Breaking
Wed. Dec 25th, 2024

ನಗರದ ವಕೀಲ ಭವನದಲ್ಲಿ ತಾಲೂಕು ವಕೀಲರ ಸಂಘದಿಂದ ನೂತನ ನ್ಯಾಯಾಧೀಶರಿಗೆ ಸ್ವಾಗತ ಕಾರ್ಯಕ್ರಮ….!

ಚಳ್ಳಕೆರೆ, ಮೇ. 27 : ವಕೀಲರು ಮತ್ತು ನ್ಯಾಯಾಧೀಶರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ವಕೀಲರು ಮತ್ತು ನ್ಯಾಯಾಧೀಶರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ನೊಂದು ಬರುವ ವ್ಯಕ್ತಿಗೆ ಸೂಕ್ತವಾದ ನ್ಯಾಯ ದೊರಕಿಸಿಕೊಟ್ಟಾಗ ಮಾತ್ರ ನ್ಯಾಯಾಲಯಗಳ ಮೇಲೆ ನಂಬಿಕೆ ಬರಲು ಸಾಧ್ಯ ಎಂದು ನೂತನವಾಗಿ ಆಗಮಿಸಿದ ಹಿರಿಯ ಶ್ರೇಣಿ  ಸಿವಿಲ್ ನ್ಯಾಯಾಧೀಶರಾದ ಶಮೀರ್ ಪೀರ್ ಸಾಬ್ ಅಭಿಪ್ರಾಯ ಪಟ್ಟರು.
ನಗರದ ವಕೀಲ ಭವನದಲ್ಲಿ ತಾಲೂಕು ವಕೀಲರ ಸಂಘದಿಂದ ನೂತನ ನ್ಯಾಯಾಧೀಶರಿಗೆ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಂಡ ವೇಳೆ ಪಾಲ್ಗೊಂಡು ಮಾತನಾಡಿದ ಅವರು ತಮ್ಮ ಸಮಸ್ಯೆಯನ್ನು ಹೊತ್ತು ತರುವ ವ್ಯಕ್ತಿಯು ವಕೀಲರನ್ನು ಹಾಗೂ ನ್ಯಾಯಾಧೀಶರನ್ನು ದೇವರಂತೆ ಕಾಣುತ್ತಾರೆ ತನ್ನ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂಬ ನಂಬಿಕೆಯಿಂದ ತಮ್ಮ ಬಳಿ ಬಂದಿರುತ್ತಾರೆ ಅವರನ್ನು ಸಮಾಧಾನಪಡಿಸಿ ಸೂಕ್ತ ನ್ಯಾಯ ದೊರಕಿಸಿ ಕೊಟ್ಟಾಗ ಮಾತ್ರ ಅವನು ನೆಮ್ಮದಿಯಿಂದ ನ್ಯಾಯಾಲಯದಿಂದ ಹೊರಗೆ ಹೋಗಲು ಸಾಧ್ಯ ಎಂದು ತಿಳಿಸಿದರು.
ನೂತನವಾಗಿ ಆಗಮಿಸಿದ ಮತ್ತೊಬ್ಬ ನ್ಯಾಯಾಧೀಶೆ ಕೆಎಂ. ತೇಜಸ್ವಿನಿ ಮಾತನಾಡಿ ವಕೀಲರು ಕೇವಲ ಹಣವಂತರಿಗೆ ಮಾತ್ರ ನ್ಯಾಯ ಕೊಡಿಸುತ್ತಾರೆ ಎಂಬ ಭಾವನೆ ಕೆಲವರಲ್ಲಿ ಮೂಡಿದೆ ಇಂತಹ ಮನಸ್ಥಿತಿಯನ್ನು ಹೋಗಲಾಡಿಸಬೇಕಾದರೆ ವಕೀಲರು ಸದಾ ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಬೇಕು ಅಲ್ಲದೇ ನ್ಯಾಯ ಅನ್ಯಾಯಗಳ ಬಗ್ಗೆ ಸೂಕ್ತವಾಗಿ ಪರಾಮರ್ಶಿಸಿ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಬೇಕು ನ್ಯಾಯಾಧೀಶರಾಗಲಿ ಅಥವಾ ನ್ಯಾಯಾಲಯಗಳಾಗಲಿ ಯಾವುದೇ ವ್ಯಕ್ತಿಯ ಜಾತಿ ಧರ್ಮದ ಆಧಾರದ ಮೇಲೆ ತೀರ್ಪುಗಳನ್ನು ಇದುವರೆಗೂ ನೀಡಿಲ್ಲ ಸಾಮಾನ್ಯ ಜನರಿಗೆ ಇದನ್ನು ಅರ್ಥ ಮಾಡಿಸಿದಾಗ ಮಾತ್ರ ನ್ಯಾಯಾಲಯಗಳ ಮೇಲೆ ನಂಬಿಕೆ ಬರಲು ಸಾಧ್ಯ ಈ ನಿಟ್ಟಿನಲ್ಲಿ ವಕೀಲರು ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಕೆಎಂ ನಾಗರಾಜ್ ಮಾತನಾಡಿ ಚಳ್ಳಕೆರೆ ತಾಲೂಕಿನ ನ್ಯಾಯಾಲಯವು ರಾಜ್ಯದಲ್ಲಿ ಅತ್ಯುತ್ತಮ ಹೆಸರನ್ನು ಗಳಿಸಿದೆ ವಕೀಲರ ಮತ್ತು ನ್ಯಾಯಾಧೀಶರ ನಡುವೆ ಉತ್ತಮ ಬಾಂಧವ್ಯಗಳಿದ್ದು ನೂತನವಾಗಿ ಬಂದ ನ್ಯಾಯಾಧೀಶರು ಹಾಗೂ ನಿರ್ಗಮಿತ ನ್ಯಾಯಾಧೀಶರು ವಕೀಲರಿಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ ವಕೀಲರ ಹಾಗೂ ಕಕ್ಷಿದಾರರ ಮನ ಗೆದ್ದಿದ್ದಾರೆ ಮುಂದಿನ ದಿನಗಳಲ್ಲಿ ಈ ವಾತಾವರಣ ಮುಂದುವರಿಯುತ್ತದೆ ವಕೀಲರ ಸಂಘವು ನ್ಯಾಯಾಧೀಶರಿಗೆ ಎಲ್ಲ ರೀತಿಯ ಸಹಕಾರ ನೀಡುವ ಮೂಲಕ ನ್ಯಾಯಾಲಯದ ಘನತೆ ಗೌರವವನ್ನು ಎತ್ತಿ ಹಿಡಿಯುವ ಕೆಲಸ ನಿರ್ವಹಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಪಾಲಯ್ಯ ಕಾರ್ಯದರ್ಶಿ ಎಸ್ ಸಿದ್ದರಾಜು ಓ ಪಾಪಣ್ಣ ಹಿರಿಯ ವಕೀಲರಾದ ಶರಣಪಯ್ಯ,
ಕೆ.ಕುಮಾರ್. ಬೀರಪ್ಪ ಓ.ಹನುಮಂತರಾಯ ಡಿಬಿ.ಬೋರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *