್ಥೆಗಳಲ್ಲಿ ಒಂದಾಗಿರುವ ವೇದಾಂತ ಐರನ್ ಓರ್ ಕರ್ನಾಟಕ ಸುಸ್ಥಿರ ಮತ್ತು ಜವಾಬ್ಧಾರಿಣಿಗಾರಿಕೆ ಕಾರ್ಯಾಚರಣೆಯ ಖಾತ್ರಿ ಮಾಡಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಅತ್ಯುತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಬದ್ಧತೆಯನ್ನು ಹೊಂದಿದೆ. ಸ್ಲೋಪ್ ಸ್ಟೆಬಿಲಿಟಿ ರೆಡಾರ್‌ನ ಉದ್ಘಾಟನೆ ಈ ಬದ್ಧತೆಗೆ ಸಾಕ್ಷಿಯಾಗಿದೆ. ಜೊತೆಗೆ, ಗಣಿ ಕ್ಷೇತ್ರದಲ್ಲಿ ಸುರಕ್ಷತೆ ಮತ್ತು ಸಂಸ್ಥೆಗೆ ವೇದಾಂತ ಸಂಸ್ಥೆಯ ನಾಯಕತ್ವದ ಸ್ಥಾನವನ್ನು ಇದು ಪುನರ್ ದೃಢೀಕರಿಸುತ್ತದೆ ಎಂದು ಅವರು ಹೇಳಿದರು.
ಈ ಸಮಾರಂಭದಲ್ಲಿ ಐಒಕೆಯ ಕಾರ್ಯಕಾರಿ ಸಮಿತಿ ಸದಸ್ಯರು ಜೊತೆಗೆ ಉದ್ಯೋಗಿಗಳು ಮತ್ತು ಕಾರ್ಮಿಕರು ಕಾರ್ಯ ನಿರ್ವಹಿಸಿದರು.