Breaking
Tue. Dec 24th, 2024

ಲೋಕಸಭಾ ಚುನಾವಣೆಯ 2024ರ ಕೊನೆಯ ಹಂತದ ಮತದಾನ ಪ್ರಾರಂಭ…!

ಮತದಾನಕ್ಕೂ ಮುನ್ನ ಶನಿ ದೇವರ ದರ್ಶನ ಪಡೆದ ಅಭ್ಯರ್ಥಿ : ಹಿಮಾಚಲ ಪ್ರದೇಶ ಮಂಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿವಂಗತ ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಅವರು ತನ್ನ ತಾಯಿ ಜೊತೆ ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಬೆಳಗ್ಗೆ 9 ಗಂಟೆವರೆಗಿನ ಮತದಾನದ ವಿವರ ಬೆಳಗ್ಗೆ 9 ಗಂಟೆವರೆಗಿನ ಮತದಾನದ ವಿವರ. ಬಿಹಾರ – 10.58%, ಚಂಡಿಗಢ- 11.64%, ಹಿಮಾಚಲ ಪ್ರದೇಶ- 14.35%, ಜಾರ್ಖಾಂಡ್ – 12.15%, ಒರಿಸ್ಸಾ – 7.69%, ಪಂಜಾಬ್- 9.64%, ಉತ್ತರಪ್ರದೇಶ – 12.94%, ಪಶ್ಚಿಮ ಬಂಗಾಳ – 12.63%.  ಒಟ್ಟು 57 ಲೋಕಸಭಾ ಕ್ಷೇತ್ರಗಳಿಗೆ ಮತದಾನ
ಪಂಜಾಬ್‌ನ ಎಲ್ಲಾ 13 ಲೋಕಸಭಾ ಕ್ಷೇತ್ರಗಳು, ಉತ್ತರಪ್ರದೇಶದ 13 ಕ್ಷೇತ್ರಗಳು, ಪಶ್ಚಿಮ ಬಂಗಾಳ 09, ಬಿಹಾರ 08, ಒಡಿಶಾ06, ಹಿಮಾಚಲ ಪ್ರದೇಶ04, ಜಾರ್ಖಂಡ್03, ಕೇಂದ್ರಾಡಳಿ ಪ್ರದೇಶದ ಚಂಡೀಗಢ 01 ಕ್ಷೇತ್ರಕ್ಕೆ ಇಂದು ಮತದಾನ ನಡೀತಿದೆ. ಇದಲ್ಲದೆ ಒಡಿಶಾ ವಿಧಾನಸಭೆ ಚುನಾವಣೆಯ ಬಾಕಿಯಿರುವ 42 ಕ್ಷೇತ್ರಗಳು ಮತ್ತು ಹಿಮಾಚಲದ ಪ್ರದೇಶ 06 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.
Lok Sabha Election 2024 Voting : ಒಟ್ಟು 7 ಹಂತಗಳಲ್ಲಿ 543 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 19ರಂದು ಶುರುವಾದ ಮತದಾನದ ಉತ್ಸವ 59 ದಿನಗಳನ್ನು ಪೂರೈಸಿದೆ. ಈಗಾಗಲೇ 6 ಹಂತಗಳ ಮತದಾನ ಯಶಸ್ವಿಯಾಗಿ ಮುಗಿದಿದ್ದು, ಇಂದು 7ನೇ ಹಾಗೂ ಕಟ್ಟ ಕಡೆಯ ಹಂತದ ಮತದಾನ ನಡೆಯುತ್ತಿದೆ. 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಒಳಗೊಂಡು ಒಟ್ಟು 57 ಕ್ಷೇತ್ರಗಳಿಗೆ ವೋಟಿಂಗ್ ನಡೆಯುತ್ತಿದೆ. ಪಂಜಾಬ್‌ನ ಎಲ್ಲಾ 13 ಲೋಕಸಭಾ ಕ್ಷೇತ್ರಗಳು, ಉತ್ತರಪ್ರದೇಶದ 13 ಕ್ಷೇತ್ರಗಳು, ಪಶ್ಚಿಮ ಬಂಗಾಳ 09, ಬಿಹಾರ 08, ಒಡಿಶಾ06, ಹಿಮಾಚಲ ಪ್ರದೇಶ04, ಜಾರ್ಖಂಡ್03, ಕೇಂದ್ರಾಡಳಿ ಪ್ರದೇಶದ ಚಂಡೀಗಢ 01 ಕ್ಷೇತ್ರಕ್ಕೆ ಮತದಾನ ನಡೆಯುತ್ತಿದೆ. ಇದಲ್ಲದೆ ಒಡಿಶಾ ವಿಧಾನಸಭೆ ಚುನಾವಣೆಯ ಬಾಕಿಯಿರುವ 42 ಕ್ಷೇತ್ರಗಳು ಮತ್ತು ಹಿಮಾಚಲದ ಪ್ರದೇಶ 06 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ

Related Post

Leave a Reply

Your email address will not be published. Required fields are marked *