ವಾಲ್ಮೀಕಿ ಅಬಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ಭ್ರಷ್ಟಾಚಾರ ವಿಷಯವಾಗಿ ಸಭೆ

ಮಹೇಶ್ ಶಿಗಿಹಳ್ಳಿ ನೇತೃತ್ವದಲ್ಲಿ ಸಂಘಟನೆಯ ಸವದತ್ತಿ ಬೈಲಹೊಂಗಲ ಯರಗಟ್ಟಿ ರಾಯಬಾಗ ಖಾನಾಪುರ ಕಿತ್ತೂರು ಬೆಳಗಾವಿ ತಾಲೂಕು ಮತ್ತು ಗ್ರಾಮೀಣ ಬೆಳಗಾವಿ ನಗರ ಕಮಿಟಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಪದಗ್ರಹಣ ಮಾಡಲಾಯಿತು.
ಮತ್ತು ವಾಲ್ಮೀಕಿ ಅಬಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ಭ್ರಷ್ಟಾಚಾರ ವಿಷಯವಾಗಿ ಸಭೆಯಲ್ಲಿ ಚರ್ಚೆ ಮಾಡಿ ನಿಗಮದಲ್ಲಿ ಇರುವ ಅಧಿಕಾರಿಗಳು ಮತ್ತು ಕೆಲವು ರಾಜಕಾರಣಿಗಳ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟು ಮೃತ ಪಟ್ಟ ನಿಗಮದ ಅಧಿಕಾರಿ ಚಂದ್ರಶೇಖರ್ ರವರ ಡೆತ್ ನೋಟ್ ನಂತೆ ಸರಿಯಾಗಿ ತನಿಖೆ ಆಗಿ ತಪ್ಪಿತಸ್ಥರ ಮೇಲೆ ಸರಿಯಾದ ಕ್ರಮ ಕೈಗೊಂಡು ಯಾವುದೇ ಬಲಿಷ್ಠ ರಾಜಕಾರಣಿ ಆಗಿರಲಿ ಅಧಿಕಾರಿ ಯಾಗಿರಲಿ ಅವರ ಮೇಲೆ ಯಾವುದೇ ಮುಲಾಜ್ ಇಲ್ಲದೆ ತನಿಖೆ ಮಾಡಿ ಶಿಕ್ಷೆ ನೀಡಲಿ ವಾಲ್ಮೀಕಿ ನಾಯಕ ಸಮುದಾಯಕ್ಕೆ ನ್ಯಾಯ ಸಿಗಲಿ ಮತ್ತು 187 ಕೋಟಿ ಭ್ರಷ್ಟಾಚಾರ ಹಣವನ್ನು ವಾಪಸ್ಸು ನಿಗಮಕ್ಕೆ ನಿಯೋಗ ಮಾಡಲೇಬೇಕು.
ಇಲ್ಲವಾದರೆ ಸರಕಾರದ ವಿರುದ್ಧ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಮಹೇಶ ಎಸ್ ಶಿಗೀಹಳ್ಳಿ ರಾಜ್ಯಾಧ್ಯಕ್ಷರು ಎಚ್ಚರಿಕೆ ನೀಡಿದರು.
ಮತ್ತು ಸಭೆಯಲ್ಲಿ ಮುಂದಿನ ಹೋರಾಟಗಳ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದರು. ಈ ಸಂದರ್ಬದಲ್ಲಿ ಬೆಳಗಾವಿ ಜಿಲ್ಲೆ ಮತ್ತು ತಾಲೂಕು ಮತ್ತು ಗ್ರಾಮೀಣ ಬೆಳಗಾವಿ ನಗರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *