ಚಿತ್ರದುರ್ಗ ಜೂ. 12 : ಜಿಲ್ಲೆಯ ರೆಡ್ಕ್ರಾಸ್ ಸಂಸ್ಥೆಗೆ ಅತಿ ಶೀಘ್ರದಲ್ಲಿ ನಿವೇಶನವನ್ನು ನೀಡುವ ಭರವಸೆಯನ್ನು ಜಿಲ್ಲಾಧಿಕಾರಿಗಳು, ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ವೆಂಕಟೇಶ್ ನೀಡಿದರು.
ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ರೆಡ್ಕ್ರಾಸ್ ಸಂಸ್ಥೆಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ರೆಡ್ಕ್ರಾಸ್ ಸಂಸ್ಥೆ ಉತ್ತಮವಾದ ಕೆಲಸವನ್ನು ಮಾಡುತ್ತಿದೆ, ನೊಂದವರ ಧ್ವನಿಯಾಗಿ ಅವರ ಕಷ್ಟಗಳಿಗೆ ಸ್ಪಂಧಿಸುತ್ತಿದೆ. ಕರೋನ ಸಮಯದಲ್ಲಿ ಉತ್ತಮವಾದ ಕೆಲಸವನ್ನು ಮಾಡುವುದರ ಮೂಲಕ ಜನ ಮನ್ನಣೆಯನ್ನು ಪಡೆದಿದೆ. ಇಲ್ಲಿ ನಾನು ಎ.ಸಿ.ಯಾದಾಗಿನಿಂದಲೂ ಸಹಾ ನೋಡಿದ್ದೇನೆ, ನಿಮಗೆ ಕಚೇರಿ ಮಾಡಲು ಜಾಗದ ಕೊರತೆ ಇದೆ ಎಂದು ನನಗೆ ಗೊತ್ತಿದೆ ಇದರ ಬಗ್ಗೆ ಇದರ ಬಗ್ಗೆ ನಾನು ಸುಮ್ಮನೇ ಇಲ್ಲ ಜಾಗವನ್ನು ನೋಡಲಾಗುತ್ತಿದೆ ಶೀಘ್ರವಾಗಿ ನಿಮಗೆ ಜಾಗವನ್ನು ನೀಡುವ ಭರವಸೆಯನ್ನು ಜಿಲ್ಲಾಧಿಕಾರಿಗಳು ಸಂಸ್ಥೆಯವರಿಗೆ ನೀಡಿದರು.
ಚಿತ್ರದುರ್ಗ ರಾಜ್ಯದ ಮಧ್ಯ ಭಾಗದಲ್ಲಿ ಇದೆ. ಇಲ್ಲಿ ರಾ,ಹೆ.4 ಮತ್ತು 13 ಹಾದು ಹೋಗುತ್ತದೆ ಅಪಘಾತಗಳು ಸಹಾ ಹೆಚ್ಚಾಗಿ ಆಗುತ್ತದೆ ಅಲ್ಲದೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವವರ ಸಂಖ್ಯೆ ಸಹಾ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಜವಾಬ್ದಾರಿಯ ಸಹಾ ಹೆಚ್ಚಾಗಿದೆ. ಚಿತ್ರದುರ್ಗದಲ್ಲಿ ಈ ಸಂಸ್ಥೆ ಉತ್ತಮವಾಗಿ ಕೆಲಸವನ್ನು ಮಾಡುತ್ತಿದೆ, ಇದಕ್ಕೆ ನಮ್ಮೆಲ್ಲ ಸಹಕಾರ ಇದೆ, ಇನ್ನೂ ಮುಂದೆಯೂ ಸಹಾ ಉತ್ತಮವಾದ ಕೆಲಸವನ್ನು ಮಾಡುವಂತೆ ಸಲಹೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರೆಡ್ಕ್ರಾಸ್ ಸಂಸ್ಥೆಯ ಸಭಾಪತಿ ಶ್ರೀಮತಿ ಗಾಯತ್ರಿ ಶಿವರಾಂ, ರೆಡ್ಕ್ರಾಸ್ ಸಂಸ್ಥೆಗೆ ದೇಶದಲ್ಲಿ ರಾಷ್ಟ್ರಪತಿಗಳು, ರಾಜ್ಯದಲ್ಲಿ ರಾಜ್ಯಪಾಲರು, ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ. ಈ ಮುಂಚೆ ಸಣ್ಣದಾಗಿ ಪ್ರಾರಂಭವಾದ ಈ ಸಂಸ್ಥೆ ಈಗ 220 ದೇಶಗಳಲ್ಲಿ ಇದೆ. 1920ರಲ್ಲಿ ಭಾರತಕ್ಕೆ ಬಂದ ಈ ಸಂಸ್ಥೆ 1921ರಲ್ಲಿ ಕರ್ನಾಟಕಕ್ಕೆ ಬಂತು, ಚಿತ್ರದುರ್ಗದಲ್ಲಿ 2000ರಲ್ಲಿ ಪ್ರಾರಂಭವಾಯಿತು.
