Breaking
Tue. Dec 24th, 2024

ಆಗ್ನೇಯ ಶಿಕ್ಷಕಯರ ಕ್ಷೇತ್ರದ ಚುನಾವಣೆ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬಿರುಸಿನ ಮತದಾನ

ಚಿತ್ರದುರ್ಗ, ಮೇ.03 : ಆಗ್ನೇಯ ಶಿಕ್ಷಕರ  ಕ್ಷೇತ್ರಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಿರುಸಿನ ಮತದಾನ ನಡೆಯಿತು.
ಬೆಳಿಗ್ಗೆ ಎಂಟು ಗಂಟೆ ಮತದಾನ ಆರಂಭವಾದರೂ 11 ಗಂಟೆಯ ಮತದಾನ ಮಂದಗತಿಯಲ್ಲಿ ಸಾಗಿತು. ಒಂದು ಗಂಟೆ ಸುಮಾರಿಗೆ ನೂರಾರು ಮಧ್ಯಾಹ್ನ ಶಿಕ್ಷಕ-ಶಿಕ್ಷಕಿಯರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಕೆಲವು ಶಿಕ್ಷಕರು ಸಾಲಿನಲ್ಲಿ ನಿಂತು ಸುಸ್ತಾಗಿ ಕಟ್ಟೆ ಮೇಲೆ ಕುಳಿತಿದ್ದು ಕಂಡು ಬಂದಿತು.
ಎರಡು ಮತಗಟ್ಟೆಗಳನ್ನು ತೆರೆದಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮಧ್ಯಾಹ್ನ ಮೂರು ಗಂಟೆಯ ನಂತರ ಶಿಕ್ಷಕರು ಲವಲವಿಕೆಯಿಂದ ಮತದಾನ ಮಾಡಿದರು.
ಡಾ.ಬಿ.ಅಂಬೇಡ್ಕರ್ ಪ್ರತಿಮೆ ಮುಂಭಾಗ ನಗರಸಭೆಗೆ ಹೋಗುವ ದಾರಿಯಲ್ಲಿ ಬ್ಯಾರಿಕೇಡ್‌ಗಳನ್ನಿಟ್ಟು ಮತದಾರ ಶಿಕ್ಷಕರಿಗೆ ಮಾತ್ರ ಮತ ಕೇಂದ್ರಕ್ಕೆ ಬಿಡಲಾಯಿತು.
ಚಿತ್ರದುರ್ಗ : ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪಕ್ಕದಲ್ಲೆ ನಿಂತು ಪರಸ್ಪರ ಜೈಕಾರ ಕೂಗಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಬಂದ ತಕ್ಷಣ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿಗೆ ಜೈ ಎಂದು ಕೂಗಿದರು, ಬಿಜೆಪಿಯವರು ಮತ್ತೊಮ್ಮೆ ಮೋದಿ ಎಂದು ಜಯಘೋಷಗಳನ್ನು ಕೂಗಿದರು.
ಎರಡು ಪಕ್ಷದವರು ಪೈಪೋಟಿ ಮೇಲೆ ಜೈಕಾರ ಹಾಕಿದರು. ಬಿಜೆಪಿ. ಕಾಂಗ್ರೆಸ್ ಮಿಕ್ಸ್ ಆಗಿ ತಮ್ಮ ತಮ್ಮ ಪಕ್ಷಗಳ ನಾಯಕರು ಪರ ಜೈಕಾರಗಳನ್ನು ಕೂಗುತ್ತಿದ್ದರು, ನೋಡುಗರಿಗೆ ಒಂದು ರೀತಿಯ ಮನರಂಜನೆ ನೀಡುವಂತಿತ್ತು. 

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಕೆ.ಪಿ.ಸಂಪತ್‌ಕುಮಾರ್, ಉಪಾಧ್ಯಕ್ಷರಾದ ಎಸ್.ಎನ್.ರವಿಕುಮಾರ್, ನಜ್ಮತಾಜ್, ಚಿತ್ರ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರುಗಳಾದ ಕೆ.ಸರ್ದಾರ್, ಬಿ.ಎಸ್. .ಟಿ.ಜಗದೀಶ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತ ನಂದಿನಿಗೌಡ, ಪದವೀಧರ ವಿಭಾಗದ ಅಧ್ಯಕ್ಷ ಮುದಸಿರ್ ನವಾಜ್, ಕೆ.ಪಿ.ಸಿ.ಸಿ.ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮುನಿರಾ ಎ.ಮಕಾಂದಾರ್, ಮೋಕ್ಷರುದ್ರಸ್ವಾಮಿ, ಕೆಡಿಪಿ. ಸದಸ್ಯ ಕೆ.ಸಿ.ನಾಗರಾಜ್, ಎಸ್.ಸಿ. ವಿಭಾಗದ ಜಿಲ್ಲಾಧ್ಯಕ್ಷ ಜಯಣ್ಣ, ಬಿಜೆಪಿ. ಜಿಲ್ಲಾಧ್ಯಕ್ಷ ಎ.ಮುರಳಿ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್ ಬೇದ್ರೆ, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಶೈಲಜಾರೆಡ್ಡಿ, ಬಸಮ್ಮ, ಕಾಂಚನ ಸೇರಿದಂತೆ ಅನೇಕರು ಜಮಾಯಿಸಿ ತಮ್ಮ ಅಭ್ಯರ್ಥಿಗಳ ಪರ ಶಿಕ್ಷಕರನ್ನು ಮತಯಾಚಿಸಿದರು. 

ಟೇಬಲ್‌ಗೆ ಕುಳಿತ ಜಿ.ಹೆಚ್.ತಿಪ್ಪಾರೆಡ್ಡಿ : ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ನಗರ ಠಾಣೆ ಪಕ್ಕದ ರಸ್ತೆಯಲ್ಲಿ ಹಾಕಿದ್ದ ಶಾಮಿಯಾನದಡಿ ಟೇಬಲ್‌ನಲ್ಲಿ ಕುಳಿತು, ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿರವರ ಪರ ಶಿಕ್ಷಕರಲ್ಲಿ ಮತಯಾಚಿಸಿದರು. ಬದಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ಮತ್ತೊಂದು ಸಭೆಯಲ್ಲಿ ಕುಳಿತು ಮತದಾರ ಶಿಕ್ಷಕರಿಗೆ ಸ್ಪಿಪ್ ನೀಡಿದರು. ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹಾಗೂ ಜಿಲ್ಲಾ ಉಸ್ತುವರಿ ಸಚಿವ ಡಿ.ಸುಧಾಕರ್ ಇವರುಗಳು ಉಭಯ ಕುಶಲೋಪರಿ ಹಂಚಿಕೊಂಡರು. ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ. ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಈ ಸಂದರ್ಭದಲ್ಲಿದ್ದರು.

Related Post

Leave a Reply

Your email address will not be published. Required fields are marked *