Breaking
Wed. Dec 25th, 2024

ಥ್ರಿಲ್ಲರ್ ಅಂಶಗಳನ್ನು ಹೊಂದಿರುವ ‘ಕಾದಾಡಿ’ ಸಿನಿಮಾದಲ್ಲಿ ಶಶಿಕುಮಾರ್ ಪುತ್ರ ಆದಿತ್ಯ ಮುಖ್ಯ ಪಾತ್ರ….!

ಕನ್ನಡ ಚಿತ್ರರಂಗದಲ್ಲಿ ‘ಸುಪ್ರೀಂ ಹೀರೋ’ ಎಂದು ಗುರುತಿಸಿಕೊಂಡವರು ಶಶಿಕುಮಾರ್. ಈಗ ಶಶಿಕುಮಾರ್  ಪುತ್ರ ಅಕ್ಷಿತ್ ಶಶಿಕುಮಾರ್ ಕೂಡ ಹೀರೋ ಆಗಿ ಸಕ್ರಿಯರಾಗಿದ್ದಾರೆ. ಅಲ್ಲದೇ ಆದಿತ್ಯ ಶಶಿಕುಮಾರ್  ಎಂಬ ಹೆಸರಿನಿಂದ ಅವರು ಸಿನಿಜರ್ನಿ ಮುಂದುವರಿಸಿದ್ದಾರೆ. ಅದಿತ್ಯ ಶಶಿಕುಮಾರ್ ಅವರು ಈಗ ‘ಕಾದಾಡಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ವಿಶೇಷ ಏನೆಂದರೆ ಬಹುಭಾಷೆಯಲ್ಲಿ ಈ ಸಿನಿಮಾ ಬರಲಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಈ ಸಿನಿಮಾ ಸಿದ್ದವಾಗಿದೆ. ಈ ಸಿನಿಮಾಗೆ ಸಖತ್ ಪ್ರಚಾರ ನೀಡಲಾಗುತ್ತಿದೆ. ಇತ್ತೀಚೆಗಷ್ಟೇ ‘ಕಾದಾಡಿ’  ಸಿನಿಮಾದ ಐಟಂ ಸಾಂಗ್ನ ಲಿರಿಕಲ್ ವಿಡಿಯೋ ರಿಲೀಸ್ ಮಾಡಲಾಗಿದೆ. ಈ ಸಿನಿಮಾಗೆ ಸತೀಶ್ ಮಾಲೆಂಪಾಟಿ ನಿರ್ದೇಶನ ಮಾಡಿದ್ದಾರೆ.
‘ಅರುಣಂ ಫಿಲ್ಮ್ಸ್’ ಮೂಲಕ ‘ಕಾದಾಡಿ’ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಕೃಷ್ಣ ಸಾಹಿತ್ಯ ಬರೆದಿರುವ ‘ನೂರು ಪುಟದ ಜೀವನ.. ಒಂದು ಏಳೆಯ ಕಾಗದ.. ಬೇಕಾದ್ದು ಬರೆದುಕೋ, ನಿಂದೇ ಜೀವನ. ಸರಿ-ತಪ್ಪು ತಿಳಿದುಕೋ.. ತಿಳಿದ ಮೇಲೆ ಮರೆತು ತಪ್ಪು ಮಾಡಿದರೆ ಜನ್ಮ ಪಾವನ.. ಒಂದೇ ಒಂದೇ ಚಾನ್ಸ್ ಗುರು ಮತ್ತೆ ಮತ್ತೆ ಬಾರದು..’ ಎಂದು ಶುರುವಾಗುವ ಈ ಹಾಡಿಗೆ ಅನನ್ಯಾ ಭಟ್ ಧ್ವನಿ ನೀಡಿದ್ದಾರೆ.
ಈ ಹಾಡಿನಲ್ಲಿ ಆದಿತ್ಯ ಶಶಿಕುಮಾರ್ ಜೊತೆ ಬಾಂಬೆ ಬೆಡಗಿ ಸೋನಿ ಚೇರಿಸ್ಟ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಸಖತ್ ಕಲರ್ಫುಲ್ ಆದಂತಹ ಸೆಟ್ನಲ್ಲಿ ಶೂಟಿಂಗ್ ಮಾಡಲಾಗಿದೆ. ‘ಕಾದಾಡಿ’ ಸಿನಿಮಾದ ಆರು ಹಾಡುಗಳಿಗೆ ಭೀಮ್ಸ್ ಸಿಸಿರೊಲಿಯೋ ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ಆದಿತ್ಯ ಶಶಿಕುಮಾರ್ ಅವರೊಂದಿಗೆ ಲಾವಣ್ಯ ಸಾಹುಕಾರ, ಚಾಂದಿನಿ ತಮಿಳರಸನ್, ಪೋಸಾನಿ, ಮಾರಿಮುತ್ತು, ರವಿಕಾಳೆ, ಪ್ರೇಮ್‌ ಮನೋಹರ್, ಶ್ರವಣ್‌ ರಾಘವೇಂದ್ರ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.
ಡಿ. ಯೋಗಿ ಪ್ರಸಾದ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಅರ್ಜುನ್‌ ಸೂರಿಸೆಟ್ಟಿ ಅವರ ಕಲಾ ನಿರ್ದೇಶನ ಈ ಸಿನಿಮಾಗೆ ಇದೆ. ಪ್ರಕಾಶ್‌ ತೋಟ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಜ್‌ ಪಿಡಿ, ರಾಜ್‌ಕೃಷ್ಣ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಚಿಕ್ಕಮಗಳೂರು, ಗೋವಾ, ಹೈದರಾಬಾದ್, ಚೆನ್ನೈ ಮುಂತಾದ ಕಡೆ ಶೂಟಿಂಗ್ ಮಾಡಲಾಗಿದೆ. ರಿಲೀಸ್ ಡೇಟ್ ಬಗ್ಗೆ ಸದ್ಯದಲ್ಲೇ ಮಾಹಿತಿ ಹೊರಬೀಳಲಿದೆ. ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ‘ಕಾದಾಡಿ’ ಚಿತ್ರದಲ್ಲಿ ಶಶಿಕುಮಾರ್ ಪುತ್ರ ಆದಿತ್ಯ ಮುಖ್ಯ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಹೊಸ ಹಾಡು ‘ಆದಿತ್ಯ ಮ್ಯೂಸಿಕ್’ ಮೂಲಕ ಬಿಡುಗಡೆ ಆಗಿದೆ.

Related Post

Leave a Reply

Your email address will not be published. Required fields are marked *