ಚಿತ್ರದುರ್ಗ : ರೇಣುಕಾಸ್ವಾಮಿಯನ್ನು ದರ್ಶನ್ ಅಂಡ್ ಗ್ಯಾಂಗ್ ಕೊಲೆ ಮಾಡಿದೆ. ಈ ಕೊಲೆಯ ಆರೋಪದ ಮೇಲೆ ಈಗಾಗಲೇ ದರ್ಶನ್ ಸೇರಿದಂತೆ ಹದಿಮೂರು ಜನರನ್ನು ಬಂಧಿಸಲಾಗಿದೆ. ರೇಣುಕಾಸ್ವಾಮಿ ಕೊಲೆಯಾದ ಬಳಿಕ ಆತ ಪಕ್ಕಾ ದರ್ಶನ್ ಫ್ಯಾನ್ ಎಂದು ಸುದ್ದಿಯಾಗಿತ್ತು. ಪವಿತ್ರಾ ಗೌಡ, ದರ್ಶನ್ ಜೊತೆಗಿನ ಫೋಟೋಗಳನ್ನು ಹಾಕಿದ್ದಕ್ಕೆ ಕೋಪಗೊಂಡು ಕೆಟ್ಟದಾಗಿ ಮೆಸೇಜ್ ಮಾಡಿದ್ದ ಎಂಬ ಮಾತುಗಳು ಇದಾವೆ.
ಆದರೆ ಇದೀಗ ಅವರ ಹೆಂಡತಿಯೇ ನನ್ನ ಗಂಡ ದರ್ಶನ್ ಅಭಿಮಾನಿ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮೃತ ರೇಣುಕಾಸ್ವಾಮಿ ಪತ್ನಿ ಸಹನಾ ಮಾತಮಾಡಿ, ನನ್ನ ಪತಿ ದರ್ಶನ್ ಅಭಿಮಾನಿಯಾಗಿರಲಿಲ್ಲ. ನಾನು ಮದುವೆಯಾಗಿ ಒಂದು ವರ್ಷ ಪೂರೈಸಿದೆ ಅಷ್ಟೆ. ಇದೀಗ ನಾನು ಗರ್ಭಿಣಿಯಾಗಿದ್ದೀನಿ. ಈ ಮಗುವಿನ ಜವಾಬ್ದಾರಿ ಯಾರದು ಎಂದು ಪ್ರಶ್ನೆ ಮಾಡಿದ್ದಾರೆ.
ನನ್ನ ಗಂಡನನ್ನು ಹತ್ಯೆ ಮಾಡಿದ್ದಾರೆ. ಈ ಕೊಲೆಗೆ ಹಾಗೂ ನನಗೆ ನ್ಯಾಯ ಕೊಡಿಸಿ. ಪತಿಯನ್ನು ಕಳೆದುಕೊಂಡಿದ್ದೀನಿ. ಹೀಗೆ ಆಗಬಾರದಿತ್ತು. ನಾನು ಗರ್ಭಿಣಿ. ಇಂತಹ ಸಮಯದಲ್ಲಿ ನನ್ನ ಗಂಡ ಇಲ್ಲ. ನಾನು ಈಗ ಏನು ಮಾಡಲಿ. ಮೊನ್ನೆಯಷ್ಟೇ ಕರೆ ಮಾಡಿ ಮಾತಾಡಿದ್ದರು. ಅದೇ ಕೊನೆಯ ಕರೆ. ನಾನು ಗಂಡನನ್ನು ಕಳೆದುಕೊಂಡಿದ್ದು, ಮುಂದಿನ ನನ್ನ ಜೀವನ ನಿರ್ವಹಣೆ ಹೇಗೆ ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ನನ್ನ ಗಂಡನನ್ನು ನಟ ದರ್ಶನ್ ಅವರು ಕೊಲೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಅವರಿಗೆ ನ್ಯಾಯ ಕೊಡಿಸಲು ಸಾಕಷ್ಟು ಜನ ಮುಂದೆ ಬಂದಿದ್ದಾರೆ. ನನ್ನ ಮಗುವಿಗೆ ಯಾರು ಸಹಾಯ ಮಾಡುತ್ತಾರೆ. ನಮಗೆ ನ್ಯಾಯ ಕೊಡಿಸಿ. ನನ್ನ ಗಂಡನ ಸಾವಿಗೆ ನ್ಯಾಯ ಕೊಡಿಸಿಎಂದು ಮೃತನ ಪತ್ನಿ ಸಹನಾ ಅಂಗಲಾಚಿದ್ದಾರೆ.