ಲೋಕಸಭಾ ಚುನಾವಣೆಯ 7 ಹಂತಗಳು ಮುಕ್ತಾಯಗೊಂಡಿದ್ದು, ಇಂದು ಮತ ಎಣಿಕೆ ಕಾರ್ಯ ಶುರುವಾಗಿದ್ದು, ಫಲಿತಾಂಶ ಹೊರಬೀಳಲಿದೆ. ಲೋಕಸಭಾ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ
ಯಾವ ರಾಜ್ಯದಲ್ಲಿ ಯಾವ ಪಕ್ಷ ಮುಂದಿದೆ, ಯಾವ ಪಕ್ಷ ಹಿಂದಿದೆ : ದೆಹಲಿ- ಬಿಜೆಪಿ 6, ಕಾಂಗ್ರೆಸ್ 1 ಆಂಧ್ರಪ್ರದೇಶ- ಟಿಡಿಪಿ 15, ವೈಎಸ್‌ಆರ್‌ಸಿಪಿ 3, ಬಿಜೆಪಿ 3 ಬಿಹಾರ- ಜೆಡಿಯು 12, ಬಿಜೆಪಿ 9, ಎಲ್‌ಜೆಪಿ 5, ಆರ್‌ಜೆಡಿ 3, ಕಾಂಗ್ರೆಸ್ 2, ಛತ್ತೀಸ್‌ಗಢ- ಬಿಜೆಪಿ 9, ಕಾಂಗ್ರೆಸ್ 2, ಗೋವಾ- ಬಿಜೆಪಿ, ಕಾಂಗ್ರೆಸ್ 1, ಗುಜರಾತ್- ಬಿಜೆಪಿ 25, ಕಾಂಗ್ರೆಸ್ 1, ಹರಿಯಾಣ- ಕಾಂಗ್ರೆಸ್ 5, ಬಿಜೆಪಿ 4, ಎಎಪಿ 1 ,ಹಿಮಾಚಲ ಪ್ರದೇಶ- ಬಿಜೆಪಿ 4, ಜಮ್ಮು ಕಾಶ್ಮೀರ- NC 2, ಬಿಜೆಪಿ 2
ಹರ್ಯಾಣದಲ್ಲಿ ಯಾವ ಪಕ್ಷ ಮುನ್ನಡೆ?ಹರ್ಯಾಣದಲ್ಲಿ ಬಿಜೆಪಿ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಉತ್ತರ ಪ್ರದೇಶದ ಸ್ಥಿತಿ ಏನು? ಉತ್ತರ ಪ್ರದೇಶದಲ್ಲಿ ಬಿಜೆಪಿ 36 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, 33 ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, 2 ಸ್ಥಾನಗಳಲ್ಲಿ ಆರ್‌ಎಲ್‌ಡಿ ಮುನ್ನಡೆ ಸಾಧಿಸಿದೆ.
ಯಾವ ಕ್ಷೇತ್ರದಲ್ಲಿ ಯಾರು ಹಿಂದೆ, ಯಾರು ಮುಂದೆ? -ಅಮೇಥಿಯಲ್ಲಿ ಕಾಂಗ್ರೆಸ್‌ನ ಕಿಶೋರಿ ಲಾಲ್ ಶರ್ಮಾ ಮುನ್ನಡೆ ಸಾಧಿಸಿದ್ದಾರೆ. -ಪಾಟ್ಲಿಪುತ್ರದಲ್ಲಿ ಮಿಸಾ ಭಾರತಿ 2329 ಮತಗಳ ಮುನ್ನಡೆಯಲ್ಲಿದ್ದಾರೆ. -ಕತಿಹಾರ್‌ನ ಜೆಡಿಯು ಅಭ್ಯರ್ಥಿ 8240 ಮತಗಳಿಂದ ಮುಂದಿದ್ದಾರೆ -ಲವ್ಲಿ ಆನಂದ್ ಶಿವಹರ್ 6119 ಮತಗಳಿಂದ ಮುಂದಿದ್ದಾರೆ. -ಗೌತಮ್ ಬುದ್ಧನಗರ ಲೋಕಸಭಾ ಕ್ಷೇತ್ರದಿಂದ ಮಹೇಶ್ ಶರ್ಮಾ ಮುಂದಿದ್ದಾರೆ. -6579 ಹಿಸಾರ್ ನಲ್ಲಿ ಬಿಜೆಪಿಯ ರಂಜಿತ್ ಸಿಂಗ್ ಮುಂದಿದ್ದಾರೆ. -ಸುಲ್ತಾನಪುರದಲ್ಲಿ ಮೇನಕಾ ಗಾಂಧಿ ಹಿನ್ನಡೆ -ಕುರುಕ್ಷೇತ್ರದಲ್ಲಿ ಎಎಪಿಯ ಸುಶೀಲ್ ಗುಪ್ತಾ ಮುಂದಿದ್ದಾರೆ.
