Breaking
Mon. Dec 23rd, 2024

ಚನ್ನಗಿರಿ ಘಟನೆ ವೇಳೆ ಯಾರೂ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿಲ್ಲವೆಂದು ದಾವಣಗೆರೆ ಪೊಲೀಸ್ ವರಿಷ್ಠ ಉಮಾ ಪ್ರಶಾಂತ್ ಸ್ಪಷ್ಟನೆ…!

ದಾವಣಗೆರೆ, ಮೇ 29: ಚನ್ನಗಿರಿ ಘಟನೆ ವೇಳೆ ಯಾರೂ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿಲ್ಲವೆಂದು ದಾವಣಗೆರೆ ಪೊಲೀಸ್ ವರಿಷ್ಠ ಉಮಾ ಪ್ರಶಾಂತ್ ಸ್ಪಷ್ಟನೆ ನೀಡಿದ್ದಾರೆ. ಮೇ 24ರಂದು ಚನ್ನಗಿರಿ ಠಾಣೆ ಮುಂದೆ ಪ್ರತಿಭಟನೆ ವೇಳೆ ಕಲ್ಲುತೂರಾಟ ನಡೆಸಲಾಯಿತು. ಈ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಆರೋಪ ಕೂಡ ಕೇಳಿಬಂದಿತ್ತು. ಜೊತೆಗೆ ಘೋಷಣೆ ಕೂಗಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಿದಾಡುತ್ತಿದೆ.
ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಮೇಲ್ನೋಟಕ್ಕೆ ಪಾಕ್ ಜಿಂದಾಬಾದ್ ಎಂದು ಪ್ರಕಟಿಸಲಾಗಿದೆ. ಪರಿಶೀಲಿಸಲಾದ ವಿಡಿಯೋದಲ್ಲಿ ‘ಪೊಲೀಸರಿಗೆ ಧಿಕ್ಕಾರ’ ಎಂದು ಕೂಗಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ವಿಡಿಯೋ ಲಭ್ಯವಿದ್ದು, ಜಿಲ್ಲಾ ಪೊಲೀಸ್ ಕಚೇರಿ ಅಥವಾ ಸ್ಥಳೀಯ ಠಾಣೆಗೆ ಮಾಹಿತಿ ನೀಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟನೆ ನೀಡಿದ್ದಾರೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಬಾರದು ಎಂದು ಸಾರ್ವಜನಿಕರಿಗೆ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ಸೂಚನೆ ನೀಡಿದ್ದಾರೆ.
ಲೋಬಿಪಿಯಿಂದ ಹೃದಯಾಘಾತವಾಗಿ ಆದಿಲ್ ಸಾವು : ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿಲ್ ಮರಣೋತ್ತರ ಪರೀಕ್ಷಾ ವರದಿಯ ಮಾಹಿತಿ ಲಭ್ಯವಾಗಿದೆ. ಲೋಬಿಪಿಯಿಂದ ಹೃದಯಾಘಾತವಾಗಿ ಆದಿಲ್ ಸಾವನ್ನಪ್ಪಿದ್ದು, ಕಾರ್ಡಿಯಾ ಫಲ್ಮನರಿ ಎಂದು ವರದಿ ಮಾಡಲಾಗಿದೆ. ಸದ್ಯ ಮರಣೋತ್ತರ ಪರೀಕ್ಷೆಗೆ ಅಧಿಕಾರಿಗಳು ಸಲ್ಲಿಸಿದ್ದಾರೆ. ಮೇ 24ರಂದು ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಆದಿಲ್ ಹುಬ್ಬಳ್ಳಿಯಲ್ಲಿದ್ದ.
ಎಡಿಜಿಪಿ ಆರ್.ಹಿತೇಂದ್ರ ಹೇಳಿದ್ದಿಷ್ಟು ಪ್ರಕರಣದ ಬಗ್ಗೆ ದಾವಣಗೆರೆಯಲ್ಲಿ ಎಡಿಜಿಪಿ ಆರ್.ಹಿತೇಂದ್ರ ಕಾಣಿಸಿಕೊಂಡಿದ್ದು, ಈ ಘಟನೆ ಸಂಬಂಧ 108 ಆರೋಪಿಗಳನ್ನು ಗುರುತಿಸಲಾಗಿದೆ. ಕಲ್ಲು ತೂರಾಟ ಮಾಡಿದ 30 ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗಿದೆ. ಈ ಸಂಬಂಧ ಎಫ್ಐಆರ್ ಘಟನೆ ಸಹ ಇದೆ. ಪೊಲೀಸರ ಮೇಲೆ ಕೂಡ ಆಗಿದೆ, ಈ ಬಗ್ಗೆ ತನಿಖೆ ಆಗುತ್ತಿದೆ. 
ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವೈದ್ಯಕೀಯ ವರದಿಯ ಬಗ್ಗೆ ಅಧಿಕಾರಿಗಳನ್ನೇ ಕೇಳಬೇಕು. ಕೆಲವು ಅಧಿಕಾರಿಗಳನ್ನು ಅಮಾನತು ಮಾಡುವುದು ಸಾಮಾನ್ಯ. ಅಮಾನತು ಅಂದ್ರೆ ಅದೇನು ದೊಡ್ಡ ಶಿಕ್ಷೆಯಲ್ಲ. ತನಿಖೆಯಲ್ಲಿ ತಪ್ಪಿಲ್ಲ ಅಂತಾ ಗೊತ್ತಾದ್ರೆ ಮತ್ತೆ ಸೇವೆಗೆ ಬರಬಹುದು.
ರಾಜ್ಯದಲ್ಲಿ ಯಾವುದೇ ಕೋಮು ಗಲಭೆ ನಡೆದಿಲ್ಲ. ಕೋಮುಭಾವನೆ ಕೆರಳಿಸುವ ಘಟನೆ ನಡೆದಿಲ್ಲ. ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷ ಗಂಭೀರ ಪ್ರಕರಣ ನಡೆದಿಲ್ಲ. ಈ ಬಗ್ಗೆ ನಮ್ಮ ಬಳಿ ಅಂಕಿ ಸಂಖ್ಯೆಗಳಿವೆ ಎಂದು ಹೇಳಿದ್ದಾರೆ.

Related Post

Leave a Reply

Your email address will not be published. Required fields are marked *