ಚಳ್ಳಕೆರೆ, ಜೂ.13 : ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಜೀವನಶೈಲಿಯಲ್ಲಿ ಬದಲಾವಣೆ ಕಾಣುತ್ತಿದೆ ಎಂದು ತಮ್ಮ ಆರೋಗ್ಯದ ಕಡೆ ಗಮನಹರಿಸದೆ ನಿರ್ಲಕ್ಷ ವಹಿಸುವ ಮೂಲಕ ಜೀವನಶೈಲಿಯಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ಸಾರ್ವಜನಿಕ ಆಸ್ಪತ್ರೆಯ ಕೀಲು ಮೂಳೆ ತಜ್ಞ ಡಾ. ವೆಂಕಟೇಶ್ ಅಭಿಪ್ರಾಯ ಪಟ್ಟರು.
ನಗರದ ಸುರಕ್ಷಾ ಪಾಲಿನಿಕ್ ಆಸ್ಪತ್ರೆ ಹಾಗೂ ನಗರಸಭೆ ನೂತನ ನಾಮನಿರ್ದೇಶನ ಸದಸ್ಯರ ಸಹಭಾಗಿತ್ವದಲ್ಲಿ ಉಚಿತ ಮೂಳೆ ಸಾಂದ್ರಿತ ಪರೀಕ್ಷೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ರೋಗವು ಹೆಚ್ಚಿನ ವಯಸ್ಸಿನ ಮಕ್ಕಳಲ್ಲಿ ಮತ್ತು ವೃದ್ಧಾಪ್ಯ ವಯಸ್ಸಿನ ಸ್ತ್ರೀಯರಲ್ಲಿ ಕಂಡುಬರುತ್ತದೆ.
ತಾಯಿ ಮಗುವಿಗೆ ಸ್ಥನ್ಯ ಪಾನ ಮಾಡಿಸದೆ ಇದ್ದಾಗ ರೋಗಕ್ಕೆ ತುತ್ತಾಗಿ ಅಂಗವಕಲ್ಯಾಣ ಆಗುವ ಪರಿಸ್ಥಿತಿಯಲ್ಲಿ ವೃದ್ಧಾಪ್ಯದಲ್ಲಿ ಸ್ತ್ರೀಯರಿಗೆ ಹಾರ್ಮೋನ್ ಗಳ ವ್ಯತ್ಯಯದಿಂದಾಗಿ ಈ ಕೀಲು ಮೂಳೆಗಳು ಸವೆದು ಮೂಳೆಯ ಸಾಂದ್ರ ರೋಗಕ್ಕೆ ಈ ರೋಗವನ್ನು ನಿವಾರಿಸಲು ಕಾಲಕಾಲಕ್ಕೆ ಭೇಟಿ ನೀಡುವ ಮೂಲಕ ಚಿಕಿತ್ಸೆ ನೀಡಲಾಗುವುದು.
ಇಂದು ಈ ಮೂಳೆ ಸುರೇಂದ್ರಿತ ಪರೀಕ್ಷೆಯನ್ನು ನೇತಾಜಿ ಸ್ನೇಹ ಬಳಗ ಹಾಗೂ ಕ್ಷಾಪಾ ಪಾಲಿ ಕ್ಲಿನಿಕ್ ವತಿಯಿಂದ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾರದ ಆಶ್ರಮದ ಪೂಜ್ಯ ತ್ಯಾಗಮಯಿ ಮಾತಾಜಿ ಬಡವರ್ಗದ ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದರಿಂದ ಹೆಚ್ಚಿನ ರೋಗವನ್ನು ವಾಸಿ ಮಾಡಿಕೊಳ್ಳದೆ ಬಡವರು ದೊರೆಯುವ ಜನರು ಅನಾರೋಗ್ಯಕ್ಕೆ ಒಳಗಾಗುವ ಸ್ಥಿತಿಗೆ ತಲುಪುತ್ತಿದ್ದಾರೆ ಇಂತಹ ಸನ್ನಿವೇಶದಲ್ಲಿ ನೇತಾಜಿ ಸ್ನೇಹ ಬಳಗ ಹಾಗೂ ಸುರಕ್ಷಾ ಪಾಲಿಚೈನಿಕ್ ಅವರು ಆಯೋಜಿಸಿದ್ದ ಮೂಳೆಯ ಸಾಂದ್ರತೆಯ ಪರೀಕ್ಷಾ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ.
ಈ ಸಂದರ್ಭದಲ್ಲಿ ನಗರ ನಾಮನಿರ್ದೇಶಕ ಸದಸ್ಯ ನೇತಾಜಿ ಆರ್ ಪ್ರಸನ್ನ ಮಾಜಿ ನಗರಸಭಾ ಸದಸ್ಯ ಆರ್ ಪ್ರಸನ್ನ ಕುಮಾರ್ ಫರೀದ್ ಖಾನ್ ಕಂಟ್ರಾಕ್ಟರ್ ನಾಗೇಂದ್ರ ಬೋಜರಾಜ ನಗರಸಭೆಯ ಆರೋಗ್ಯ ನಿರೀಕ್ಷಕಿ ಗೀತಾ ಸರಸ್ವತಿ ರಾಜಮ್ಮ ಡಾ.ಭಾರ್ಗವಿ ಸೇರಿದಂತೆ ಇನ್ನಿತರರು.