Breaking
Tue. Dec 24th, 2024

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿಯವರಿಗೆ ಮತ ನೀಡಿ ಎಂದು ಗೋವಿಂದ ಕಾರಜೋಳ ಮನವಿ…!

ಚಿತ್ರದುರ್ಗ ಜೂ. 01: ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಕಾಳಜಿಯನ್ನು ತೋರದೆ ವಿವಿಧ ರೀತಿಯ ಆದೇಶಗಳನ್ನು ಜಾರಿ ಮಾಡುವುದರ ಮೂಲಕ ಮಕ್ಕಳು ಮತ್ತು ಶಿಕ್ಷಕರಿಗೆ ಹೊರೆ ಇದನ್ನು ತಪ್ಪಿಸಲು ಪರಿಷತ್‌ನಲ್ಲಿ ಬಿಜೆಪಿಯ ಸಂಖ್ಯಾ ಬಲ ಹೆಚ್ಚಾಗುತ್ತದೆ. ಹಿನ್ನಲೆಯಲ್ಲಿ ಬಾರಿಯ ಆಗ್ನೇಯ ಈ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿಯವರಿಗೆ ಮತ ಹಾಕುವಂತೆ ಮತದಾರರಿಗೆ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮನವಿ ಮಾಡಿದರು.
ಆಗ್ನೇಯ ಶಿಕ್ಷಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಪರವಾಗಿ ನಗರದ ಹೊಳಲ್ಕೆರೆ ರಸ್ತೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಸಂಪಿಗೆ ಹೈಸ್ಕೂಲ್ ನಂತರ ಬರಗೇರಮ್ಮ ಶಾಲೆ, ಜ್ಞಾನಭಾರತಿ ಶಾಲೆ ಹಾಗೂ ಎಸ್ ಜೆ ಎಂ ಕಾಲೇಜುಗಳಲ್ಲಿ ಮತಯಾಚನೆ ಮಾಡಿ ಅವರು ಕೇಂದ್ರ ಸರ್ಕಾರ ಎನ್.ಐ.ಪಿ.ಯನ್ನು ಜಾರಿ ಮಾಡಲು ಹೊರಟರೆ ಈಗ ಮುಂದಿನ ದಿನಗಳಲ್ಲಿ ನಮ್ಮ ಪೀಳಿಗೆಗೆ ಇದು ದೊರಕಲಿದೆ. ಆದರೆ ರಾಜ್ಯ ಸರ್ಕಾರ ಇದನ್ನು ವಿರೋಧಿಸುತ್ತಿದೆ.
ಇದರ ಬದಲಿಗೆ ಎಸ್.ಐ.ಪಿ.ಯನ್ನು ಜಾರಿ ಮಾಡಲು ಮುಂದಾಗಿದ್ದು ಕಾಂಗ್ರೆಸ್ ಸರ್ಕಾರದ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರೆ ಕಾನೂನುಗಳನ್ನು ಮಾಡಿ ಪರಿಷತ್ತಿಗೆ ಬರುತ್ತಾರೆ ಇಲ್ಲಿ ನಮ್ಮ ಬಿಜೆಪಿಯ ಸಂಖ್ಯೆ ಇದ್ದರೆ ಸರಿಯಾಗಿ ಪಾಸು ಮಾಡಬಹುದು ಆದರೆ ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಾಗ ಅದನ್ನು ತಿರಸ್ಕರಿಸಬಹುದು ನಮ್ಮ ಸಂಖ್ಯಾ ಬಲಕ್ಕೆ ಬದಲಾಗಿ ಕಾಂಗ್ರೆಸ್ ಪಕ್ಷದ ಬಲ ಹೆಚ್ಚಾಗಬಹುದು ಇದರಿಂದ ಮುಂದೆ ಮಕ್ಕಳು ಮತ್ತು ಶಿಕ್ಷಕರಿಗೆ ತೊಂದರೆಯಾಗುತ್ತಿದೆ.
ಈ ಹಿನ್ನಲೆಯಲ್ಲಿ ನಿಮ್ಮ ಸಹಾಯ ಬೇಕು ಎಂದ ನಾರಾಯಣಸ್ವಾಮಿ ಅವರು ಕಳೆದ ಮೂರು ಬಾರಿ ಶಾಸಕರಾಗಿ ಅಧಿಕಾರ ವಹಿಸಿಕೊಂಡಿದ್ದರು ಇದರ ಬಗ್ಗೆ ನಿಮಗೂ ಸಹ. ನಿಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಬಂದಿದೆ. ಮುಂದೆಯೂ ಸಹ ನಿಮ್ಮ ಸೇವೆಯನ್ನು ಮಾಡಬೇಕಾದರೆ ನಾರಾಯಣಸ್ವಾಮಿಯವರನ್ನು ಬೆಂಬಲಿಸಿ ಚುನಾವಣೆಯಲ್ಲಿ ಅವರಿಗೆ ಮತವನ್ನು ಹಾಕಬೇಕಾಗಿದೆ ಎಂದು ಸಹ ಹಾಕಿಸಿ ಎಂದು ನವೀನ್ ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಚಿತ್ರದುರ್ಗ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶೈಲಜ ರೆಡ್ಡಿ, ವಕ್ತಾರರಾದ ನಾಗರಾಜ್ ಬೇದ್ರೆ, ನವೀನ ಚಾಲುಕ್ಯ, ಮಂಜುಳಮ್ಮ, ಬಸಮ್ಮ, ನಗರಸಭಾ ಸದಸ್ಯರಾದ ಹರೀಶ್, ಮಾಧುರಿ ಗಿರೀಶ್, ಸೇರಿದಂತೆ ಇನ್ನಿತರರು ಇದ್ದರು.

Related Post

Leave a Reply

Your email address will not be published. Required fields are marked *