ಬೆಂಗಳೂರು, ಜೂನ್ 13 : ಕಳೆದ ಕೆಲವು ವಾರಗಳಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಹೆಚ್ಚಾಗುತ್ತಿರುವ ತರಕಾರಿ ಬೆಲೆ ಈ ವಾರ ಗಗನಕ್ಕೇರಿದೆ. ಇದೀಗ ಇದರ ಜೊತೆಗೆ ದಿನಸಿ ವಸ್ತುಗಳ ಬೆಲೆಯೂ ತೀವ್ರವಾಗಿ ಏರಿಕೆಯಾಗಿದೆ. ಈ ಹಿಂದೆ 50 ರೂ. ಅಸುಪಾಸಿನಲ್ಲಿ ಸಿಗುತ್ತಿದ್ದ ತರಕಾರಿಗಳು ಇದೀಗ 100 ರೂ. ಗಡಿ ದಾಟಿದ್ದು, ತರಕಾರಿ ತೆಗೆದುಕೊಳ್ಳಬೇಕು ಎಂದರೆ ಯೋಚನೆ ಮಾಡಬೇಕಾದ ಅನಿವಾರ್ಯತೆ ಶುರುವಾಗಿದೆ.
ಸದ್ಯ ರಾಜಾಧಾನಿಯಲ್ಲಿ ಹೆಚ್ಚು ಮಳೆಯಾಗುವುದರಿಂದ ಬಂದಂತಹ ಬೆಳೆಯೂ ಹಾಳಾಗುತ್ತಿದೆ. ಜೊತೆಗೆ ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ತರಕಾರಿಗಳು ಸಿಗದ ಪರಿಣಾಮ ತರಕಾರಿ ಬೆಲೆ ಏರಿಕೆಯಾಗಿದೆ.
ಕಳೆದ ತಿಂಗಳು ಬಿಸಿಲಿನ ಪ್ರಮಾಣ ಜಾಸ್ತಿ ಕಾರಣಕ್ಕೆ ತರಕಾರಿಗಳ ಬೆಲೆ ಜಾಸ್ತಿಯಾಗಿತ್ತು. ಇದೀಗ ಮಳೆ ಎಂಬ ಕಾರಣಕ್ಕೆ ತರಕಾರಿಗಳ ಬೆಲೆ ಜಾಸ್ತಿಯಾಗಿದೆ. ಸದ್ಯ ಕೇವಲ ಕರ್ನಾಟಕದ ಜಿಲ್ಲೆಗಳಿಂದ ಮಾತ್ರ ತರಕಾರಿ ಪೂರೈಕೆಯಾಗುತ್ತಿದೆ. ಜೊತೆಗೆ ಮಳೆಗೆ ಟೊಮೆಟೋ ಹಾಗೂ ಈರುಳ್ಳಿ ಸರಿಯಾಗಿ ಫಸಲು ಬರುತ್ತಿಲ್ಲ.
ಯಾವ ತರಕಾರಿಗೆ ಎಷ್ಟು ಬೆಲೆ?
ತರಕಾರಿ ಹಿಂದಿನ ಬೆಲೆ ಇಂದಿನ ಬೆಲೆ
ಕ್ಯಾರೆಟ್ 80 82
ಬೀನ್ಸ್ 80 80
ನವಿಲುಕೋಸು 60 102
ಬದನೆಕಾಯಿ 30 30
ದಪ್ಪ ಮೆಣಸಿನಕಾಯಿ 40 65
ಬಟಾಣಿ 140 120
ಬೆಂಡೆಕಾಯಿ 60 30
ಟೊಮೆಟೊ. 30 50
ಆಲೂಗಡ್ಡೆ 30 40
ಹಾಗಲಕಾಯಿ 60 50
ಸೋರೆಕಾಯಿ 40 30
ಬೆಳ್ಳುಳ್ಳಿ 300 180
ತರಕಾರಿಗಳಷ್ಟೇ ದಿನಸಿ ಪದಾರ್ಥಗಳ ಬೆಲೆ ಕೂಡ ಏರಿಕೆಯಾಗಿದೆ. ಒಂದಹ ಕೆಜಿ ತೊಗರಿ ಬೆಳೆಗೆ ಹೋಲ್ ಸೇಲ್‌ನಲ್ಲಿ 195 ರೂ. ಇದ್ದರೆ, ಚಿಲ್ಲರೆ ಅಂಗಡಿಗಳಲ್ಲಿ 220 ರೂ. ಇದೆ. ಇನ್ನು ಕಡ್ಲೆ ಬೇಳೆ ಕೆಜಿ 72 ರೂ. ಇತ್ತು.ಈಗ 110 ರೂ. ಆಗಿದೆ. ಸ್ಟೀಮ್ ಅಕ್ಕಿ 48 ರೂ. ಇದ್ದುದು ಈಗ 58 ರೂ. ಆಗಿದ್ದು ಹೊಸ ಸ್ಟಾಕ್ ಇಲ್ಲದ ಕಾರಣ ಬೆಲೆ, ಅಕ್ಕಿ ಬೆಲೆ ಜಾಸ್ತಿಯಾಗಿದೆ. ಕೆಜಿ ಚಿಕನ್ನಷ್ಟೇ ಬೆಳೆಗಳ ಬೆಲೆ ಜಾಸ್ತಿಯಾಗಿದೆ.