ಈಗ ಈ ಸಂಸ್ಥೆಗೆ 25 ವರ್ಷ ಆಚರಣೆಯಲ್ಲಿದೆ, ಆದರೆ ನಮಗೆ ಜಾಗ ಸಮಸ್ಯೆ ಉಂಟಾಗಿದೆ. ಈ ಸಂಸ್ಥೆಗೆ ಸರಿಯಾದ ಜಾಗ ಇಲ್ಲ ನಮಗೆ ಬಂದ ಸಾಮಾನುಗಳನ್ನು ಸಂಗ್ರಹ ಮಾಡಲು ಸಹಾ ಜಾಗದ ಕೊರತೆ ಇದೆ ಈ ಹಿನ್ನಲೆಯಲ್ಲಿ ನಮಗೆ ಉತ್ತಮವಾದ ಜಾಗವನ್ನು ನೀಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ನಮ್ಮ ಈ ಸಮಯದಲ್ಲಿ ಹಲವರು ಆರೋಗ್ಯ, ರಕ್ತದಾನ ಶಿಬಿರಗಳನ್ನು ಮಾಡುವುದರ ಮೂಲಕ ಅಂಗವಿಕಲರಿಗೆ ವಿವಿಧ ರೀತಿಯ ಸಲಕರಣೆಗಳನ್ನು ವಿತರಣೆ ಮಾಡಲಾಗಿದೆ ರಕ್ತದಾನ ಶಿಬಿರಗಳ ಮೂಲಕ ರಕ್ತನಿಧಿ ಕೇಂದ್ರಕ್ಕೆ ರಕ್ತವನ್ನು ಸಂಗ್ರಹ ಮಾಡಿ ನೀಡಲಾಗಿದೆ. ಈ ಉತ್ತಮ ಕೆಲಸಗಳಿಗಾಗಿ ನಮ ಸಂಸ್ಥೆಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಕೋವಿಡ್ ಸಮಯದಲ್ಲಿ 108 ದಿನಗಳ ಕಾಲ ಆಸ್ಪತ್ರೆಗೆ ಬಂದ ರೋಗಿಗಳಿಗೆ ಮತ್ತು ಸಂಬಂಧಿಗಳಿಗೆ ಆಹಾರವನ್ನು ವಿತರಣೆ ಮಾಡಲಾಗಿತ್ತು ಎಂದರು.
ಈ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಹೈಜನಿಕ್ ಕಿಟ್ ಹಾಗೂ ಕೋವಿಡ್ ಸಮಯದಲ್ಲಿ ಮೃತ ಪಟ್ಟ ಓರ್ವ ಕುಟುಂಬಕ್ಕೆ ಹೊಲಿಗೆ ಯಂತ್ರ ಮತ್ತು ರೆಡ್ಕ್ರಾಸ್ ಸಂಸ್ಥೆಯ ಸದಸ್ಯರಿಗೆ ಐ.ಡಿ.ಕಾರ್ಡಗಳನ್ನು ವಿತರಣೆ ಮಾಡಲಾಯಿತು.
ಕಾರ್ಯದರ್ಶಿ ಮಜಹರುಲ್ಲಾ ಉಪ ಸಭಾಪತಿ ಅರುಣ್ ಕುಮಾರ್ ನಿರ್ದೇಶಕರಾದ ಮಹಮದ್ ಆಲಿ, ಕಾರ್ತಿಕ್,ಸುರೇಶ್ ಬಾಬು, ಸಾದಾ ಸುರೇಶ್, ಶಿವರಾಮ್,ಚೇತನ್,ಹನುಮಂತಪ್ಪ ಪೂಜಾರ್. ಸದಸ್ಯರಾದ ಗುರುಮೂರ್ತಿ, ಮಂಜುನಾಥ್ ಭಾಗವತ್, ಸುರೇಶ್ ಬಾಫ್ನ, ಶಂಕರ್,ವೀಣಾ ಜಯರಾಮ್, ರೀನಾ ವೀರಭದ್ರಪ್ಪ , ಮಹಂತಮ್ಮ, ಹನುಮಂತ ರೆಡ್ಡಿ, ಶಿವಣ್ಣ ಇನ್ನಿತರರು ಇದ್ದರು.