ದೆಹಲಿ : ದೆಹಲಿ ಮೆಟ್ರೋದಲ್ಲಿ ಅಶ್ಲೀಲ ವರ್ತನೆಯ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿದೆ. ಇದೀಗ ರೈಲಿನಲ್ಲೂ ಜೋಡಿಯೊಂದು ಅಶ್ಲೀಲವಾಗಿ ವರ್ತಿಸಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ
ಕಳೆದ ಕೆಲವು ದಿನಗಳಿಂದ ಮೆಟ್ರೋದಲ್ಲಿ, ಬೈಕ್ ನಲ್ಲಿ ಅಸಭ್ಯವಾಗಿ ವರ್ತಿಸುತ್ತಿರುವ ಜೋಡಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿತ್ತು. ಇದೀಗ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ಜೋಡಿಯೊಂದು ಸಣ್ಣ ಮಕ್ಕಳ ಎದುರೇ ರೈಲಿನಲ್ಲಿ ಮುದ್ದಾಡುತ್ತಾ ಸಾಗಿರುವುದು ವೈರಲ್ ಆಗಿದೆ. ಕೆಲವು ದಿನಗಳಿಂದ ಮೆಟ್ರೋದಲ್ಲಿ, ಬೈಕ್ ನಲ್ಲಿ ಅಸಭ್ಯವಾಗಿ ವರ್ತಿಸುತ್ತಿರುವ ಜೋಡಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿತ್ತು.
ಇದೀಗ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ಜೋಡಿಯೊಂದು ಸಣ್ಣ ಮಕ್ಕಳ ಎದುರೇ ರೈಲಿನಲ್ಲಿ ಮುದ್ದಾಡುತ್ತಾ ಸಾಗಿರುವುದು ವೈರಲ್ ಆಗಿದೆ. ಸ್ಲೀಪರ್ ಕೋಚ್‌ನಲ್ಲಿ ದಂಪತಿ ಮುದ್ದಾಡುತ್ತಿದ್ದಾಗ ರೈಲಿನ ಟಿಕೇಟ್ ಪರೀಕ್ಷಿಸಲು ಪರೀಕ್ಷಕರು ಅಲ್ಲಿಗೆ ಬಂದಿದ್ದಾರೆ. ಅವರೊಂದಿಗೆ ಮಾತನಾಡುತ್ತಿದ್ದರೂ ದಂಪತಿ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಎಲ್ಲರ ಉಪಸ್ಥಿತಿಯಲ್ಲಿಯೂ ಪರಸ್ಪರ ಮುದ್ದಾಡುತ್ತಿದ್ದರು. ಇದು ಮಕ್ಕಳು ಸೇರಿದಂತೆ ಇತರ ಪ್ರಯಾಣಿಕರಿಗೂ ಮುಜುಗರ ಉಂಟು ಮಾಡುವಂತಿತ್ತು.
ಈ ವಿಡಿಯೋ ಯಾವಾಗ ಮತ್ತು ಎಲ್ಲಿ ತೆಗೆದಿರುವುದೆಂದು ತಿಳಿದು ಬಂದಿಲ್ಲ. ಈ ಕುರಿತು ಸಾಕಷ್ಟು ನೆಟ್ಟಿಗರು ಕಾಮೆಂಟ್ ಕೂಡ ಮಾಡಿದ್ದಾರೆ. ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 2.6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿರುವ ಈ ವಿಡಿಯೋ ನೋಡಿ ಸಾಕಷ್ಟು ನೆಟ್ಟಿಗರು ಟೀಕಿಸಿದ್ದಾರೆ.
ಒಬ್ಬ ಬಳಕೆದಾರ, ರೈಲಿನಲ್ಲಿ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಇನ್ನೊಬ್ಬರು ಇದು ಜಾಸ್ತಿಯಾಯಿತು, ನಾಚಿಕೆ ಎನ್ನುವುದೇ ಇಲ್ಲ ಎಂದು ತಿಳಿಸಿದ್ದಾರೆ. ಏಪ್ರಿಲ್‌ನಲ್ಲಿ ವಿಮಾನದಲ್ಲಿ ಜೋಡಿಯೊಂದು ಆಸನದಲ್ಲಿ ಕುಳಿತು ಮುದ್ದಾಡಿದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಮಾನ ಹಾರಾಟದ 4 ಗಂಟೆಗಳ ಕಾಲ ಜೋಡಿಯು ಆಲಿಂಗನದಲ್ಲಿದ್ದು ಸಾಕಷ್ಟು ನೆಟ್ಟಿಗರ ಟೀಕೆಗೆ ಗುರಿಯಾಗಿತ್ತು.