ಪಾಲಬಾವಿ : ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆಯ ಹಿಂದೆ ಪಾಲಕರ, ಶಿಕ್ಷಕರ, ಸಮುದಾಯದವರ ಪಾತ್ರ ಮಹತ್ವದ್ದಾಗಿದ್ದು. ಶಾಲೆಯ ಪ್ರಾರಂಭೋತ್ಸವದಲ್ಲಿ ಕಾಡಶೆಟ್ಟಿ/ಯಾದವಾಡ ತೋಟದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನೂರಕ್ಕೆ ನೂರರಷ್ಟು ವಿದ್ಯಾರ್ಥಿಗಳ ಹಾಜರಾತಿ ಇರುವುದು ಶಿಕ್ಷಕರ ಎಸ್ಡಿಎಂಸಿ ಸದಸ್ಯರ ಶ್ರಮವು ಮೆಚ್ಚುವಂದದ್ದು.
ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಪಡೆದು ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವುದರ ಜೊತೆಗೆ ಸಮವಸ್ತ್ರ, ಪಠ್ಯಪುಸ್ತಕ, ಶೂ ಸಾಕ್ಸ್, ಶೇಂಗಾ ಚಕ್ಕೆ, ಬಾಳೆಹಣ್ಣು, ಹಾಲು, ಮೊಟ್ಟೆ, ಜೊತೆಗೆ ರಾಗಿ ಮಾಲ್ಟ್ ಮತ್ತು ಮಧ್ಯಾಹ್ನ ಬಿಸಿಊಟ ಹೀಗೆ ಸರಕಾರವು ಅನೇಕ ಯೋಜನೆಗಳನ್ನು ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ತಂದಿದೆ ಈ ಯೋಜನೆಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆ ಬೇಕಾದರೆ ಪಾಲಕರ ಹಾಗೂ ಸಮುದಾಯದವರ ಸಹಕಾರ ಬಹಳ ಮುಖ್ಯವಾದುದು. ಶಿಕ್ಷಕರೊಂದಿಗೆ ಸಮುದಾಯದವರು ಸಹಕಾರ ನೀಡಿದರೇ ಶಾಲೆಯ ಮಕ್ಕಳ ಉಜ್ವಲ ಭವಿಷ್ಯ ಹೊಂದಲು ಸಾಧ್ಯವೆಂದು ಶಿಕ್ಷಣ ಸಂಯೋಜಕ ಶ್ರೀಕಾಂತ ಕಂಬಾರ ಹೇಳಿದರು.
ಅವರು ಗ್ರಾಮದ ಕಾಡಶೆಟ್ಟಿ/ಯಾದವಾಡ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಿ. 31ರಂದು ಶುಕ್ರವಾರ ಮುಂಜಾನೆ 10ಗಂಟೆಗೆ ಹಮ್ಮಿಕೊಂಡ ಸನ್.2024- 25ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾದೇವತೆ ಶ್ರೀ ಸರಸ್ವತಿಯ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಮಾತನಾಡಿದರು.
ಎಸ್ಡಿಎಂಸಿ ಅಧ್ಯಕ್ಷ ಮನೋಹರ ಯಾದವಾಡ ಅಧ್ಯಕ್ಷತೆವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಆರ್.ಎಂ.ತೇಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮನೋಹರ ಯಾದವಾಡ, ಎಸ್‌ಡಿಎಂಸಿ ಉಪಾಧ್ಯಕ್ಷ ಇಸಾಕ್ ಮುಜಾವರ, ಹನುಮಂತ ಚೌಗಲಾ, ಮಹಾದೇವ ಮಠಪತಿ, ಬಸಪ್ಪ ಕಾಡಶೆಟ್ಟಿ, ಪ್ರಭು ಮಾನಶೆಟ್ಟಿ, ಅಂಗನವಾಡಿ ಶಿಕ್ಷಕಿ ಮಹಾದೇವಿ ಜನವಾಡ, ಅಡಿವೆಪ್ಪ ಸೊನ್ನದ, ಬರಮಪ್ಪ ಮಾನಶೆಟ್ಟಿ, ಶಿವಪುತ್ರ ಮಾನಶೆಟ್ಟಿ, ಅತಿಥಿ ಶಿಕ್ಷಕಿಯರು ಅಡುಗೆ ಸಹಾಯಕರು ಮುದ್ದು ಮಕ್ಕಳು ಪಾಲ್ಗೊಂಡಿದ್ದರು. ಪ್ರಧಾನಗುರು ಪಿವೈ.ಮಾದರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಹ ಶಿಕ್ಷಕ ಜಿ.ಎಂ.ಧರೆನ್ನವರ ನಿರೂಪಿಸಿ ವಂದಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಅತಿಥಿಗಳಿಗೆ ಹಾಗೂ ಶಾಲಾ ಮಕ್ಕಳಿಗೆ ಸಿಹಿಯಾದ ಸಜ್ಜಿಕ್ಕಿನ ಹೋಳಿಗೆ, ತುಪ್ಪ, ಚಪಾತಿ ಬದನೇಕಾಯಾಯಿ ಭಾಜಿ, ರುಚಿ ಊಟ ಬಡಿಸಲಾಯಿತು.
ಫೋಟೋ ಶೀರ್ಷಿಕೆ:-31ಪಾಲಬಾವಿ.02ಪಾಲಬಾವಿ ಗ್ರಾಮದ ಕಾಡಶೆಟ್ಟಿ/ ಯಾದವಾಡ ತೋಟದ ಶಾಲೆಯಲ್ಲಿ ಸನ್: 2024-25ನೇ ಸಾಲಿನ ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸುತ್ತಿರುವ ಶಿಕ್ಷಣ ಸಂಯೋಜಕ ಶ್ರೀಕಾಂತ ಕಂಬಾರ.