ಚಿತ್ರದುರ್ಗ. ಜೂನ್.07: ಗುರುವಾರ ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಯಾಪುರದಲ್ಲಿ 80 ಮಿ.ಮೀ ಮಳೆ ಸುರಿದಿದೆ, ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ.
ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 23.2ಮಿ.ಮೀ, ಪರುಶುರಾಂಪುರ 41.2ಮಿ.ಮೀ, ನಾಯಕನಹಟ್ಟಿ 77.4ಮಿ.ಮೀ, ತಳಕು 34.4ಮಿ.ಮೀ, ಡಿ. ಮರಿಕುಂಟೆ 13.6 ಮಿ.ಮೀ ಮಳೆಯಾಗಿದೆ.
ಜಿಲ್ಲೆಯಾದ್ಯಂತ 32 ಮನೆಗಳಿಗೆ ಹಾನಿ: ಗುರುವಾರ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಒಟ್ಟು 32 ಮನೆಗಳು ಹಾನಿಯಾಗಿವೆ.
ಚಿತ್ರದುರ್ಗ ತಾಲೂಕಿನಲ್ಲಿ 11 ಮನೆಗಳು ಹಾನಿಯಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 5 ಮನೆಗಳು ಹಾಗೂ 2 ಹೆಕ್ಟೇರ್ ತೋಟಗಾರಿಕೆ ಬೆಳೆ ಕೂಡ ಹಾನಿಯಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 1 ಮನೆ ಹಾನಿಯಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 9 ಸಣ್ಣ ಜಾನುವಾರು ಹಾನಿಯಾಗಿದೆ.
ಮೊಳಕಾಲ್ಮೂರು ತಾಲೂಕಿನಲ್ಲಿ 16 ಮನೆಗಳು ಹಾಗೂ 4 ಸಣ್ಣ ಜಾನುವಾರು, 1 ದೊಡ್ಡ ಜಾನುವಾರು ಹಾನಿ, 19 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.