Skip to content
ಹೊಸನಗರ : ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದರ ಪರಿಣಾಮ ಮನೆಯೊಂದರ ಮೇಲೆ ಮರ ಬಿದ್ದು ಹಾನಿಯಾಗಿರುವ ಘಟನೆ ನಡೆದಿದೆ.
ಹೊಸನಗರ ತಾಲ್ಲೂಕಿನ ಹರತಾಳು ಗ್ರಾ ಪಂ ವ್ಯಾಪ್ತಿಯ ದೊಂಬೆಕೊಪ್ಪ ಗ್ರಾಮದ ಮಣಿ ಎಂಬುವರ ಮನೆ ಮೇಲೆ ಶನಿವಾರ ಮಧ್ಯಾಹ್ನ ಬುಡ ಸಮೇತ ಹಲಸಿನ ಮರ ಬಿದ್ದು ಭಾಗಶಃ ಮನೆ ಜಖಂಗೊಂಡಿದೆ.
ಆರ್ಥಿಕವಾಗಿ ಅತ್ಯಂತ ಹಿಂದುಳಿದ ಮಣಿ ಕುಟುಂಬ ಈ ಮಳೆಗಾಲದ ಆರಂಭದಲ್ಲೇ ಮನೆ ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ.