Breaking
Wed. Dec 25th, 2024

3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಭಾರಿ ಭದ್ರತಾ ವ್ಯವಸ್ಥೆ…!

ನರೇಂದ್ರ ಮೋದಿ ಯವರು ಇಂದು 3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಭಾರಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಇಡೀ ದೆಹಲಿಗೆ ಮೂರು ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು, ರಾಷ್ಟ್ರಪತಿ ಭವನಕ್ಕೆ ಐದು ಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಎಸ್ಡಬ್ಲ್ಯೂಎಟಿ ಹಾಗೂ ಎನ್ಎಸ್ಜಿ ಕಮಾಂಡೋಗಳು ಹದ್ದಿನ ಕಣ್ಣಿರಿಸಿದ್ದಾರೆ. ಪ್ಯಾರಾ ಮಿಲಿಟರಿ, ಎನ್ಎಸ್ಜಿ ಕಮಾಂಡೋಗಳು, ಡ್ರೋನ್ ಹಾಗೂ ಸ್ನೈಪರ್ಗಳ ಮೂಲಕ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಸುಮಾರು 5ಕ್ಕೂ ಹೆಚ್ಚು ರಾಷ್ಟ್ರಗಳಿಂದ ಗಣ್ಯರು ಆಗಮಿಸುತ್ತಿದ್ದಾರೆ, ಗಣ್ಯರ ಆಗಮನ ಹಿನ್ನೆಲೆ ಹೋಟೆಲ್ಗಳಿಗೂ ಭದ್ರತೆ ಕಲ್ಪಿಸಲಾಗಿದೆ. ದಎಹಲಿಯಲ್ಲಿ ಸುಮಾರು 2,500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರಧಾನಿ ಮೋದಿ ಇಂಡಿಯಾ ಗೇಟ್ ಬಳಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಲಿದ್ದಾರೆ, ಸಂಜೆ 7.15ಕ್ಕೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನೆರವೇರಲಿದೆ. ಮಾಜಿ ಪ್ರಧಾನಿ ವಾಜಪೇಯಿ ಅವರ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.
ಯಾರೆಲ್ಲಾ ಗಣ್ಯರು ಬರ್ತಾರೆ? ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ದೇಶದ ಒಳಗಿನ ಗಣ್ಯರಷ್ಟೇ ಅಲ್ಲ, ವಿದೇಶಿ ಗಣ್ಯರೂ ಆಗಮಿಸುತ್ತಿದ್ದಾರೆ. ಬಾಂಗ್ಲಾದೇಶ, ಮಾಲ್ಡೀವ್ಸ್, ಭೂತಾನ್, ನೇಪಾಳ, ಮಾರಿಷಸ್ನ ನಾಯಕರು ಆಗಮಿಸಲಿದ್ದಾರೆ. 50 ಮಂದಿ ಧಾರ್ಮಿಕ ನಾಯಕರು, ಪ್ರಮುಖ ಲಾಯರ್ಗಳು, ವೈದ್ಯರು, ಕಲಾವಿದರು, ಪ್ರಭಾವಿಗಳು, ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಆಗಮಿಸಲಿದ್ದಾರೆ.
ದೆಹಲಿಯಲ್ಲಿ ಜೂನ್ 9 ಮತ್ತು 10 ಕ್ಕೆ ಸಿಆರ್‌ಪಿಸಿಯ ಸೆಕ್ಷನ್ 144 ಜಾರಿಗೊಳಿಸಲು ಆದೇಶ ಹೊರಡಿಸಿದ್ದಾರೆ. ಜೂನ್ 9 ಮತ್ತು 10 ರಂದು ದೆಹಲಿಯನ್ನು ಫ್ಲೈ ಝೋನ್ ಎಂದು ಘೋಷಿಸಲಾಗಿದೆ. ಈ ದಿನಗಳಲ್ಲಿ, ಗ್ಲೈಡರ್‌ಗಳು, ಯುಎವಿಗಳು, ಯುಎಎಸ್, ಮೈಕ್ರೋಲೈಟ್ ಏರ್‌ಕ್ರಾಫ್ಟ್‌ಗಳು, ರಿಮೋಟ್ ಪೈಲಟ್ ಏರ್‌ಕ್ರಾಫ್ಟ್‌ಗಳು, ಹಾಟ್ ಏರ್ ಬಲೂನ್‌ಗಳು, ಸಣ್ಣ ಗಾತ್ರದ ಪೈಲಟ್ ವಿಮಾನಗಳು, ಕ್ವಾಡ್‌ಕಾಪ್ಟರ್‌ಗಳು ಅಥವಾ ವಿಮಾನಗಳಿಂದ ಪ್ಯಾರಾ-ಜಂಪಿಂಗ್‌ಗೆ ನಿಷೇಧವಿರುತ್ತದೆ. ರಾಷ್ಟ್ರಪತಿ ಭವನದಿಂದ ಹಿಡಿದು ವಿದೇಶಿ ಅತಿಥಿಗಳಿಗೆ ಆತಿಥ್ಯ ನೀಡುವ ಹೋಟೆಲ್‌ಗಳವರೆಗೆ ಪ್ರತಿಯೊಂದರಲ್ಲೂ ಡ್ರೋನ್ ವಿರೋಧಿ ವ್ಯವಸ್ಥೆಗಳನ್ನು ನಿಯೋಜಿಸಲಾಗಿದೆ.

Related Post

Leave a Reply

Your email address will not be published. Required fields are marked *