ಪವನ್ ಕಲ್ಯಾಣ್ ಅವರು ಬಾರಿ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ. ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ, ಈ ಬಾರಿ ಅವರ ಪಕ್ಷದಿಂದ ಆಯ್ಕೆಯಾದ 21 ಸ್ಥಾನಗಳಲ್ಲಿ ಅವರಿಗೆ ಗೆಲುವು ಸಿಕ್ಕಿದೆ. ಅವರು ಸಂಭಾವನೆ ವಿಚಾರದಲ್ಲಿ ಈಗ ಮಾತನಾಡಿದ್ದಾರೆ. ತಮಗೆ ಸರ್ಕಾರ ನೀಡುವ ಸಂಬಳದಲ್ಲಿ ಅಷ್ಟೂ ಹಣವನ್ನು ಪಡೆಯೋದಾಗಿ ಪವನ್ ಕಲ್ಯಾಣ್ ಹೇಳಿದ್ದಾರೆ. ಇದಕ್ಕೆ ಕಾರಣ ಕೂಡ ನೀಡಿದೆ.
ಪವನ್ ಕಲ್ಯಾಣ್ ಅವರು ಪ್ರತಿ ಚಿತ್ರಕ್ಕೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅವರಿಗೆ ಬೇರೆ ಬೇರೆ ಮೂಲಗಳಿಂದ ಹಣ ಬರುತ್ತದೆ. ಆದಾಗ್ಯೂ ಅವರು ಸಂಬಳ ಪಡೆಯೋದಾಗಿ ಹೇಳಿದ್ದಾರೆ. ‘ನಾನು ನನ್ನ ಸಂಪೂರ್ಣ ಸಂಭಾವನೆಯನ್ನು ಪಡೆಯುತ್ತೇನೆ. ನಾನು ಸಾರ್ವಜನಿಕರ ತೆರಿಗೆ ಹಣವನ್ನು ಸಂಭಾವನೆಯಾಗಿ ಪಡೆಯುತ್ತಿದ್ದೇನೆ ಅನ್ನೋದು ನನಗೆ ನೆನಪಾಗುತ್ತಿರಬೇಕು. ನಾನು ಖರ್ಚು ಮಾಡುವ ಪ್ರತಿ ರೂಪಾಯಿಗೂಜವಾಬ್ದಾರನಾಗಿರಲು ಬಯಸುತ್ತೇನೆ. ಹೀಗಾಗಿ ಪೂರ್ತಿ ಸಂಭಾವನೆ ಪಡೆಯುತ್ತೇನೆ. ಅವರ ಹಣವನ್ನು ಬಳಸುವುದಕ್ಕಾಗಿ ನನ್ನನ್ನು ಜನರು ಪ್ರಶ್ನಿಸಲು ನಾನು ಬಯಸುತ್ತೇನೆ’ ಎಂದು ಅವರು.
‘ಜವಾಬ್ದಾರಿಯುತ ಸರ್ಕಾರ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತೋರಿಸಲು ನಾನು ಬಯಸುತ್ತೇನೆ. ನಾನು ಆ ಬದಲಾವಣೆಯನ್ನು ತರಬೇಕಾಗಿದೆ. ನಿಜವಾದ ಶಾಸಕರು ಹೇಗೆ ಇರುತ್ತಾರೆ ಮತ್ತು ನಿಜವಾದ ನಾಯಕರಾಗುವುದು ಹೇಗೆ ಎಂದು ತೋರಿಸಬೇಕಾಗಿದೆ’ ಎಂದು ಪವನ್ ಕಲ್ಯಾಣ್.
ಟಿಡಿಪಿ ನೇತೃತ್ವದ ಸಂಪುಟದಲ್ಲಿ ಪವನ್ ಕಲ್ಯಾಣ್ ಯಾವ ಖಾತೆಯನ್ನು ತೆಗೆದುಕೊಳ್ಳುತ್ತಾರೆ ನೋಡಲು ಅಭಿಮಾನಿಗಳು ಮತ್ತು ವೀಕ್ಷಿಸುತ್ತಿದ್ದಾರೆ. ಶಾಸಕರ ವೇತನ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಆಂಧ್ರ ಪ್ರದೇಶದ ಶಾಸಕರಿಗೆ ತಿಂಗಳ ಸಂಭಾವನೆ 1,25,000 ಇದೆ. ಇದರ ಜೊತೆಗೆ ಇತರ ಭತ್ಯೆಗಳು ಕೂಡ ಸಿಗುತ್ತವೆ.