Breaking
Mon. Dec 23rd, 2024

ದರ್ಶನ್ ಹಾಗೂ ಪವಿತ್ರಾ ಗೌಡ  ಸೇರಿದಂತೆ ಎಲ್ಲ 13 ಜನರ ಹೆಸರು ಮತ್ತು ವಿಳಾಸ ಬಹಿರಂಗ…!

ಚಿತ್ರದುರ್ಗದ ರೇಣುಕಾ ಸ್ವಾಮಿ  ಅವರನ್ನು ಬೆಂಗಳೂರಿನಲ್ಲಿ ಕೊಲೆ ಮಾಡಿದ ಆರೋಪದಲ್ಲಿ ಒಟ್ಟು 13 ಜನರ ಬಂಧನ ಆಗಿದೆ. ನಟ ದರ್ಶನ್ , ಪವಿತ್ರಾ ಗೌಡ ಅವರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ಹಲವು ಜನರಿಂದ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ವೇಳೆ ಹಲವರ ಹೆಸರು ಹೊರಗೆ ಬಂದಿದೆ. ಕ್ಷುಲ್ಲಕ ವಿಚಾರದಿಂದ ಕೊಲೆ ನಡೆದುಹೋಗಿದೆ.
ಈ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾದ ದರ್ಶನ್ ಹಾಗೂ ಪವಿತ್ರಾ ಗೌಡ  ಸೇರಿದಂತೆ ಎಲ್ಲ 13 ಜನರ ಹೆಸರು ಮತ್ತು ವಿಳಾಸ ಬಹಿರಂಗ ಆಗಿವೆ. ದರ್ಶನ್, ಪವಿತ್ರಾ ಗೌಡ ಜೊತೆ ವಿ. ವಿನಯ್, ಆರ್.ನಾಗರಾಜು, ಎಂ. ಲಕ್ಷ್ಮಣ್, ಎಸ್. ಪ್ರದೋಶ್, ಕೆ. ಪವನ್, ದೀಪಕ್ ಕುಮಾರ್, ನಂದೀಶ್, ಕಾರ್ತಿಕ್, ನಿಖಿಲ್ ನಾಯಕ್, ಕೇಶವಮೂರ್ತಿ, ರಾಘವೇಂದ್ರ ಅಲಿಯಾಸ್ ರಾಘು ಈಗ ಪೊಲೀಸರ ವಶದಲ್ಲಿ ಇದ್ದಾರೆ. ಇಂದು (ಜೂನ್ 11) ಸಂಜೆ 4.30ಕ್ಕೆ ಎಲ್ಲರನ್ನೂ ಪೊಲೀಸರು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ.
ಆರೋಪಿಗಳು ವಿವರ ಹೀಗಿದೆ :   ವಿನಯ್ ವಿ – ಜಯಣ್ಣ ಫಾರ್ಮ್ ಹೌಸ್. ನಾಗರಾಜು ಆರ್ – ರಾಮಕೃಷ್ಣ ನಗರ ಮೈಸೂರು. ಲಕ್ಷ್ಮಣ್ ಎಂ – ಆರ್ಪಿಸಿ ಲೇಔಟ್, ಬೆಂಗಳೂರು. ಪ್ರದೋಶ್ ಎಸ್. – ಗಿರಿನಗರ. ಪವನ್ ಕೆ – ಚನ್ನಪಟ್ಟಣ (ಆರ್ ಆರ್ ನಗರದಲ್ಲಿ ವಾಸ). ದೀಪಕ್ ಕುಮಾರ್ ಎಂ – ಆರ್.ಆರ್. ನಗರ. ನಂದೀಶ್ – ಮಂಡ್ಯ (ಆರ್ಆರ್ ನಗರ ವಾಸ). ಕಾರ್ತಿಕ್ – ಗಿರಿ ನಗರ. ನಿಖಿಲ್ ನಾಯಕ್ – ಬನ್ನೇರುಘಟ್ಟ ಮೇನ್, ಕೆಂಬತ್ತಳ್ಳಿ ಗೊಟ್ಟಿಗೇರಿ. ರಾಘವೇಂದ್ರ ಅಲಿಯಾಸ್ ರಾಘು – ಕೋಳಿಹಟ್ಟಿ ದೊಡ್ಡ ಪೇಟೆ, ಚಿತ್ರದುರ್ಗ. ಕೇಶವ ಮೂರ್ತಿ- ಗಿರಿನಗರ.
ಕೊಲೆಯಾದ ರೇಣುಕಾ ಸ್ವಾಮಿ ಕೂಡ ದರ್ಶನ್ ಅಭಿಮಾನಿ ಆಗಿದ್ದ. ಪವಿತ್ರಾ ಗೌಡಗೆ ಮೆಸೇಜ್ ಮಾಡಿದ ಬಗ್ಗೆ ಕೊಲೆಗೂ ಮುನ್ನ ಸ್ನೇಹಿತರ ಬಳಿ ರೇಣುಕಾಸ್ವಾಮಿ ಕೊಲೆಗೂ ಮುನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದ ರೇಣುಕಾಸ್ವಾಮಿ.‘ನಮ್ಮ ಬಾಸ್ ಸಂಸಾರವನ್ನು ಪವಿತ್ರಾ ಗೌಡ ಹಾಳು ಮಾಡಿದ್ದಾಳೆ. ಅದಕ್ಕೆ ಪವಿತ್ರಾ ಗೌಡಗೆ ಮೆಸೇಜ್ ಮಾಡಿದ್ದೆ’ ಎಂದು ರೇಣುಕಾ ಸ್ವಾಮಿ ಹೇಳಿಕೊಂಡಿದ್ದ ಎನ್ನಲಾಗಿದೆ. ತನಿಖೆ ಮುಂದುವರಿದಂತೆಲ್ಲ ಹೊಸ ಹೊಸ ಮಾಹಿತಿಗಳು ಹೊರಬೀಳುತ್ತಿವೆ.

Related Post

One thought on “ದರ್ಶನ್ ಹಾಗೂ ಪವಿತ್ರಾ ಗೌಡ  ಸೇರಿದಂತೆ ಎಲ್ಲ 13 ಜನರ ಹೆಸರು ಮತ್ತು ವಿಳಾಸ ಬಹಿರಂಗ…!”

Leave a Reply

Your email address will not be published. Required fields are marked *