ಬೆಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲು ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಬಿಎಸ್‌ವೈಗೆ ಬಂಧನ ಭೀತಿ ಎದುರಾಗಿದೆ. ಅಷ್ಟಕ್ಕೂ ಏನಿದು ಮಾಜಿ ಸಿಎಂ ವಿರುದ್ಧದ ಪೋಕ್ಸೊ ಕೇಸ್? ಇಲ್ಲಿದೆ ನೋಡಿ ಟೈಮ್‌ಲೈನ್..
ಫೆಬ್ರವರಿ 2 ನ್ಯಾಯ ಕೇಳಿ ಬಿಎಸ್‌ವೈ ಮನೆಗೆ ಸಂತ್ರಸ್ತೆ, ತಾಯಿ ಭೇಟಿ.
ಮಾರ್ಚ್ 14 ಸದಾಶಿವನಗರ ಠಾಣೆಯಲ್ಲಿ ದೂರು ದಾಖಲು
ಬಿಎಸ್‌ವೈ ವಿರುದ್ಧ ಪೋಕ್ಸೊ ಕೇಸ್‌ನಡಿ ಎಫ್‌ಐಆರ್ ದಾಖಲು
ಎಸಿಎಂಎಂ 25ನೇ ನ್ಯಾಯಾಲಯದ ಜಡ್ಜ್ ಅವರಿಂದ ಸಂತ್ರಸ್ತೆಯ ಹೇಳಿಕೆ ದಾಖಲು
ಅದೇ ದಿನ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿದ್ದ ಡಿಜಿ
ಏಪ್ರಿಲ್ 12 ವಿಚಾರಣೆಗೆ ಹಾಜರಾಗುವಂತೆ ಬಿಎಸ್‌ವೈಗೆ ಸಿಐಡಿ ನೋಟಿಸ್
ವಿಚಾರಣೆಗೆ ಹಾಜರಾಗಿ ಧ್ವನಿ ಸ್ಯಾಂಪಲ್ ನೀಡಿದ್ದ ಬಿಎಸ್‌ವೈ ಮೇ 27
ಖಾಸಗಿ ಆಸ್ಪತ್ರೆಯಲ್ಲಿ ಸಂತ್ರಸ್ತೆಯ ತಾಯಿ, ದೂರುದಾರೆ ಸಾವು
ತಾಯಿ ಸಾವಿನ ಬಳಿಕ ಸಂತ್ರಸ್ತೆ ಸಹೋದರನಿಂದ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ
ಹೈಕೋರ್ಟ್‌ಗೆ ಅರ್ಜಿ ಬೆನ್ನಲ್ಲೇ ಜೂ.12 ರಂದು ಬಿಎಸ್‌ವೈಗೆ ನೋಟಿಸ್
ವಿಚಾರಣೆಗೆ ಹಾಜರಾಗದ ಹಿನ್ನೆಲೆ ಅರೆಸ್ಟ್ ವಾರೆಂಟ್ ಕೋರಿ ಸಿಐಡಿ ಅರ್ಜಿ