ಬೆಂಗಳೂರು, ಜೂನ್. 02: ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಚಾಲಕ ಹಾಗೂ ಪ್ರಯಾಣಿಕನ ನಡುವೆ ಗಲಾಟೆ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಗಿದೆ. ವಿಡಿಯೋದಲ್ಲಿ ಪ್ರಯಾಣಿಕ ಕ್ಷಮೆ ಕೇಳುವಂತೆ ಹೇಳುತ್ತಾನೆ. ಬಳಿಕ ಇಬ್ಬರೂ ಕೈ ಕೈ ಮಿಲಾಯಿಸುತ್ತಾರೆ.
ಈ ವೇಳೆ ನಿರ್ವಾಹಕ ತಡೆಯಲು ಯತ್ನಿಸುತ್ತಾನೆ. ಆದರೆ ಪ್ರಯಾಣಿಕ ಬಸ್ ಚಾಲಕನನ್ನು ಎಳೆದು ಫುಟ್ಬೋರ್ಡ್ಗೆ ಹಾಕುತ್ತಾನೆ. ವಿಡಿಯೋವನ್ನು ಚೇತನ್ ಸೂರ್ಯ ಎಸ್ ಎಂಬುವರು ಜೂ.01 ರಂದು ಎಕ್ಸ್ ಟ್ವೀಟರ್ ಮಾಡಿದ್ದು, ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆದರೆ ಈ ವಿಡಿಯೋವನ್ನು ಮೇ 30 ರಂದು ಫೇಸ್ಬುಕ್ನಲ್ಲಿ ಹಂಚಿಕೊಳ್ಳಲಾಗಿದೆ. ಸಲಿಯತ್ತಾಗಿ ಈ ಘಟನೆ ನಡೆದಿದ್ದು ಯಾವಾಗ ಎಂಬುವುದು ತನಿಖೆ ನಂತರ ತಿಳಿದು ಬರಲಿದೆ.
ಇನ್ನು ಚೇತನ್ ಸೂರ್ಯ ಎಸ್ ಅವರ ಪೋಸ್ಟ್ಗೆ ಬೆಂಗಳೂರಯ ಸಂಚಾರಿ ಪೊಲೀಸರು ಪ್ರತಿಕ್ರಿಯಿಸಿದ್ದು, ಘಟನೆ ನಡೆದ ಸ್ಥಳವನ್ನು ತಿಳಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆ ಕೆಎಸ್ಆರ್ಟಿಸಿ ಸಂಸ್ಥೆ ಕೂಡ ಪ್ರತಿಕ್ರಿಯಿಸಿದ್ದು, ಬಿಎಂಟಿಸಿಗೆ ದೂರು ನೀಡಿ ಎಂದು ಕಾಮೆಂಟ್ ಮಾಡಿದೆ.