ಚಿತ್ರದುರ್ಗ, ಜೂ.11 : ಆರ್ಯ ವೈಶ್ಯ ಸಂಘ ಮತ್ತು ಆರ್ಯವೈಶ್ಯ ಅಧಿಕಾರಿಗಳ ಹಾಗೂ ವೃತ್ತಿನಿರತರ ಸಂಘದ ವತಿಯಿಂದ ಋಣಾನುಬಂಧ ಆರ್ಯವೈಶ್ಯ ರಾಜ್ಯ ಮಟ್ಟದ ಪ್ರಥಮ ವಧು-ವರರ ಉಚಿತ ಪರಿಚಯ ವೇದಿಕೆ ಜೂ. 16 ರಂದು ಬೆಳಿಗ್ಗೆ 10 ಕ್ಕೆ ವಾಸವಿ ಮಹಲ್ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆವೋಪ ಅಧ್ಯಕ್ಷ ಪಿ.ಎಲ್.ಸುರೇಶ್ರಾಜು ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗಂಡು-ಹೆಣ್ಣನ್ನು ಒಂದು ವೇದಿಕೆಗೆ ತರುವ ಉದ್ದೇಶ ಇದಾಗಿದ್ದು, ಹಣ ಮತ್ತು ಸಮಯ ಎರಡು ಉಳಿತಾಯವಾಗಲಿದೆ. ಮಡಿಕೇರಿ, ಬೀದರ್, ಆಂಧ್ರ, ತಮಿಳುನಾಡಿನಿಂದಲೂ ಅರ್ಜಿಗಳು ಬಂದಿವೆ. ಇದುವರೆವಿಗೂ ಐದುನೂರು ಅರ್ಜಿಗಳು ನಮ್ಮ ಕೈಸೇರಿದ್ದು, ನೊಂದಣಿ ಹಾಗೂ ಗೋತ್ರ ಸೇರಿದಂತೆ ಹನ್ನೆರಡು ಕೌಂಟರ್ಗಳನ್ನು ತೆರೆಯಲಾಗಿದೆ.
ಪ್ರತಿ ಹಳ್ಳಿ ಹಳ್ಳಿಗಳಿಂದಲೂ ಉಚಿತ ವಧು-ವರರ ಪರಿಚಯ ವೇದಿಕೆಗೆ ಬೇಡಿಕೆಯಿದ್ದು, ನಮ್ಮ ಜನಾಂಗದಲ್ಲಿ ಕನ್ಯೆಗಳು ಸಿಗುವುದು ಕಷ್ಟವಾಗಿರುವುದರಿಂದ ಋಣಾನುಬಂಧ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆರ್ಯವೈಶ್ಯ ಜನಾಂಗದವರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪಿ.ಎಲ್.ಸುರೇಶ್ರಾಜು ಮನವಿ ಮಾಡಿದರು.
ಆವೋಪ ಕಾರ್ಯದರ್ಶಿ ಡಿ.ಆರ್.ತಿಪ್ಪೇಸ್ವಾಮಿ, ಸಂಚಾಲಕ ಎನ್.ವಿ. ವೆಂಕಟೇಶಮೂರ್ತಿ, ಆವೋಪ ಮಾಜಿ ಅಧ್ಯಕ್ಷ ಮೋಹನ್ಕುಮಾರ್, ಜಂಟಿ ಕಾರ್ಯದರ್ಶಿ ಎ.ವಿ.ಸುರೇಶ್ಬಾಬು, ನಿರ್ದೇಶಕರುಗಳಾದ ಆರ್.ಸಿ.ನಾಗರಾಜು, ಸುಹಾಸ್, ಸಿ.ಜೆ.ಲಕ್ಷ್ಮಿನರಸಿಂಹಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.