Breaking
Thu. Dec 26th, 2024

ಮುಸ್ಲಿಂ ದಂಪತಿ ಮಗುವಿಗೆ ‘ಮಹಾಲಕ್ಷ್ಮಿ’ ಎಂದು ಹಿಂದೂ ದೇವರ ಹೆಸರು…..!

ಚಲಿಸುತ್ತಿದ್ದ ರೈಲಿನಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ ʼಮಹಾಲಕ್ಷ್ಮಿ ʼ ಎಂದು ನಾಮಕರಣ ಮಾಡಿದ್ದಾರಂತೆ ಎನ್ನುವ ಕುರಿತು ಸುದ್ದಿಯೊಂದು ವೈರಲ್ ಆಗಿದೆ.
ಜೂನ್ 6ರಂದು ಕೋಲ್ಹಾಪುರ-ಮುಂಬೈ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ನಲ್ಲಿ ಮೀರಾ ರೋಡ್ ನ ಫಾತಿಮಾ ಖಾತುನ್ ಎಂಬ 31 ವರ್ಷದ ಗರ್ಭಿಣಿ ಪ್ರಯಾಣಿಸುತ್ತಿದ್ದರು. ಆ ವೇಳೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವಿಚಾರ ಮಹಿಳೆ ತನ್ನ ಪತಿಗೆ ತಿಳಿಸಿದ್ದಾಳೆ ಮತ್ತು ನೋವು ಹೆಚ್ಚಾದ ಕಾರಣ ರೈಲಿನಲ್ಲಿರುವ ಶೌಚಾಲಯಕ್ಕೆ ತೆರಳಿದ್ದಾಳೆ. ಬಳಿಕ ರೈಲು ಲೋನಾವಾಲಾ ದಾಟಿದ ನಂತರ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ರೈಲಿನಲ್ಲಿದ್ದ ಇತರ ಮಹಿಳಾ ಪ್ರಯಾಣಿಕರು ಆಕೆಗೆ ಸಹಾಯ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಈ ಬಗ್ಗೆ ಮಹಿಳೆಯ ಪತಿ ತಯ್ಯಬ್ ಕರ್ಜಾತ್ ಸರ್ಕಾರಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ತಾಯಿ ಮಗುವನ್ನು ರೈಲಿನಿಂದ ಕೆಳಗಿಳಿಸಿ ಹತ್ತಿರವಿದ್ದ ಉಪಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ಸಿಬ್ಬಂದಿಗಳು ತಾಯಿ, ಮಗುವಿಗೆ ಅಗತ್ಯವಿರುವ ಚಿಕಿತ್ಸೆ ನೀಡಿ ಮೂರು ದಿನಗಳ ನಂತರ ಡಿಸ್ಚಾರ್ಜ್ ಮಾಡಿದ್ದಾರೆ. ನಂತರ ಆ ಮುಸ್ಲಿಂ ದಂಪತಿ ಮಗುವಿಗೆ ‘ಮಹಾಲಕ್ಷ್ಮಿ’ ಎಂದು ಹಿಂದೂ ದೇವರ ಹೆಸರನ್ನು ಇಟ್ಟು ಕುತೂಹಲ ಮೂಡಿಸಿದ್ದಾರೆ.
ಈ ಬಗ್ಗೆ ಮಗುವಿನ ತಂದೆ ತಯ್ಯಬ್ ಕರ್ಜಾತ್ ಅವರು ಪ್ರತಿಕ್ರಿಯಿಸಿ ತಿರುಪತಿಯಿಂದ ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪ್ರಯಾಣಿಸಿದ ಕೆಲವು ಸಹ ಪ್ರಯಾಣಿಕರು ತನ್ನ ಮಗಳು ಈ ರೈಲಿನಲ್ಲಿ ಹುಟ್ಟಿದ್ದು, ದೇವಿಯ ದರ್ಶನ ಪಡೆದಂತೆ ಆಯಿತು ಎಂದು ಹೇಳಿದರಂತೆ. ಹಾಗಾಗಿ ತಾನು ಮಗುವಿಗೆ ಈ ಹೆಸರಿಟ್ಟೆ ಎಂದು ತಿಳಿಸಿದ್ದಾರೆ

Related Post

Leave a Reply

Your email address will not be published. Required fields are marked *