Breaking
Tue. Dec 24th, 2024

ಮನೆಗೆ ಸೀಮಿತಳಾಗಿದ್ದ ಮಹಿಳೆ ಇಂದು ಸಬಲೆಯಾಗಿ ಬದುಕಲು ಅನೇಕ ಯೋಜನೆಗಳಿವೆ ಎಂದು ರುಡ್‍ಸೆಟ್ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ರಾಧ….!

ಚಿತ್ರದುರ್ಗ, ಜೂ.11 : ಒಂದು ಕಾಲದಲ್ಲಿ ಅಡುಗೆ ಮನೆಗೆ ಸೀಮಿತಳಾಗಿದ್ದ ಮಹಿಳೆ ಇಂದು ಸಬಲೆಯಾಗಿ ಬದುಕಲು ಅನೇಕ ಯೋಜನೆಗಳಿವೆ ಎಂದು ರುಡ್‍ಸೆಟ್ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ರಾಧ ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸಿರಿಗೆರೆ ಯೋಜನಾ ಕಚೇರಿ ವ್ಯಾಪ್ತಿಯ ಡಿ.ಮದಕರಿಪುರ ಕಾರ್ಯಕ್ಷೇತ್ರದ ಸ್ಪೂರ್ತಿ ಜ್ಞಾನವಿಕಾಸ ಕೇಂದ್ರದಲ್ಲಿ ಮಹಿಳೆಯರಿಗೆ ಸ್ವ-ಉದ್ಯೋಗ ತರಬೇತಿ ಉದ್ಗಾಟಿಸಿ ಮಾತನಾಡಿದರು.
ಧರ್ಮಸ್ಥಳದ ಹೇಮಾವತಿ ಅಮ್ಮನವರು ಜ್ಞಾನವಿಕಾಸ ಕಾರ್ಯಕ್ರಮ ಮೂಲಕ ಮಹಿಳೆಯರಿಗೆ ನಾನಾ ರೀತಿಯ ಮಾಹಿತಿಗಳನ್ನು ನೀಡುತ್ತ ಹೇಗೆ ಸ್ವಾವಲಂಭಿಯಾಗಿ ಬದುಕಬಹುದು ಎನ್ನುವುದನ್ನು ಕಲಿಸುತ್ತಿದ್ದಾರೆ. ಟೈಲರಿಂಗ್, ಎಂಬ್ರಾಯಿಡಿಂಗ್, ಅಣಬೆ ಬೇಸಾಯ, ಕುರಿ ಸಾಕಾಣಿಕೆ, ಬ್ಯೂಟಿ ಪಾರ್ಲರ್ ಇನ್ನು ಹತ್ತು ಹಲವಾರು ತರಬೇತಿಗಳನ್ನು ಪಡೆಯುವುದರಿಂದ ಮಹಿಳೆ ಮನೆಯಲ್ಲಿಯೇ ಕುಳಿತ ಹಣ ಸಂಪಾದಿಸುವ ಅವಕಾಶಗಳಿವೆ. ಎಲ್ಲವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ತರಬೇತಿ ಪಡೆಯುವವರಿಗೆ ರುಡ್‍ಸೆಟ್ ಸಂಸ್ಥೆಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಮಹಿಳೆಯರು ತರಬೇತಿಗಳನ್ನು ಪಡೆಯುವ ಮೂಲಕ ಆರ್ಥಿಕವಾಗಿ ಸ್ವಾವಲಂಭಿಗಳಾಗಬಹುದೆಂದು ಹೇಳಿದರು.
ಕುಬೇರಮ್ಮ, ಕಮಲಾಕ್ಷಿ, ರೂಪ, ಪ್ರಮೀಳ, ಶ್ರೀದೇವಿ, ಜಯಶೀಲ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶಿವಲೀಲ ಎಸ್.ಬಾಗೋಡಿ ವೇದಿಕೆಯಲ್ಲಿದ್ದರು.

Related Post

Leave a Reply

Your email address will not be published. Required fields are marked *