ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತೀರ ಸಿಂಪಲ್ ವ್ಯಕ್ತಿ. ಸ್ಟಾರ್ ಆಗಿದ್ರೂ ಅಹಂಕಾರ ತೋರಿಸದೇ ಪ್ರತಿಯೊಬ್ಬರ ಜೊತೆ ಧ್ರುವ ಬೆರೆಯುತ್ತಾರೆ. ಯಾವತ್ತೂ ಅವರು ಸ್ಟಾರ್ ಡಮ್ ತಲೆಗೆ ಏರಿಸಿಕೊಂಡಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದೀಗ ಸಾಮಾನ್ಯರಂತೆ ರೋಡ್‌ಸೈಡ್‌ನಲ್ಲಿ ಸ್ನೇಹಿತರ ಜೊತೆ ನಿಂತು ಧ್ರುವ ತಿಂಡಿ ತಿಂದಿದ್ದಾರೆ.
ಧ್ರುವ ಸರ್ಜಾ ಮೈಸೂರಿಗೆ ಭೇಟಿ ನೀಡಿದ್ದಾರೆ. ಈ ವೇಳೆ, ರೋಡ್ಸೈಡ್ ಗಾಡಿ ಅಂಗಡಿಗೆ ಭೇಟಿ ನೀಡಿ ಸಾಮಾನ್ಯರಂತೆ ಸ್ನೇಹಿತರ ಜೊತೆ ತಟ್ಟೆ ಇಡ್ಲಿ, ಮತ್ತು ಚಾಟ್ಸ್ ಸವಿದಿದ್ದಾರೆ. ಬಳಿಕ ಅಭಿಮಾನಿಗಳ ಜೊತೆ ನಟ ಫೋಟೋಗೆ ಪೋಸ್ ನೀಡಿದ್ದಾರೆ.
ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಧ್ರುವ ಗುಡ್ ನ್ಯೂಸ್ ನೀಡಿದ್ದರು. ‘ಮಾರ್ಟಿನ್’ (ಮಾರ್ಟಿನ್) ಸಿನಿಮಾ ಇದೇ ಅಕ್ಟೋಬರ್ 11ಕ್ಕೆ ರಿಲೀಸ್ ಆಗಲಿದೆ. ‘ಕೇಡಿ’ ಸಿನಿಮಾ ಡಿಸೆಂಬರ್‌ನಲ್ಲಿ ಬಿಡುಗಡೆ ಆಗಲಿದೆ.
ಇನ್ನೂ ‘ಪೊಗರು’ ಚಿತ್ರ 3 ವರ್ಷಗಳ ಹಿಂದೆ ರಿಲೀಸ್ ಆಗುತ್ತಿದೆ. ಇದಾದ ಬಳಿಕ ಈಗ ‘ಮಾರ್ಟಿನ್’ ಮತ್ತು ‘ಕೇಡಿ’ ಚಿತ್ರದ ಮೂಲಕ ನಟ ಬರುತ್ತಿದ್ದಾರೆ. ಇನ್ನೂ 2 ಚಿತ್ರಗಳ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ.