Breaking
Wed. Dec 25th, 2024

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ  ಅವರು ತಮ್ಮ ಇನ್‌ಸ್ಟಾಗ್ರಾಮ್  ಖಾತೆಯನ್ನೇ ಡಿಲೀಟ್….!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ  ಅವರು ತಮ್ಮ ಇನ್‌ಸ್ಟಾಗ್ರಾಮ್  ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ. ಕಿಡ್ನಾಪ್ ಹಾಗೂ ಮರ್ಡರ್ ಪ್ರಕರಣದಲ್ಲಿ ಬಂಧನವಾಗುತ್ತಿದ್ದಂತೆಯೇ ದರ್ಶನ್  ಅವರನ್ನು ಅನ್‌ಫಾಲೋ ಮಾಡಿ, ಡಿಪಿ ರಿಮೂವ್‌ ಮಾಡಿದ್ದರು. ಆದರೆ ಇಂದು ವಿಜಯಲಕ್ಷ್ಮಿ ಇನ್ ಸ್ಟಾಗ್ರಾಂ ಖಾತೆಯಿಂದಲೇ ಹೊರ ನಡೆದಿದ್ದಾರೆ. ಅಂದರೆ ಇನ್ಸ್ಟಾ ಖಾತೆಯನ್ನು ಅವರು Dactivate ಮಾಡಿದ್ದಾರೆ.
ಬಳಕೆದಾರರು ಇನ್ಸ್ಟಾದಲ್ಲಿ ಮೆಸೇಜ್ ಮಾಡಿ ನಿಂದನೆ ಮಾಡುತ್ತಾ ಇದ್ದರಿಂದ ಬೇಸರಗೊಂಡು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ವಿಜಯಲಕ್ಷ್ಮಿ ಅವರು Dactivate ಮಾಡಲು ಕಾರಣ ಏನು ಎಂಬುದು ತಿಳಿದುಬಂದಿಲ್ಲ .
ಏನಿದು ಪ್ರಕರಣ..? : ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದನೆಂದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಡಿ ಬಾಸ್‌ ಗ್ಯಾಂಗ್‌ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಸುಮನಹಳ್ಳಿ ಬಳಿ ಮೋರಿಗೆ ಎಸೆದಿದ್ದರು. ಇದಾದ ಬಳಿಕ ಇಬ್ಬರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದರು. ಇವರನ್ನು ವಿಚಾರಣೆ ನಡೆಸಿದಾಗ ಕರಾಳ ಸತ್ಯ ಬಯಲಾಗಿದೆ.
ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಹಾಗೂ ಗೆಳತಿ ಪವಿತ್ರಾ ಗೌಡ ಹೆಸರು ಕೇಳಿ ಬಂತು. ಕೂಡಲೇ ದರ್ಶನ್ ಅವರನ್ನು ಮೈಸೂರಿನಲ್ಲಿಯೇ ಬಂಧಿಸಿ ಬೆಂಗಳೂರಿಗೆ ಕರೆತರಲಾಯಿತು. ಇತ ಪವಿತ್ರ ಗೌಡರನ್ನು ಬಂಧಿಸಲಾಯಿತು. ಸದ್ಯ ಪಕ್ರಕರಣ ಸಂಬಂಧ ಒಟ್ಟು 14 ಮಂದಿಯನ್ನು ಬಂಧಿಸಿದ್ದು, ಸ್ಥಳ ಮಹಜರು ಪ್ರಕ್ರಿಯೆ ನಡೆಸಲಾಗುತ್ತಿದೆ.

Related Post

Leave a Reply

Your email address will not be published. Required fields are marked *