ಮೈಸೂರು : ಬೆಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಬೆಂಗಳೂರು ಮೈಸೂರು ರಾಡಿಸನ್ ಬ್ಲ್ಯೂ ಹೋಟೆಲ್‌ನಲ್ಲಿ ಬಂಧಿಸಲಾಗಿದೆ.
ಇಂದು ಬೆಳಗ್ಗೆ 6.30ಕ್ಕೆ ದರ್ಶನ್ ಹೋಟೆಲ್‌ನಿಂದ ಜಿಮ್‌ಗೆ ವ್ಯಾಯಾಮಕ್ಕೆಂದು ಮೈಸೂರಿನ ಗೋಲ್ಡ್ ಜಿಮ್‌ಗೆ ತೆರಳಿದ್ದರು. ಬೆಳಗ್ಗೆ 8. 30ಕ್ಕೆ ಜಿಮ್ ವ್ಯಾಯಾಮ ಮುಗಿಸಿ ವಾಪಸ್ ಬರುತ್ತಿದ್ದಂತೆಯೇ ಪೊಲೀಸರು ಬಂಧಿಸಿದ್ದಾರೆ.
ದರ್ಶನ್ ಅಭಿನಯದ ಡೆವಿಲ್ ಸಿನೆಮಾದ ಹೆಸರಿನಲ್ಲಿ ಹೋಟೆಲ್‌ನಲ್ಲಿ ರೂಂ ಬುಕ್ ಆಗಿದೆ. ಜೂನ್ 9 ರಿಂದ ದರ್ಶನ್ ಈ ಹೋಟೆಲ್‌ನಲ್ಲಿದ್ದು, ರೂಂನಲ್ಲಿ ಒಬ್ಬರೇ ಉಳಿದುಕೊಂಡಿದ್ದರು.
ಮೈಸೂರು ಮುಂಭಾಗದಲ್ಲಿ ದರ್ಶನ್ ಬಳಸುತ್ತಿದ್ದ ಕೆಎ 01 ಎಂವೈ 7999 ನಂಬರಿನ ರೇಂಜ್ ರೋವರ್ ಡಿಫೆಂಡರ್ ಕಾರು ನಿಂತಿದೆ. ದರ್ಶನ್ ಅರೆಸ್ಟ್ ಮಾಡಿದ ಬಳಿಕ ತಮ್ಮ ಕಾರಿನಲ್ಲೇ ಬೆಂಗಳೂರಿಗೆ ಕರೆದೊಯ್ದಿದ್ದಾರೆ.