ಕಂಗನಾ ರಣಾವತ್ಗೆ ಮುನ್ನಡೆ : ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕಂಗನಾ ರಣಾವತ್ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಬಿಹಾರದಲ್ಲಿ ಕಾಂಗ್ರೆಸ್ 4 ಸ್ಥಾನಗಳಲ್ಲಿ ಮುಂದಿದೆ : ಬಿಹಾರದಲ್ಲಿ ಕಾಂಗ್ರೆಸ್ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅದೇ ಸಮಯದಲ್ಲಿ ಬಿಜೆಪಿಯು 28 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರಾಜಸ್ಥಾನದಲ್ಲಿ ಎನ್‌ಡಿಎ 10 ಸ್ಥಾನಗಳಲ್ಲಿ ಮತ್ತು ಇಂಡಿಯ ಒಕ್ಕೂಟ 15 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಬಂಗಾಳದಲ್ಲಿ ಬಿಜೆಪಿ ಮುನ್ನಡೆ : ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 21 ಸ್ಥಾನಗಳಲ್ಲಿ ಮತ್ತು ಟಿಎಂಸಿ 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 2 ಸ್ಥಾನ ಪಡೆಯುವ ಸಾಧ್ಯತೆ ಇದೆ.
ಹಿಮಾಚಲದಲ್ಲಿ ಬಿಜೆಪಿ ಮುನ್ನಡೆ : ಹಿಮಾಚಲ ಪ್ರದೇಶದ ಎಲ್ಲಾ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಹರ್ಷ್ ಮಲ್ಹೋತ್ರಾ ಮುಂದಿದ್ದಾರೆ ಆನಂದಪುರ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ವಿಜಯ್ ಇಂದರ್ ಸಿಂಗ್ಲಾ ಮುನ್ನಡೆ ಸಾಧಿಸಿದ್ದಾರೆ. ಗೊಡ್ಡಾ ಲೋಕಸಭಾ ಕ್ಷೇತ್ರದಿಂದ ನಿಶಿಕಾಂತ್ ದುಬೆ ಮುನ್ನಡೆ ಸಾಧಿಸಿದ್ದಾರೆ.
