ಗೋಕಾಕ : ಮುಂದಿನ ಪೀಳಿಗೆಗಾಗಿ ಸರ್ವರೂ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಗೋಕಾಕ ನಗರದ ಎನ್‌ಎಸ್‌ಎಸ್‌ಎಫ್ ವಿದ್ಯಾರ್ಥಿಶಾಲಾ ಕಾರ್ಯಕ್ರಮದಲ್ಲಿ ಘಟಪ್ರಭಾ ಅರಣ್ಯ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸನ್ಮಾನಿಸಿ ಸಸಿ ನೆಟ್ಟು, ಸನ್ಮಾನ ಸ್ವೀಕರಿಸಿದರು.
ಭೂಮಿಯ ಮೇಲೆ ವಾಸಿಸುತ್ತಿರುವ ಎಲ್ಲಾ ಜೀವ ರಾಶಿಗಳಿಗೆ ಅತ್ಯವಶ್ಯಕವಾಗಿರುವ ಈ ಪರಿಸರವನ್ನು ಹಾಳು ಮಾಡದೆ ಸಂರಕ್ಷಿಸುವ ಕುರಿತು ಜನಜಾಗೃತಿ ಮೂಡಿಸೋಣ. ಪರಿಸರ ನೆಮ್ಮಲ್ಲರ ಉಸಿರು. ಅರಣ್ಯ ಉಳಿದರೇ ನಾಡು ಉಳಿಯುತ್ತದೆ. ನೀರು, ಹವಾಮಾನ, ಭೂಮಿ ಮಾಲಿನ್ಯವಾಗದಂತೆ ನೋಡಿಕೊಳ್ಳಬೇಕು.
ಎಲ್ಲರೂ ಪರಿಸರ ಸ್ನೇಹಿ ಜೀವನ ಅಳವಡಿಸಿಕೊಂಡಲ್ಲಿ ಪರಿಸರ ಸಂರಕ್ಷಣೆ ಸಾಧ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.