ನವದೆಹಲಿ, ಜೂನ್. 03: ದೇಶದ ಗಮನ ಲೋಕಸಭೆ ಚುನಾವಣೆ ಫಲಿತಾಂಶ ನೆಟ್ಟಿದೆ. ಈ ಮಧ್ಯೆ ಅಮುಲ್ ಕಂಪನಿ ಇಂದಿನಿಂದಲೇ ಜಾರಿಗೆ ಬರುವಂತೆ ಎಲ್ಲ ರೀತಿಯ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ.ಗಳನ್ನು ಹೆಚ್ಚಿಸಲಾಗಿದೆ.
ಈ ಕುರಿತು ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಉತ್ಪಾದನೆಯ ಒಟ್ಟಾರೆ ವೆಚ್ಚದ ಕಾರಣದಿಂದಾಗಿ ಅಮುಲ್ ಹಾಲಿನ ಬೆಲೆಯನ್ನು ಹೆಚ್ಚಿಸಲಾಗಿದೆ.
ಬೆಲೆ ಏರಿಕೆ ಅಮುಲ್ ಗೋಲ್ಡ್, ಅಮುಲ್ ತಾಜಾ ಮತ್ತು ಅಮುಲ್ ಶಕ್ತಿ ಅಂಗ ಉತ್ಪನ್ನಗಳ ಅನ್ವಯ. ಆದರೆ ಈ ಸಣ್ಣ ಬೆಲೆ ಏರಿಕೆ ಅಮುಲ್ ತಾಜಾ ಪಾಕೇಟ್ನ ಅನ್ವಯವಾಗುವುದಿಲ್ಲ ಎಂದು ಜಿಸಿಎಂಎಫ್ ಹೇಳಿದೆ. ಲೀಟರ್ ಪ್ರತಿಗೆ 2 ರೂ. ದರ ಶೇ 3-4ರಷ್ಟು ಅಧಿಕ.
ಈ ಬಗ್ಗೆ ಅಮುಲ್ ಬ್ರ್ಯಾಂಡ್ ಅಡಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನ ಮಾರಾಟ ಮಾಡುವ ಜಿಸಿಎಂಎಫ್‌ನ ಎಂಡಿ ಜಯೇನ್ ಮೆಹ್ತಾ ಮಾತನಾಡಿ, ಹೆಚ್ಚಿದ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯ ಎಂದು ಹೇಳಿದರು.
ಪರಿಷ್ಕೃತ ದರ ಹೀಗಿದೆ
500 ಎಂಎಲ್ನ ಅಮುಲ್ ಗೋಲ್ಡ್ ಬೆಲೆ 33ರೂ.ಗೆ ಆಗಿದೆ. ಒಂದು ಲೀಟರ್ಗೆ 64 ರೂ. ನಿಂದ 66 ರೂ.ಗೆ ಆಗಿದೆ.
500 ಎಂಎಲ್ನ ಅಮುಲ್ ಎಮ್ಮ ಹಾಲಿನ ದರ 36 ರೂ.ಗೆ ಆಗಿದೆ.
500 ಎಂಎಲ್ನ ಅಮುಲ್ ಶಕ್ತಿ ಹಾಲಿನ ಬೆಲೆ 30ರೂ. ಆಗಿದೆ.
ಜೆಸಿಎಂಎಂಎಫ್ ಕೊನೆಯ ಬಾರಿಗೆ ಹಾಲಿನ ಬೆಲೆಯನ್ನು 2023 ರ ಫೆಬ್ರವರಿಯಲ್ಲಿ ಹೆಚ್ಚಿಸಿತ್ತು.
ನಂದಿನಿ ಹಾಲಿನ ದರವನ್ನು ಕೆಎಂಎಫ್ ಕಳೆದ ವರ್ಷ ಆಗಸ್ಟ್ನಲ್ಲಿ ಪ್ರತಿ ಲೀಟರ್ಗೆ 3 ರೂ. ತುಂಬಾ ಮಾಡಿತ್ತು. ಬೆಲೆ ಏರಿಕೆ ನಂತರ ಲೀಟರ್ ಟೋನ್ಡ್ ಹಾಲಿಗೆ 42 ರೂ., ಹೋಮೋಜೆನೈಸ್ಡ್ ಹಾಲಿಗೆ 43 ರೂ., ಪಾಶ್ಚರೀಕರಿಸಿದ ಹಾಲಿಗೆ 46 ರೂ. ಮತ್ತು ಶುಭಂ ವಿಶೇಷ ಹಾಲಿಗೆ 48 ರೂ. ಆಗಿದೆ.