ಬೆಂಗಳೂರು: ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಪಟ್ಟಣಕ್ಕೆರೆಯ ಶೆಡ್ನಲ್ಲಿ ಪೊಲೀಸರು ಇಂದು ಸ್ಥಳ ಮಹಜರು ಮಾಡಿದ್ದಾರೆ. ಆರೋಪಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳನ್ನು ಕರೆತಂದು ಕಾಮಾಕ್ಷಿ ಪಾಳ್ಯ ಸ್ಥಳ ಮಹಜರು ಮಾಡಿದ್ದಾರೆ.
ಪೊಲೀಸ್ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ಪ್ರಯೋಗಾಲಯ ತಂಡ ಸುಮಾರು ಒಂದೂವರೆಗಂಟೆಗೂ ಹೆಚ್ಚು ಕಾಲ ತಪಾಸಣೆ ನಡೆಸಲಾಗಿದೆ. ಕೊಲೆಯಾದ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ ಸ್ಥಳ, ದಿಕ್ಕು ಹಾಗೂ ಹಲ್ಲೆ ಬಳಿಕ ಆತ ಸಾವನ್ನಪ್ಪಿದ ಸ್ಥಿತಿ, ಆಸ್ಪತ್ರೆ ನಂತರ ರೇಣುಕಾಸ್ವಾಮಿ ತಲೆ ಮತ್ತು ಕೈಕಾಲು ಯಾವ ದಿಕ್ಕಿಗೆ ತಿರುಗಿತ್ತು? ಎಲ್ಲಾ ವಿಷಗಳನ್ನು ಆರೋಪಿಗಳಿಂದ ವಿಚಾರಣೆ ನಡೆಸಿ, ಸ್ಥಳ ಮಹಜರುಗಳು.
ಆರೋಪಿಗಳ ಸಮ್ಮುಖದಲ್ಲಿ ಘಟನೆಯನ್ನ ಮರುಸೃಷ್ಟಿ ಮಾಡಿದ್ದು, ಬಳಿಕ ಅದರ ವೀಡಿಯೋ ಚಿತ್ರಗಳನ್ನು ಮಾಡಿಕೊಂಡಿದ್ದಾರೆ. ಜೊತೆಗೆ ಹಲ್ಲೆಗೆ ಬಳಸಿದ್ದ ವಸ್ತುಗಳು, ರಕ್ತದ ಕಲೆಗಳು, ಮೃತನ ಕೂದಲು, ಬಟ್ಟೆಯ ತುಂಡುಗಳ ಸಾಕ್ಷ್ಯವನ್ನು ಸಂಗ್ರಹಿಸಲಾಗಿದೆ. ಸ್ಥಳ ಮಹಜರು ಮುಗಿದ ಬಳಿಕ ಮತ್ತೆ ಠಾಣೆಗೆ ಆರೋಪಿಗಳನ್ನು ಕರೆದೊಯ್ದಿದ್ದಾರೆ.
50 ಮೀಟರ್ ವರೆಗೆ ಪ್ರವೇಶ ನಿಷೇಧ : ಸ್ಥಳ ಮಹಜರು ವೇಳೆ ಪಟ್ಟಣಗೆರೆಯ ಜಯಣ್ಣ ಅವರಿಗೆ ಸೇರಿದ್ದ ಶೆಡ್ ಮುಂಭಾಗ 50 ಮೀಟರ್ ವರೆಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.