ಕನ್ನಡದ ಮೌರ್ಯ, ಅರಸು, ಹೂ ಸಿನಿಮಾಗಳ ಮೂಲಕ ಮೋದಿ ಮಾಡಿದ ಬಹುಭಾಷಾ ನಟಿ ಮೀರಾ ಜಾಸ್ಮಿನ್ ಇದೀಗ ಹಲವು ವರ್ಷಗಳ ನಂತರ ತೆಲುಗಿಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಹೊಸ ಸಿನಿಮಾದಲ್ಲಿ ಮಹಾರಾಣಿಯಂತೆ ಮೀರಾ ಕಂಗೊಳಿಸಿದ್ದಾರೆ. ಸಿನಿಮಾದ ಪೋಸ್ಟರ್ ಕೂಡ ಇದೀಗ ರಿಲೀಸ್ ಆಗಿದೆ.
ವೈಯಕ್ತಿಕ ಜೀವನದಲ್ಲಿ ನಡೆದ ಕಹಿ ಘಟನೆಗಳಿಂದ ನಟಿ ಸಿನಿಮಾದಿಂದ ದೂವಾಗಿತ್ತು. ಕಳೆದ ಎರಡ್ಮೂರು ವರ್ಷಗಳಿಂದ ಸಿನಿಮಾದಲ್ಲಿ ನಟಿ ಆ್ಯಕ್ಟೀವ್ ಆಗಿದ್ದಾರೆ. ಹಲವು ವರ್ಷಗಳ ಬಳಿಕ ಮತ್ತೆ ಟಾಲಿವುಡ್‌ಗೆ ಮೀರಾ ಕಮ್ ಬ್ಯಾಕ್ ಆಗಿದ್ದು, ಒಂದೊಳ್ಳೆ ಸಿನಿಮಾ ಟೀಮ್ ಜೊತೆ ನಟಿ ಕೈಜೋಡಿಸಿದ್ದಾರೆ.
ತೆಲುಗಿನ ಹೀರೋ ಶ್ರೀವಿಷ್ಣು ಜೊತೆ ಮೀರಾ ಎಂಟ್ರಿ ಕೊಟ್ಟಿದ್ದಾರೆ. ‘ಸ್ವಾಗ್’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ರಾಣಿ ಉತ್ಪಲಾ ದೇವಿ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ. ಸದ್ಯ ನಟಿಯ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ. ಈ ಪೋಸ್ಟರ್‌ನಲ್ಲಿ ‘ಅರಸು’ ನಟಿ ಕಂಗೊಳಿಸಿದ್ದಾರೆ.
ಟಾಲಿವುಡ್‌ನಲ್ಲಿ ಪವನ್ ಕಲ್ಯಾಣ್, ರವಿ ತೇಜ, ಬಾಲಯ್ಯ, ಜೊತೆ ಮೀರಾ ಹಿಂದೆ ನಟಿಸಿದ್ದರು. ಈಗ ಮತ್ತೆ ರೀ ಎಂಟ್ರಿ ಕೊಟ್ಟಿರುವ ಮೀರಾರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಪ್ರಸ್ತುತ ತಮಿಳಿನ ‘ದಿ ಟೆಸ್ಟ್’ ಮತ್ತು ತೆಲುಗಿನ ‘ಸ್ವಾಗ್’ ಸಿನಿಮಾಗಳು ನಟಿಯ ಕೈಯಲ್ಲಿವೆ.