ದೆಹಲಿಯಲ್ಲಿ ನಿಕಟ ಸ್ಪರ್ಧೆ : ದೆಹಲಿಯ 7 ಲೋಕಸಭಾ ಸ್ಥಾನಗಳಿಗೆ ತೀವ್ರ ಪೈಪೋಟಿ ನಡೆಯುತ್ತಿದೆ. ಎನ್‌ಡಿಎ 3 ಸ್ಥಾನಗಳಲ್ಲಿ ಮತ್ತು ಇಂಡಿಯಾ ಒಕ್ಕೂಟ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಯುಪಿಯಲ್ಲಿ ನಿಕಟ ಸ್ಪರ್ಧೆ, 32 ಸ್ಥಾನಗಳಲ್ಲಿ ಎಸ್‌ಪಿ ಮುಂದಿದೆ : ಉತ್ತರ ಪ್ರದೇಶದಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಬಿಜೆಪಿ 39 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಸಮಾಜವಾದಿ ಪಕ್ಷದ ಅಭ್ಯರ್ಥಿಗಳು 32 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ನಾಗ್ಪುರದಲ್ಲಿ ನಿತಿನ್ ಗಡ್ಕರಿ ಮುನ್ನಡೆ : ಲೋಕಸಭಾ ಚುನಾವಣಾ ಫಲಿತಾಂಶದ ಟ್ರೆಂಡ್‌ಗಳಲ್ಲಿ ನಿತಿನ್ ಗಡ್ಕರಿ ನಾಗ್ಪುರದಿಂದ ಮುನ್ನಡೆ ಸಾಧಿಸಿದ್ದಾರೆ.
ಅಮಿತ್ ಶಾಗೆ ಮುನ್ನಡೆ : ಕೇಂದ್ರ ಗೃಹ ಸಚಿವ ಅಮಿತ್ ಶಾ ಗಾಂಧಿನಗರದಲ್ಲಿ 1.30 ಲಕ್ಷ ಮತಗಳಿಂದ ಮುಂದಿದ್ದಾರೆ.
ಯುಪಿಯಲ್ಲಿ ಬಿಜೆಪಿ 46, ಸಮಾಜವಾದಿ ಪಕ್ಷ 26 ಸ್ಥಾನಗಳಲ್ಲಿ ಮುನ್ನಡೆ : ಉತ್ತರ ಪ್ರದೇಶದ 80 ಸೀಟುಗಳ ಪೈಕಿ 79 ಸ್ಥಾನಗಳ ಟ್ರೆಂಡ್‌ಗಳು ಬಹಿರಂಗವಾಗಿವೆ. ಈ ಪೈಕಿ ಬಿಜೆಪಿ 46 ಸ್ಥಾನಗಳಲ್ಲಿ ಮತ್ತು ಸಮಾಜವಾದಿ ಪಕ್ಷ 26 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ
ಜಲಂಧರ್‌ನಲ್ಲಿ ಚರಂಜಿತ್ ಚನ್ನಿ ಮುನ್ನಡೆ, ಅನಂತನಾಗ್‌ನಲ್ಲಿ ಮೆಹಬೂಬಾ ಮುಫ್ತಿಗೆ ಹಿನ್ನಡೆ : ಜಲಂಧರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚರಂಜಿತ್ ಸಿಂಗ್ ಚನ್ನಿ ಮುನ್ನಡೆ ಸಾಧಿಸಿದ್ದಾರೆ. ಪಿಡಿಪಿ ವರಿಷ್ಠೆ ಮೆಹಬೂಬಾ ಮುಫ್ತಿ ಅನಂತ್‌ನಾಗ್‌ನಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ : ರಮಣ್ ಸಿಂಗ್ ಛತ್ತೀಸ್‌ಗಢದ ಮಾಜಿ ಸಿಎಂ ಹಾಗೂ ಬಿಜೆಪಿ ನಾಯಕ ರಮಣ್ ಸಿಂಗ್ ಮಾತನಾಡಿ, ಇಂದು ದೇಶಕ್ಕೆ ಮಹತ್ವದ ದಿನ, ಭಾರತದಲ್ಲಿ ಬದಲಾವಣೆ ಆಗಲಿದೆ. ನರೇಂದ್ರ ಮೋದಿಯವರು ಸಂಪೂರ್ಣ ಬಹುಮತದೊಂದಿಗೆ ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಕನ್ಹಯ್ಯಕುಮಾರ್ ಮುನ್ನಡೆ : ದೆಹಲಿ ಈಶಾನ್ಯ ಕ್ಷೇತ್ರದಲ್ಲಿ ಕನ್ಹಯ್ಯಕುಮಾರ್ಗೆ ಮುನ್ನಡೆ