ಭದ್ರಾವತಿ: ತಾಲ್ಲೂಕಿನ ಯರೆಹಳ್ಳಿ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ಅಂಗವಾಗಿ ಇಲಾಖೆ ಸರಬರಾಜು ಮಾಡಿದ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಣೆ ಮಾಡಲಾಯಿತು.
ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ ಮಾತನಾಡಿ, ಮಕ್ಕಳು ಇಲ್ಲಿಯವರೆಗೂ ಆಟ ಆಡಿದ್ದು ಸಾಕು ಪಾಠದ ಕಡೆ ಗಮನ ಕೊಡಿ.ಸರ್ಕಾರಿ ಶಾಲೆಗೆ ಮಕ್ಕಳ ಸೇರಿಸಿ ಸರ್ಕಾರಿ ಶಾಲೆ ಉಳಿಸಿ ಎಂದು ಕರೆ ನೀಡಿದರು.
ಎಸ್ ಡಿ ಎಂ ಸಿ ಅಧ್ಯಕ್ಷ ಕೃಷ್ಣಮೂರ್ತಿ, ಫೋಷಕ ಸೋಮು ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದಾಖಲಾತಿ ಆಂದೋಲನ ಆರಂಭ ಮಾಡ ಲಾಯ್ತು.ದಾಖಲಾತಿ ಬ್ಯಾನರ್ ಹಾಗೂ ವಿಧ್ಯಾಂಜಲಿ ಬೋರ್ಡ್ ಗಳನ್ನು ಗ್ರಾಮದ ಹಿರಿಯರಾದ ರಾಮ ಸಂಜೀವಯ್ಯ ಬಿಡುಗಡೆ ಗೊಳಿಸಿ ಶುಭ ಕೋರಿದರು. ನಂತರ ಮಕ್ಕಳಿಗೆ ಸಿಹಿಯೂಟ ನೀಡಿ ಸ್ವಾಗತಿಸಲಾಯಿತು.