Breaking
Wed. Dec 25th, 2024

ಭವಿಷ್ಯನಿಧಿ ಮೊತ್ತವನ್ನು ಸಿಬ್ಬಂದಿಯ ವೇತನದೊಂದಿಗೆ ಸೇರಿಸಿ ಪಾವತಿಸಿದಲ್ಲಿ ಅದು ಅಪರಾಧವಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಣೆ…!

ಬೆಂಗಳೂರು : ಉದ್ಯೋಗದಾತ ಸಂಸ್ಥೆಯು ತನ್ನ ಸಿಬ್ಬಂದಿಗೆ ಪಾವತಿಸಬೇಕಾದ ಭವಿಷ್ಯನಿಧಿ ಮೊತ್ತವನ್ನು ಸಿಬ್ಬಂದಿಯ ವೇತನದೊಂದಿಗೆ ಸೇರಿಸಿದರೆ ಅದು ಅಪರಾಧವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ದಾಸರಹಳ್ಳಿ ಶಾಸಕ ಮುನಿರಾಜು ಅವರ ಮಗಳು ಸ್ವಪ್ನ ಅವರು ಕಾರ್ಯದರ್ಶಿಯಾಗಿರುವ ಶ್ರೀಬಾಲಾಜಿ ಚಾರಿಟೇಬಲ್ ಟ್ರಸ್ಟ್ ಮತ್ತು ಸಂಸ್ಥಾಪಕ ಟ್ರಸ್ಟಿ ಬಿ.ಆರ್. ರಮೇಶ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದಕ್ಕೆ ಸಂಬಂಧಿಸಿದ ನ್ಯಾಯಾಲಯದ ಪ್ರಕ್ರಿಯೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ನ್ಯಾಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜು ಅವರಿದ್ದಪೀಠ ಈ ಆದೇಶ ನೀಡಿದೆ. ಜೊತೆಗೆ, ಸಿಬ್ಬಂದಿಯ ವೇತನದಿಂದ ನಿಧಿ ಮೊತ್ತವನ್ನು ಕಡಿತಗೊಳಿಸಿ ಭವಿಷ್ಯ ನಿಧಿ ಸಂಸ್ಥೆಗೆ ಪಾವತಿ ಮಾಡದಿರುವುದು ಅಪರಾಧ ಘಟನೆಯಾಗಿದೆ. ಆದರೆ, ಪ್ರಸ್ತುತ ಅರ್ಜಿದಾರರ ಸಿಬ್ಬಂದಿಯ ಭವಿಷ್ಯದ ಮೊತ್ತವನ್ನು ಸಿಬ್ಬಂದಿ ವೇತನದಲ್ಲಿ ಪಡೆದಿದ್ದಾರೆ, ಯಾವುದೇ ಮೊತ್ತವನ್ನು ತಮ್ಮಲ್ಲಿ ಉಳಿಸಿಕೊಂಡಿಲ್ಲ. ಅದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ. ಆದ್ದರಿಂದ ಅರ್ಜಿದಾರರ ವಿರುದ್ಧ ನಂಬಿಕೆ ದ್ರೋಹದ ಆರೋಪದಲ್ಲಿ ವಿಚಾರಣೆಗೆ ಒಳಪಡಿಸಲು ಅವಕಾಶವಿಲ್ಲ ಎಂದು ಪೀಠ ಇಲ್ಲ.
ಆದಾಗ್ಯೂ, ಸಿಬ್ಬಂದಿಗೆ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ದಂಡವಾಗಿ ಪಾವತಿಸಲಾಗಿದೆ. ದಾಖಲೆಗಳ ಪ್ರಕಾರ ಎಲ್ಲ ಮೊತ್ತದ ನಂತರ ತನಿಖೆ ಮುಂದುವರೆಯಲು ಸಾಧ್ಯವಿಲ್ಲ.
ಪ್ರಕರಣದ ಹಿನ್ನೆಲೆ: ಅರ್ಜಿದಾರರು ಬಾಲಾಜಿ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಟ್ರಸ್ಟಿ ಮತ್ತು ಕಾರ್ಯದರ್ಶಿಗಳಾಗಿದ್ದಾರೆ. ಟ್ರಸ್ಟ್ ವತಿಯಿಂದ ರೈನ್ಬೋ ಇಂಟರ್‌ಪೂರ್ವ ಸ್ಕೂಲ್ ಮತ್ತು ರೈನ್ಬೋ ಪದವಿ ಕಾಲೇಜು ನಡೆಸುತ್ತಿದೆ. 2014ರ ಜೂನ್ ತಿಂಗಳಿನಿಂದ 2015ರ ಜನವರಿ ತಿಂಗಳವರೆಗೆ ಬಾಕಿ ಉಳಿಸಿಕೊಂಡಿರುವ ಶಾಲಾ ಸಿಬ್ಬಂದಿಯ ಭವಿಷ್ಯ ನಿಧಿಯ ಮೊತ್ತವನ್ನು ಪಾವತಿಸುವಂತೆ ಕೋರಿ 2014ರ ಆಗಸ್ಟ್ 26ರಂದು ಕಾರ್ಮಿಕ ಭವಿಷ್ಯ ನಿಧಿ ಸಂಸ್ಥೆಯ ಜಾರಿ ಅಧಿಕಾರಿ ಶಾಲೆಗೆ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ ನೀಡಿದ ತಕ್ಷಣ ಅರ್ಜಿದಾರರು ಬಾಕಿ ಮೊತ್ತವನ್ನು ಪಾವತಿಸಿ ರಸೀದಿಯನ್ನು ಇದ್ದರು.

Related Post

Leave a Reply

Your email address will not be published. Required fields are marked *